ಮಂಗಳೂರು: ರಾತ್ರೋರಾತ್ರಿ ನಾಪತ್ತೆಯಾದ ಸಹೋದರಿಯರು ಪ್ರಕರಣ ಸುಖಾಂತ್ಯ| ಚಿಕ್ಕಮಗಳೂರಲ್ಲಿ ಪತ್ತೆಯಾದ ಯುವತಿಯರು

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಮೊಬೈಲ್ ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಇಬ್ಬರು ಸಹೋದರಿಯರನ್ನ ಚಿಕ್ಕಮಗಳೂರಿನಲ್ಲಿ ಮಂಗಳೂರಿನ ಬಜಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

Ad Widget

ಬಜಪೆ ಗ್ರಾಮದ ಕೊಂಚಾರು ನಿವಾಸಿ ಮಾಮು ಎಂಬುವರ ಇಬ್ಬರು ಪುತ್ರಿಯರಾದ ಮುಬೀನಾ (22) ಮತ್ತು ಬುಶ್ರಾ (21) ಎಂಬುವರು ನಾಪತ್ತೆಯಾಗಿದ್ದರು. ಫೆಬ್ರವರಿ 7ರಂದು ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಬ್ಬರು ಯುವತಿಯರನ್ನು ನಾಪತ್ತೆಯಾದ ಎರಡು‌ ದಿನದಲ್ಲಿ ಬಜಪೆ ಪೊಲೀಸ್ ಇನ್ಸ್​​​ಪೆಕ್ಟರ್ ಸಂದೇಶ್ ಪಿ‌.ಜಿ‌ ಅವರ ತಂಡ ಪತ್ತೆ ಹಚ್ಚುವಲ್ಲಿ‌ ಯಶಸ್ವಿಯಾಗಿದೆ. ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ ಎಂಬಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

Leave a Comment

Your email address will not be published. Required fields are marked *