Ad Widget .

ಬಂಟ್ವಾಳ: ಭಗವಧ್ವಜ ಕಟ್ಟೆಗೆ ಕಿಡಿಗೇಡಿಗಳಿಂದ ಹಾನಿ| ಸಿಸಿ ಟಿವಿಯಲ್ಲಿ ಕೃತ್ಯ ದಾಖಲು|

ಬಂಟ್ವಾಳ: ಇಲ್ಲಿನ ಎಸ್ ವಿಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆ ಹಾಗೂ ಅದರಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ಅ.18ರಂದು ತಡರಾತ್ರಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು , ಕಳೆದ ಕೆಲವು ದಿನಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಅದಕ್ಕೆ ಹನುಮಂತನ ಚಿತ್ರ , ಭಗವಾಧ್ವಜ ಅಳವಡಿಸಿ ನವೀಕರಣಗೊಳಿಸಿತ್ತು. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕಟ್ಟೆಯನ್ನು ಒಡೆದುಹಾಕಿ, ಭಗವಾಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ರಿಟ್ಜ್ ಕಾರು ಈ ದಾರಿಯಲ್ಲಿ ಸಂಚರಿಸಿದ್ದು , ಸಿಸಿಟಿವಿಯಲ್ಲಿ ದಾಖಲಾಗಿದೆ.

Ad Widget . Ad Widget . Ad Widget .

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂಟ್ವಾಳ ವಿಹಿಂಪ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ದೀಪಕ್ ಬಂಟ್ವಾಳ, ಸಂತೋಷ್ ಸರಪಾಡಿ, ಶಿವಪ್ರಸಾದ್ ತುಂಬೆ, ಅನಿಲ್ ಮಂಡಾಡಿ, ದೂರು ನೀಡಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ

Leave a Comment

Your email address will not be published. Required fields are marked *