ಸುಳ್ಯ| ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್| 2 ದಿನಗಳ ಬಳಿಕ ನದಿಯಲ್ಲಿ ಪತ್ತೆ|

Ad Widget ... ..

ಸುಳ್ಯ : ನದಿಯ ಬದಿ ನಿಲ್ಲಿಸಿದ ಪಲ್ಸರ್ ಬೈಕ್ ಒಂದು ಮಳೆ ನೀರಿಗೆ ಕೊಚ್ಚಿ ಎರಡು ದಿನಗಳ ಬಳಿಕ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಬಳಿ ನಡೆದಿದೆ.

Ad Widget

ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ಹೊಳೆ ಯೊಂದಿದ್ದು ಅದರ ಬದಿಯಲ್ಲಿ ಅ.25 ರ ಸಂಜೆ ರಂಜನ್ ಎಂಬವರು ತನ್ನ ಪಲ್ಸರ್ ಬೈಕ್ ಇರಿಸಿ ಬೆಳ್ಳಾರೆಗೆ ತೆರಳಿದ್ದರು. ಆ ವೇಳೆ ಸುರಿದ ಭಾರಿ ಮಳೆಗೆ ಭಾರಿ ಪ್ರಮಾಣದ ನೀರು ಬಂದು ನೀರಿನ ರಭಸಕ್ಕೆ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ರಂಜನ್ ಬೈಕ್ ನಿಲ್ಲಿಸಿದ ಜಾಗ ನೀರು ಆವರಿಸಿ ಬೈಕ್ ಕಾಣೆಯಾಗಿತ್ತು. ಮರುದಿನ ಹುಡುಕಲಾಯಿತಾದರೂ ಬೈಕ್ ಸಿಕ್ಕಿರಲಿಲ್ಲ. ಆದರೆ ಎರಡು ದಿನಗಳ ಬಳಿಕ ಬೈಕ್ ನಿಲ್ಲಿಸಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ ಹೊಳೆಯೊಳಗೆ ಕಂಡು ಬಂದಿದೆ .

Leave a Comment

Your email address will not be published. Required fields are marked *