ಅ.24ರಿಂದ ಒಂದು ವಾರ ಕನ್ನಡ ಕಂಪು| ವಿಶಿಷ್ಟ ಕಾರ್ಯಕ್ರಮಕ್ಕೆ ತಯಾರಿ|

ಬೆಂಗಳೂರು: ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಣೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ ತಿಂಗಳ 24ರಿಂದ 30ರವರೆಗೆ ಒಂದು ವಾರ ಕಾಲ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನ ಹಮ್ಮಿಕೊಂಡಿದೆ.

Ad Widget ... ..

ಮಾತಾಡ್‌ ಮಾತಾಡ್‌ ಕನ್ನಡ ಎಂಬ ಘೋಷ ವಾಕ್ಯದ ಕಲ್ಪನೆಯಲ್ಲಿ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗಿದ್ದು, ಈ ಒಂದು ವಾರ ಕಾಲ ಆರು ರೀತಿಯ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ.

Ad Widget

ಅಭಿಯಾನದ ವೇಳೆ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡದಲ್ಲಿಯೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು, ಐಟಿ-ಬಿಟಿ ಕಂಪನಿಯಲ್ಲಿ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡ ಹಬ್ಬದ ವಾತಾವರಣ ಸೃಷ್ಟಿಸುವುದು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಏನೇನು ಕಾರ್ಯಕ್ರಮ?

  • ‘ಮಾತಾಡ್‌ ಮಾತಾಡ್‌’ ಕನ್ನಡ ಘೋಷ ವಾಕ್ಯ ಕಲ್ಪನೆಯಡಿ ಕಾರ್ಯಕ್ರಮ
  • ಕನ್ನಡದಲ್ಲಿ ಮಾತಾಡಲು, ವ್ಯವಹರಿಸಲು, ಕನ್ನಡ ಬಳಸಲು, ಕಲಿಸಲು ಉತ್ತೇಜನ
  • ನಾಟಕ, ನೃತ್ಯ, ಸಂಗೀತ, ಗೀತ ಗಾಯನ, ಮಾತು, ಬರವಣಿಗೆಗೆ ಪ್ರೇರೇಪಣೆ
  • ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಕಾರ‍್ಯಕ್ರಮ

Leave a Comment

Your email address will not be published. Required fields are marked *