ಸಮಗ್ರ ನ್ಯೂಸ್ ಡೆಸ್ಕ್: ಬಜಾಜ್ ಸಮೂಹ ಸಂಸ್ಥೆಗಳ ಚೇರ್ಮನ್ ರಾಹುಲ್ ಬಜಾಜ್(83) ಶನಿವಾರ(ಫೆ.12) ನಿಧನರಾಗಿದ್ದಾರೆ. ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರೂಬಿ ಹಾಲ್ ಕ್ಲಿನಿಕ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪುರವೇಜ್ ಗ್ರಾಂಟ್ ಹೇಳಿದ್ದಾರೆ.
ರಾಹುಲ್ ಬಜಾಜ್ ಸಾವನ್ನಪ್ಪುವಾಗ ಅವರ ಆಪ್ತ ಕುಟುಂಬಸ್ಥರು ಪಕ್ಕದಲ್ಲೇ ಇದ್ದರು ಎಂದು ಬಜಾಜ್ ಗ್ರೂಪ್ನ ಪ್ರಕಟಣೆ ತಿಳಿಸಿದೆ. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1938ರ ಜೂನ್ 10ರಂದು ಜನಿಸಿದ ರಾಹುಲ್ ಬಜಾಜ್ ಅವರು 40 ವರ್ಷಗಳ ಕಾಲ ಬಜಾಜ್ ಗ್ರೂಪ್ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಪ್ರಸ್ತುತ ಬಜಾಜ್ ಸಂಸ್ಥೆಯ ಎಮೆರಿಟಸ್ ಅಧ್ಯಕ್ಷರಾಗಿದ್ದರು.