ಸುಳ್ಯ : ಮಾಜಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ತನ್ನ ಅಂಗಡಿಯ ಕೋಣೆಯೊಳಗಡೆ ಮಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಅಡ್ತಲೆಯಲ್ಲಿ ನಡೆದಿದೆ
ಮರ್ಕಂಜ ಗ್ರಾಮದ ಕಾಯರ ಭೋಜಪ್ಪ(48) ರವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು.
ಭೋಜಪ್ಪರವರು ಅಡ್ತಲೆಯಲ್ಲಿ ಅಂಗಡಿ ನಡೆಸುತ್ತಿದ್ದು ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಭವಾನಿ, ಪುತ್ರಿ ರಕ್ಷಾ, ಪುತ್ರ ಯತಿನ್ ರನ್ನು ಅಗಲಿದ್ದಾರೆ.

















