ಮಂಗಳೂರು: ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಿಸಹೋದ ಪ್ರಿಯಕರ ಸಾವು

Ad Widget ... ..

ಸಮಗ್ರ ವರದಿ: ಸೋಮೇಶ್ವರ ಬೀಚ್ ನ ರುದ್ರಪಾದೆ ಎಂಬಲ್ಲಿ ಜೋಡಿಯೊಂದು ಮಾತನಾಡುತ್ತಿದ್ದಂತೆ ಪ್ರೇಯಸಿ ಸಮುದ್ರಕ್ಕೆ ಹಾರಿದ್ದು ಆಕೆಯನ್ನು ರಕ್ಷಿಸಲು ಹೋಗಿ ಪ್ರಿಯಕರ ಸಾವನ್ನಪ್ಪಿದ ಘಟನೆ ನಡೆದಿದೆ.

Ad Widget

ಉಳ್ಳಾಲ ರಾಣಿಪುರ ಉಳಿಯಾ ನಿವಾಸಿ ಲಾಯ್ಡ್ ಡಿಸೋಜಾ(28) ತನ್ನ ಪ್ರೇಯಸಿಯೊಂದಿಗೆ ಮಾತನಾಡುತ್ತಿದ್ದಂತೆ ಸಮುದ್ರಕ್ಕೆ ಹಾರಿದ್ದ ಪ್ರೇಯಸಿ ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೋ (22) ರಕ್ಷಿಸಲು ಸಮುದ್ರಕ್ಕೆ ಹಾರಿದ್ದ ಸಂದರ್ಭದಲ್ಲಿ ತಲೆಗೆ ಬಂಡೆ ಕಲ್ಲು ತಗುಲಿ ಸಾವನ್ನಾಪ್ಪಿದ್ದಾನೆಂದು ತಿಳಿದು‌ ಬಂದಿದೆ. ಯುವತಿಯನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಂತಾಜನಕ ಸ್ಥಿತಿ‌ಯಲ್ಲಿದ್ದಳೆಂದು ಸ್ಥಳೀಯರು‌ ತಿಳಿಸಿದ್ದಾರೆ.

ಯುವಕ ವರ್ಷದ ಹಿಂದೆ ವಿದೇಶದಿಂದ ಊರಿಗೆ ಬಂದು ಡೆಕೋರೆಟ್ ಉದ್ಯಮ ಆರಂಭಿಸಿದ್ದ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *