ಸಮಗ್ರ ನ್ಯೂಸ್ ಡೆಸ್ಕ್: ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಹಂದಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಕುಷ್ಟಗಿ ತಾಲೂಕಿನ ದೋಣಿಹಳ್ಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವನ್ನೂರ್ ಅಲಿ ತಂದಿ ಹುಸೇನಸಾಬ್ ಬಲಕುಂದಿ ಎಂಬ ನಾಲ್ಕು ವರ್ಷದ ಮಗು ಆಟವಾಡುವ ವೇಳೆ ಹಂದಿಗಳು ದಾಳಿ ಮಾಡಿ ಮಗುವಿನ ಕಿವಿ, ಮುಖವನ್ನು ಕಚ್ಚಿದ ಹಂದಿಗಳು ಆತನನ್ನು ಎಳೆದೊಯ್ಯುವ ಪ್ರಯತ್ನವನ್ನು ಮಾಡಿವೆ. ಕೂಡಲೇ ಘಟನೆಯನ್ನು ನೋಡಿದ ಗ್ರಾಮಸ್ಥರು ಹಂದಿಗಳಿಂದ ಮಗುವನ್ನು ಪಾರು ಮಾಡಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ನಿವಾಸಿಗಳು ಕೂಡಲೇ ಗ್ರಾಮದಲ್ಲಿ ಇರುವ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಾಯಾಳು ಮಗುವನ್ನು ಚಿಕಿತ್ಸೆಗಾಗಿ ಗ್ರಾಮದ ಸರಕಾರಿ ಆಸ್ಪತ್ರೆ ಕೊಂಡ್ಯಯ್ಯುವ ವೇಳೆ ಆಸ್ಪತ್ರೆಯಲ್ಲಿ ಯಾರು ಇಲ್ಲದ ಕಾರಣ, ಮಗುವನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.