ಪಡಿತರದಲ್ಲಿ ಕರಾವಳಿ ಜನರಿಗೆ ಸಿಗುತ್ತೆ ಕೆಂಪು ಕುಚಲಕ್ಕಿ!

ಮಂಗಳೂರು, ಮೇ 18: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಭಾಗದ ಜನ ಊಟಕ್ಕೆ ಬಳಸುವ ಕೆಂಪು ಕುಚಲಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ಪೂರೈಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Ad Widget ... ..

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದ್ದು, ಕೆಂಪು ಕುಚ್ಚಲಕ್ಕಿಯನ್ನು ಸ್ಥಳೀಯ ಗಿರಣಿಗಳ ಮೂಲಕ ಸಂಸ್ಕರಿಸಿ ಪಡಿತರ ಅಂಗಡಿಗಳ ಮೂಲಕ ಗುಣಮಟ್ಟದ ಅಕ್ಕಿ ವಿತರಿಸಲು ಸರ್ಕಾರ ಅಗತ್ಯ ಯೋಜನೆ ರೂಪಿಸುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಪ್ರತಿ ತಿಂಗಳು 1 ಲಕ್ಷ ಕ್ವಿಂಟಲ್ ಕೆಂಪು ಕುಚಲಕ್ಕಿ ಅಗತ್ಯವಿದ್ದು, ಅವುಗಳ ಉತ್ಪಾದನೆಗೆ 16ರಿಂದ 18 ಲಕ್ಷ ಕ್ವಿಂಟಾಲ್ ಭತ್ತದ ಅವಶ್ಯಕತೆ ಇದೆ ಎಂದರು. ಇದಕ್ಕಾಗಿ ಬೆಳಗಾವಿ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಮೈಸೂರು ಜಿಲ್ಲೆಗಳಿಂದ ಗುಣಮಟ್ಟದ ಭತ್ತ ಖರೀದಿಸಲಾಗುವುದು ಎಂದರು.

Ad Widget

ಸಭೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡಗಿ ಕರಾವಳಿ ಜಿಲ್ಲೆಗೆ ಕೆಂಪು ಕುಚಲಕ್ಕಿ ಗೆ ಭತ್ತದ ತಳಿಗೆ ಸಬ್ಸಿಡಿ ನೀಡಲು ಕೇಂದ್ರ ಸರಕಾರದ ಅನುಮೋದನೆಗೆ ರಾಜ್ಯ ಆಹಾರ ನಿಗಮ ಪ್ರಯತ್ನ ಮಾಡಲಿದೆ ಎಂದರು.

Leave a Comment

Your email address will not be published. Required fields are marked *