ಸಮಗ್ರ ನ್ಯೂಸ್: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಸೀಬೆ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ಮಾ.17ರ ಸಂಜೆ ನಡೆದಿದೆ. ಎಡಮಂಗಲ ಸಮೀಪದ ದೋಳ್ಪಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ.
ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಉಲ್ಲಾಸ್, ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಗೆ ಬಂದ ಬಳಿಕ ಮನೆ ಸಮೀಪ ಇದ್ದ ಸೀಬೆ ಮರದಿಂದ ಹಣ್ಣು ಕೊಯ್ಯಲು ಹತ್ತಿದ್ದು ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ತಲೆ ಭಾಗಕ್ಕೆ ಏಟಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.






