Ad Widget .

ಕಡಬ: ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಧರ್ಮೀಯನ ಕಾರುಬಾರು| ಮತಾಂತರ ಯತ್ನ ಆರೋಪಿಸಿ ಹಿಂದೂ‌ ಸಂಘಟನಾ ಕಾರ್ಯಕರ್ತರಿಂದ ಆಕ್ರೋಶ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ದ.ಕ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯ ಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಮುಂಜಾನೆ ವೇಳೆಗೆ ಪತ್ತೆ ಹಚ್ಚಿ ಪೋಲಿಸ್ ವಶಕ್ಕೆ ನೀಡಿದ್ದಾರೆ.

Ad Widget . Ad Widget . Ad Widget .

ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯ ಮನೆಯಲ್ಲಿ ಅನ್ಯ ಕೋಮಿನ ವ್ಯಕ್ತಿಯೋರ್ವರು ತಂಗಿರುವ ವಿಚಾರ ಬೆಳಕಿಗೆ ಬಂದಿತ್ತು. ಆತ ಮಹಿಳೆಯನ್ನು ಆಸೆ ಆಮಿಷ ಒಡ್ಡಿ ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಅದಕ್ಕೆ ಪೂರಕ ಸಾಕ್ಷಾಧಾರಗಳು ದೊರೆತಿರುವುದರಿಂದ ಮಹಿಳೆಯ ಮನೆಗೆ ಕಡಬದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಭೇಟಿ ಮಾಡಿ ಮನವೊಲಿಸಿದ್ದರು.

ಆದರೆ ಆತ ಮಹಿಳೆಯ ಮನೆಗೆ ಬರುವುದನ್ನು ನಿಲ್ಲಿಸಿರಲಿಲ್ಲ. ಆಗಾಗ ಮಹಿಳೆಯ ಮನೆಗೆ ಬಂದು ಹೋಗುವುದು ಹಲವಾರು ಸಮಯದಿಂದ ನಡೆಯುತ್ತಲೇ ಇರುವುದರಿಂದ ಹಿಂದೂ ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮಾತ್ರವಲ್ಲ ಹಿಂದೂ ಮಹಿಳೆಯ ಮನೆಯಲ್ಲಿ ಮತಾಂತರವಾಗುವ ಲಕ್ಷಣಗಳು ಕಂಡು ಬಂದಿದ್ದವು.

ಮನೆಯ ಮಕ್ಕಳ ಕೊರಳಲ್ಲಿ ಶಿಲುಬೆಯ ಮಾಲೆಗಳು ಕಂಡು ಬಂದಿದ್ದವು ಎನ್ನಲಾಗಿದೆ. ಗುರುವಾರ ರಾತ್ರಿ ಅನ್ಯ ಕೋಮಿನ ವ್ಯಕ್ತಿ ಮನೆಯಲ್ಲಿ ತಂಗಿದ್ದ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ವೇಳೆ ಆ ವ್ಯಕ್ತಿಯನ್ನು ಹಿಡಿದು ಪೋಲಿಸ್ ವಶಕ್ಕೆ ನೀಡಿದ್ದಾರೆ. ಸದ್ಯ ಆ ವ್ಯಕ್ತಿ ಪೋಲಿಸ್ ವಶದಲ್ಲಿದ್ದಾನೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ತೆರೆ ಮರೆಯಲ್ಲಿ ಮತಾಂತರ ಷಡ್ಯಂತ್ರ ನಡೆಯುತ್ತಲೆ ಇದೆ. ಸಂಬಂಧಪಟ್ಟ ಇಲಾಖೆಯವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಹಿಂದೂ ಸಂಘಟನೆ ಪ್ರಮುಖರು ಅಗ್ರಹಿಸಿದ್ದಾರೆ.

ಒಂದು ವರ್ಷದ ಹಿಂದೆ ಜಾಗದ ತಕರಾರಿನ ಹಿನ್ನೆಲೆಯಲ್ಲಿ ತನ್ನ ಬಾವನಿಂದಲೇ ಮಾನಭಂಗ ಯತ್ನ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮಹಿಳೆ ಆಸಿಡ್ ದಾಳಿಗೆ ಒಳಗಾಗಿದ್ದರು. ನಂತರದ ದಿನಗಳಲ್ಲಿ ಆರೋಪಿ ಮಹಿಳೆಯ ಬಾವ ಪೋಲಿಸ್ ವಶವಾಗಿದ್ದು ಬಳಿಕ ಜಾಮೀನು ನೀಡಲಾಗಿತ್ತು. ಇದೇ ಪ್ರಕರಣವನ್ನು ಆರೋಪಿ ಬಂಡವಾಳ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

Leave a Comment

Your email address will not be published. Required fields are marked *