ಸಮಗ್ರ ನ್ಯೂಸ್ ಡೆಸ್ಕ್: ಮಸೀದಿಗಳ ಧ್ವನಿ ವರ್ಧಕ ಬಳಕೆಗೆ ಸುಪ್ರೀಂ ಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಅನೇಕ ಕಡೆಗಳಲ್ಲಿ ಬ್ರೇಕ್ ಹಾಕಲಾಗಿದ್ದು, ಅದರ ಮುಂದುವರಿದ ಭಾಗವಾಗಿ ರಾಜ್ಯ ಸರ್ಕಾರ ವಿವಿಧ ದೇವಸ್ಥಾನಗಳಲ್ಲಿನ ಗಂಟೆ, ಜಾಗಟೆ, ಧ್ವನಿ ವರ್ಧಕ ಬಳಸದಂತೆ ನಿರ್ಬಂಧ ವಿಧಿಸಿದೆ.
ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿದ್ದು, ದೇವಸ್ಥಾನಗಳಲ್ಲಿ ನಿಗಧಿತ ಡೆಸಿಬಲ್ ಶಬ್ದಕ್ಕಿಂತ, ಹೆಚ್ಚಿನ ಶಬ್ದ ಹೊರಸೂಸುವಂತ ಗಂಟೆ, ಜಾಗಟೆ, ಧ್ವನಿವರ್ಧಕ ಬಳಸದಂತೆ ಸೂಚಿಸಿದೆ.
ದೇವಸ್ಥಾನಗಳಲ್ಲಿನ ಮಂಗಳಾರತಿ ಸಂದರ್ಭದಲ್ಲಿ ದೊಡ್ಡ ಮಟ್ಟದ ಗಂಟೆ ಶಬ್ದಗಳನ್ನು ಮಾಡಲಾಗುತ್ತಿದ್ದು, ಡಮರುಗ ಸೇರಿದಂತೆ ಇನ್ನಿತರ ಸಾಧನಗಳ ಮೂಲಕ ಶಬ್ದ ಹೊರಡಿಸಲಾಗುತ್ತಿದೆ. ಇದು ಹೆಚ್ಚಿನ ಡೆಸಿಬಲ್ ಶಬ್ದವನ್ನು ಹೊರಸೂಸುತ್ತಿವೆ. ಇವುಗಳನ್ನುಬ ಬಳಕೆ ಮಾಡದಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಇನ್ಮುಂದೆ ಘಂಟೆ ಶಬ್ಧವಿಲ್ಲದೆ ಪೂಜೆ ನಡೆಸಬೇಕಿದೆ.
Ennu mundhe dhevasthanadhalli vasooli madodhannu stop madi adhu mathra govt avarige beka