ಚಿಕ್ಕಮಗಳೂರು: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಸಂಭವಿಸಿದೆ.
ಬೈಕ್ ಸವಾರ ರಾಜೇಶ್ (24) ಮೇಲೆ ಬಸ್ ಹತ್ತಿದ ಪರಿಣಾಮ ದೇಹ ಛಿದ್ರ ಛಿದ್ರವಾಗಿದೆ. ಬೈಕ್ನಲ್ಲಿ ಹಿಂಬದಿ ಕುಳಿತಿದ್ದ ದಾಸರಹಳ್ಳಿ ಅಶೋಕ್ ಎಂಬುವರಿಗೆ ಗಂಭೀರ ಗಾಯವಾಗಿದೆ.
ಗಾರೆ ಕೆಲಸಕ್ಕೆ ಅಂತ ಬೈಕ್ ಸವಾರರು ಬಣಕಲ್ ನಿಂದ ಮತ್ತಿಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಬಾಳೂರು ಸಮೀಪದ ಚನ್ನಡ್ಲು ಗ್ರಾಮದ ರಾಜೇಶ್ ಮೃತಪಟ್ಟಿದ್ದು, ದಾಸರಹಳ್ಳಿಯ ಅಶೋಕ್ಗೆ ಗಂಭೀರ ಗಾಯಗಳಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಬದಿಯಿಂದ ಬಸ್ನ ಓವರ್ ಟೇಕ್ ಮಾಡಲು ಹೋಗಿರುವುದೇ ಅಪಘಾತಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ.