ಕಡಬ: ಕಣ್ಣೆದುರಲ್ಲೇ ಹಿಟಾಚಿ ಅಗ್ನಿಗಾಹುತಿ| ಲಕ್ಷಾಂತರ ರೂ.‌ನಷ್ಟ|

ಕಡಬ: ಕಣ್ಣೆದುರಲ್ಲೇ ಹಿಟಾಚಿ ಇಂಜಿನ್ ಒಂದು ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟಗೊಂಡ ಘಟನೆ ತಾಲೂಕಿನ ಕೊಂಬಾರು‌ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

. Ad Widget . Ad Widget . Ad Widget

ಉಪ್ಪಿನಂಗಡಿ ಸಮೀಪದ ಕಾಂಚನದ ಸಂಸ್ಥೆಗೆ ಸೇರಿದ ಹಿಟಾಚಿಯನ್ನು ಕೊಂಬಾರು ದೇವಸ್ಥಾನದ ಗದ್ದೆಯಲ್ಲಿ ನಿಲ್ಲಿಸಲಾಗಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ತಕ್ಷಣವೇ ಹಿಟಾಚಿಯ ಸಿಬ್ಬಂದಿ ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ, ಬೆಂಕಿ ಅದಾಗಲೇ ವ್ಯಾಪಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

. Ad Widget .

Leave a Comment

Your email address will not be published. Required fields are marked *