ಪ್ರೇಯಸಿಯ ಬೆತ್ತಲೆ ಫೋಟೋ ವಾಟ್ಸಪ್ ನಲ್ಲಿ ಸ್ಟೇಟಸ್| ಸಂಚು ಮಾಡಿ ವಿಕೃತಿ ‌ಮೆರೆದ ಪ್ರಿಯಕರ|

Ad Widget ... ..

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ವಿಡಿಯೋ ಸೆರೆಹಿಡಿದು, ಫೋಟೋ ಎಡಿಟ್​ ಮಾಡಿ, ವಾಟ್ಸ್​ಆಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Ad Widget

ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಶುಭಂ ಕೌಲೆ ವಿರುದ್ಧ ಮನನೊಂದ ವಿದ್ಯಾರ್ಥಿನಿ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಶುಭಂ ಕೌಲೆ ತಮ್ಮದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಜತೆ ವಾಟ್ಸ್​ ಆ್ಯಪ್​ ಮೂಲಕ ಪರಿಚಯ ಬೆಳೆಸಿದ್ದ. ದಿನ ಕಳೆದಂತೆ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ಸಲುಗೆಯನ್ನು ಬೆಳೆಸಿದ್ದ. ಅದೇ ಸಲುಗೆಯಲ್ಲಿ ಯುವತಿಯ ನಗ್ನ ವಿಡಿಯೋವನ್ನು ಆರೋಪಿ ಸ್ಕ್ರೀನ್ ರೆರ್ಕಾಂಡಿಗ್ ಮಾಡಿದ್ದಾನೆ.

ಶುಭಂ ಕೌಲೆಯನ್ನು ಸಂಪೂರ್ಣ ನಂಬಿದ್ದ ಯುವತಿ, ಹಿಂದೆ-ಮುಂದೆ ಯೋಚಿಸದೇ ಆತನ ಮುಂದೆ ಮೊಬೈಲ್​ನಲ್ಲಿ ಬೆತ್ತಲಾಗಿದ್ದಳು. ಇದಾದ ಬಳಿಕ ತನ್ನ ವರಸೆ ಬದಲಿಸಿದ ಶುಭಂ ಕೌಲೆ, ಯುವತಿಯ ನಗ್ನ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಸ್ಟೇಟಸ್​ಗೆ ಹಾಕಿ ವಿಕೃತಿ ಮೆರೆದಿದ್ದಾನೆ. ಈ ಮೂಲಕ ಯುವತಿಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದ್ದಾನೆ.

ಘಟನೆ ಬಳಿಕ ಮನನೊಂದ ಸಂತ್ರಸ್ತ ಯುವತಿ, ಹುಬ್ಬಳ್ಳಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *