ನಳಿನ್ ಹೇಳಿಕೆಗೆ ಮುನಿಸಿಕೊಂಡ ಯಡಿಯೂರಪ್ಪ| ಬೇಜವಾಬ್ದಾರಿ ಹೇಳಿಕೆಗೆ ಅಸಮಾಧಾನ|

Ad Widget ... ..

ಬೆಂಗಳೂರು : ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಮೊರಟಗಿಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಯಾರಿಗೂ ಅಗೌರವ ತರುವ ಹಾಗೆ ಯಾರೂ ಮಾತನಾಡಬಾರದು. ರಾಹುಲ್ ಗಾಂಧಿ ಅವರ ಬಗ್ಗೆ ನನಗೆ ಗೌರವ ಇದೆ. ನಳಿನ್ ಕುಮಾರ್ ರೀತಿ ಯಾರು ಮಾತನಾಡಬಾರದು ಎಂದಿದ್ದಾರೆ.

Ad Widget

ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಯಡಿಯೂರಪ್ಪ ಅಸಮಾಧಾನ ಹೊರಹಾಕುವಾಗ ರಾಹುಲ್ ಗಾಂಧಿಯ ಬಗ್ಗೆ ತನಗೆನೇ ಗೌರವ ಇದೆ ಎಂದಿರುವುದು ವಿಶೇಷವಾಗಿತ್ತು. ತನ್ನ ಪಕ್ಷದ ಅಧ್ಯಕ್ಷನ ಸಂಸ್ಕಾರಹೀನ ಹೇಳಿಕೆಗೆ ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಇದು ನಳಿನ್ ಕುಮಾರ್ ಗೆ ಮುಜುಗರ ಉಂಟಾಗುವಂತಿದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *