ಐಪಿಎಸ್ ಅಧಿಕಾರಿ ರವಿ‌ ಡಿ. ಚೆನ್ನಣ್ಣನವರ್ ವರ್ಗಾವಣೆಗೆ ಬ್ರೇಕ್

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಆದೇಶಕ್ಕೆ ತಡೆ ಹಿಡಿದಿದೆ.ರಾಜ್ಯ ಸರ್ಕಾರವು ಜನವರಿ 26 ರಂದು ರವಿ ಡಿ.ಚೆನ್ನಣ್ಣನವರ್ ಸೇರಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

Ad Widget

ರವಿ.ಡಿ.ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ರವಿ. ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾವಣೆ ಮಾಡಿತ್ತು. ರವಿ ಚೆನ್ನಣ್ಣನವರ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಗ್ರಾನೈಟ್ ಉದ್ಯಮಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದು ಬಳಿಕ ರವಿ ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟ ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ತಡೆ ಹಿಡಿದಿದೆ.

Leave a Comment

Your email address will not be published. Required fields are marked *