ಸೋಮವಾರಪೇಟೆಯಲ್ಲಿ ರೈತರ ಪ್ರತಿಭಟನೆ


ಸೋಮವಾರಪೇಟೆ:- ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪಟ್ಟಣದಲ್ಲಿ ಜಿಲ್ಲಾ ರೈತಸಂಘ ಪ್ರತಿಭಟನೆ ನಡೆಸಿದರು.
ಕಳೆದ 17 ದಿನಗಳಿಂದ ಇಲ್ಲಿನ ಜೆ.ಸಿ.ವೇದಿಕೆಯಲ್ಲಿ ನಿರಂತರ ಧರಣಿ ನಡೆಸುತ್ತಿದ್ಫು ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಆದರೆ ರೈತರ ಬೇಡಿಕೆಗಳಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ,ರಾಜ್ಯ ಸರ್ಕಾರ ಕೊಡಗುರೈತರ ಬೇಡಿಕೆಗೆ ಸ್ಪಂದಿಸಿಲವೆಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಮನುಸೋಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

Ad Widget ... ..


17 ದಿನಗಳ ಧರಣಿ ಅಂತಿಮಗೊಳಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಪಟ್ಟಣದ ಬಸವೇಶ್ವರ ಪ್ರತಿಮೆ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜೆ.ಸಿ.ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಈ ಸಂದರ್ಭ ಜಿಲ್ಲೆಯ ವಿವಿಧ ಭಾಗ ಗಳಿಂದ ರೈತರು ಪಾಲ್ಗೊಂಡಿದ್ದರು.

Ad Widget

Leave a Comment

Your email address will not be published. Required fields are marked *