ಮುಂಬೈಯಲ್ಲಿ ರಸ್ತೆ ಅಪಘಾತ| ಉಡುಪಿ ಮೂಲದ ವ್ಯಕ್ತಿ ಮೃತ್ಯು..!!

Ad Widget ... ..

ಮುಂಬೈ : ಏಳು ವರ್ಷಗಳಿಂದ ಮುಂಬೈ‌ನ ಶಿಪ್ ಯಾರ್ಡ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಉಡುಪಿ ಕೊಳಲಗಿರಿ ಮೂಲದ ವ್ಯಕ್ತಿಯೋರ್ವರು ಮಹಾರಾಷ್ಟ್ರದ ಚೆಂಬೂರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಘಟನೆ ಸಂಭವಿಸಿದೆ.
ಮೃತರನ್ನು ರೋಶನ್ ಡಿ ಸೋಜಾ(33) ಗುರುತಿಸಲಾಗಿದೆ.

Ad Widget

ಇವರು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇವರ ಮೃತದೇಹವನ್ನು ಮುಂಬೈನಿಂದ ಊರಿಗೆ ತರಲಾಗುತ್ತಿದೆ. ಅ.23ರ ಸಂಜೆ 4 ಗಂಟೆಗೆ ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ.

Leave a Comment

Your email address will not be published. Required fields are marked *