ಸುಳ್ಯ : ಓಮ್ನಿ ಪಲ್ಟಿ ವೇಳೆ ತಲೆಗೆ ಸರಳು ಬಡಿದು ಮಗು ಸಾವು

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಓಮ್ನಿ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ‌ಗುತ್ತಿಗಾರು ಸಮೀಪ ಸೋಮವಾರದಂದು ನಡೆದಿದೆ.

Ad Widget

ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಕೆದಂಬಾಡಿ ಯತೀಶ್ ಹಾಗೂ ಕುಟುಂಬ ಓಮ್ನಿ ಕಾರೊಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿತ್ತು. ಈ ವೇಳೆ ಗುತ್ತಿಗಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯಲ್ಲಿ ಓಮ್ನಿಯಲ್ಲಿದ್ದ ಒಂದು ವರ್ಷದ ಮಗು ಸರಿತ್ ನ ತಲೆಗೆ ಕಾರಿ‌ನಲ್ಲಿನ ರಾಡ್ ಒಂದು ಬಡಿದ ಪರಿಣಾಮ ತೀವ್ರವಾದ ಏಟಾಗಿತ್ತು. ತಕ್ಷಣ ಮಗುವನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿತಾದರೂ ದಾರಿ ಮಧ್ಯೆ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ. ಬಳಿಕ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆ ‌ಮಾಡಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *