ತೈಲಬೆಲೆ ಇಳಿಕೆಯ ಸೂಚನೆ ನೀಡಿದ ಸಿಎಂ|

Ad Widget ... ..

ಹುಬ್ಬಳ್ಳಿ: ತೈಲ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಬೆಲೆ ಕಡಿಮೆ ಮಾಡುವ ಅವಕಾಶಗಳಿದ್ದರೂ, ಇನ್ನೂ ಬೆಲೆ ಇಳಿಕೆ ಮಾಡಿಲ್ಲ. ತಮಿಳುನಾಡಿನಲ್ಲಿ ಈಗಾಗಲೇ ರಾಜ್ಯ ಸರ್ಕಾರವೇ ಪೆಟ್ರೋಲ್ ಬೆಲೆ ಏರಿಕೆಯ ದರವನ್ನು ಇಳಿಸಿದೆ. ಈ ನಡುವೆ ಉಪ ಚುನಾವಣೆಯ ಬಳಿಕ ತೈಲ ಬೆಲೆ ಇಳಿಸುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Ad Widget

ತೈಲ ಬೆಲೆಯು ರಾಜ್ಯದ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ದರ ಇಳಿಸುವ ಬಗ್ಗೆ ಉಪ ಚುನಾವಣೆಯ ಬಳಿಕ ಪುನರವಲೋಕನ ಮಾಡುತ್ತೇನೆ. ಆರ್ಥಿಕ ಸುಧಾರಣೆಯಾದರೆ, ತೈಲದ ಮೇಲಿನ ಕರ ಇಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಆರೆಸ್ಸೆಸ್ ಹೊಗಳಿಕೆ ವಿಚಾರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇನ್ನೂ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹಾನಗಲ್–ಸಿಂದಗಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *