March 2026

ಇಂದು ರಾಜ್ಯ ಬಜೆಟ್ ಮಂಡನೆ| 17ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ| ಹಲವು ನಿರೀಕ್ಷೆಯಲ್ಲಿ ಕರ್ನಾಟಕ

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಭಾರದ ನಡುವೆ ಆರ್ಥಿಕ ಶಿಸ್ತು ಜನರ ನಿರೀಕ್ಷೆ ಈಡೇರಿಕೆಗೆ ಬಜೆಟ್ ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ. ರಾಜ್ಯದ ಮಟ್ಟಿಗೆ ಹೆಚ್ಚು ಮತ್ತು ದೇಶದಲ್ಲಿ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಇಂದು ಬೆಳಗ್ಗೆ 10.15ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಡಿವಾಣ ಹಾಕದೆ ಆರ್ಥಿಕ ಶಿಸ್ತು ಪಾಲನೆಗೆ ಬಜೆಟ್ ನಲ್ಲಿ ಒತ್ತು ನೀಡುವ ಸಾಧ್ಯತೆ […]

ಇಂದು ರಾಜ್ಯ ಬಜೆಟ್ ಮಂಡನೆ| 17ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ| ಹಲವು ನಿರೀಕ್ಷೆಯಲ್ಲಿ ಕರ್ನಾಟಕ Read More »

ಟಿ.20 ವಿಶ್ವಕಪ್| ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿದ ಭಾರತ

ಸಮಗ್ರ ನ್ಯೂಸ್: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ T20 ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಸೋಲಿಸಿದ ಭಾರತ ತಂಡವು ಫೈನಲ್ ಗೇರಿದೆ. ಭಾರತ ನೀಡಿದ 254 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಅದರ ಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌

ಟಿ.20 ವಿಶ್ವಕಪ್| ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿದ ಭಾರತ Read More »

ಭಾರತದೊಂದಿಗೆ ಸಮರಾಭ್ಯಾಸ ನಡೆಸಿ ತೆರಳುತ್ತಿದ್ದ ಇರಾನ್ ನ IRIS ಡೇನಾ ನೌಕೆಯನ್ನು ಹೊಡೆದುರುಳಿಸಿದ ಅಮೇರಿಕಾ| 87 ಮಂದಿ ಸಾವು, 32 ಮಂದಿ ರಕ್ಷಣೆ

ಸಮಗ್ರ ನ್ಯೂಸ್: ಕಳೆದ 5 ದಿನಗಳಿಂದ ಮಧ್ಯಪ್ರಾಚ್ಯ ಹೊತ್ತಿ ಉರಿಯುವಂತೆ ಮಾಡಿದ್ದ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವಿನ ಕದನ ಇದೀಗ ನೇರವಾಗಿ ಭಾರತದ ಬುಡಕ್ಕೆ ಬಂದು ತಲುಪಿದೆ. ಇತ್ತೀಚೆಗಷ್ಟೇ ಭಾರತದ ನೌಕಾಪಡೆಗೆ ಜೊತೆ ಆಂಧ್ರದ ವಿಶಾಖಪಟ್ಟಣದಲ್ಲಿ ನೌಕಾ ಕವಾಯತು ನಡೆಸಿ ವಾಪಸ್‌ ತೆರಳುತ್ತಿದ್ದ ಇರಾನ್‌ನ ‘ಐಆರ್‌ಐಎಸ್‌ ಡೆನಾ’ ನೌಕೆಯನ್ನು ಅಮೆರಿಕ ತನ್ನ ಸಬ್‌ಮರೀನ್ ಬಳಸಿ ಹೊಡೆದುರುಳಿಸಿದ್ದು, ಆ ನೌಕೆಯಲ್ಲಿದ್ದ 87 ಮಂದಿ ಸಾವಿಗೀಡಾಗಿದ್ದಾರೆ. ದಾಳಿಯ ತೀವ್ರತೆಗೆ ನೌಕೆ ಜಲಸಮಾಧಿಯಾಗಿದ್ದು, ಅದರೊಳಗಿದ್ದ 32 ಜನರನ್ನು ರಕ್ಷಿಸಲಾಗಿದೆ. ಉಳಿದ 61

ಭಾರತದೊಂದಿಗೆ ಸಮರಾಭ್ಯಾಸ ನಡೆಸಿ ತೆರಳುತ್ತಿದ್ದ ಇರಾನ್ ನ IRIS ಡೇನಾ ನೌಕೆಯನ್ನು ಹೊಡೆದುರುಳಿಸಿದ ಅಮೇರಿಕಾ| 87 ಮಂದಿ ಸಾವು, 32 ಮಂದಿ ರಕ್ಷಣೆ Read More »

ಬಿಹಾರ ಸಿಎಂ ನಿತೀಶ್ ರಾಜೀನಾಮೆ ಸಾಧ್ಯತೆ

ಸಮಗ್ರ ನ್ಯೂಸ್: ಬಿಹಾರ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ನಡೆಯಲಿದೆ. ಜೆಡಿಯು ಪಕ್ಷದ ವರಿಷ್ಠ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. 75 ವರ್ಷದ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ 2025ರ ನವೆಂಬರ್ 20ರಂದು ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುಧವಾರ ಸಂಜೆ India Today ವರದಿಯೊಂದನ್ನು ಮಾಡಿದೆ.

ಬಿಹಾರ ಸಿಎಂ ನಿತೀಶ್ ರಾಜೀನಾಮೆ ಸಾಧ್ಯತೆ Read More »

ಖಾಮಿನೈ ನಿಧನಕ್ಕೆ ಭಾರತ ಸಂತಾಪ

ಸಮಗ್ರ ನ್ಯೂಸ್: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು. ಇರಾನ್ ರಾಯಭಾರ ಕಚೇರಿಯಲ್ಲಿ ತೆರೆಯಲಾಗಿದ್ದ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ ಮಿಶ್ರಿ, ಖಾಮಿನೈ ಅವರ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಮತ್ತು ಜನತೆಗೆ ಭಾರತದ ಪರವಾಗಿ ಸಂತಾಪ ಸೂಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇಸ್ಲಾಮಿಕ್

ಖಾಮಿನೈ ನಿಧನಕ್ಕೆ ಭಾರತ ಸಂತಾಪ Read More »

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ| ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ

ಸಮಗ್ರ ನ್ಯೂಸ್: ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಗುರುವಾರ (ಮಾ.5) ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಮತ್ತು ಯಾದಗಿರಿ ಸೇರಿದಂತೆ ಒಟ್ಟು 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ವಿದ್ಯುತ್ ಇಲಾಖೆ (ಕೆಪಿಟಿಸಿಎಲ್/ ಬೆಸ್ಕಾಂ), ಜಲಮಂಡಳಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಉನ್ನತ

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ| ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ Read More »

ಬೆಳ್ತಂಗಡಿ: ಪ್ರಗತಿಪರ‌ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆಗೆ ‘ನ್ಯೂಸ್18 ವರ್ಷದ ಕನ್ನಡಿಗ’ ಪ್ರಶಸ್ತಿ

ಸಮಗ್ರ ನ್ಯೂಸ್: ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಸಾವಯವ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕೆ. ಗೌಡ ಅವರಿಗೆ ಈ ವರ್ಷದ ‘ಕನ್ನಡಿಗ 2026’ ಪ್ರಶಸ್ತಿ ಲಭಿಸಿದೆ. News18 Kannada ಅರ್ಪಿಸುವ ಈ ಗೌರವವನ್ನು ಮಾರ್ಚ್ 03ರಂದು ಬೆಂಗಳೂರಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕಂದಾಯ ಸಚಿವ ಕೃಷ್ಣಬೈರೇಗೌಡಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್‌ನ ಎಲ್.ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ. ಗೌಡ ಅವರು ದಿವಂಗತ ದಿನಕರ ಗೌಡ ದಂಪತಿಗಳ ಪುತ್ರರು. ಅಡಿಕೆ,

ಬೆಳ್ತಂಗಡಿ: ಪ್ರಗತಿಪರ‌ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆಗೆ ‘ನ್ಯೂಸ್18 ವರ್ಷದ ಕನ್ನಡಿಗ’ ಪ್ರಶಸ್ತಿ Read More »

ಚುನಾವಣಾ ಪ್ರಚಾರಕ್ಕೆ ಮೋದಿ ಕರೆತರಲು 33 ಕೋಟಿ ಖರ್ಚು ಮಾಡಿದ್ದ ಕರ್ನಾಟಕದ ಬಿಜೆಪಿ ಸರ್ಕಾರ| ಮಾಹಿತಿ ಹಕ್ಕು ಕಾಯ್ದೆಯಡಿ ವಿಚಾರ ಬಯಲು

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲೆಂದೇ ₹6.5 ಕೋಟಿ ಖರ್ಚು ಮಾಡಲಾಗಿದೆ. ‘ಲಂಚಮುಕ್ತ ಕರ್ನಾಟಕ’ ಸಂಘಟನೆಯ ಮಂಜುನಾಥ ಹಿರೇಚೌಟಿ ಅವರು ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗಳಲ್ಲಿ ಈ ಮಾಹಿತಿ ಇದೆ. 2023ರ ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತ್ತು. ಇದಕ್ಕೆ ₹18.81 ಕೋಟಿ

ಚುನಾವಣಾ ಪ್ರಚಾರಕ್ಕೆ ಮೋದಿ ಕರೆತರಲು 33 ಕೋಟಿ ಖರ್ಚು ಮಾಡಿದ್ದ ಕರ್ನಾಟಕದ ಬಿಜೆಪಿ ಸರ್ಕಾರ| ಮಾಹಿತಿ ಹಕ್ಕು ಕಾಯ್ದೆಯಡಿ ವಿಚಾರ ಬಯಲು Read More »

ಖಮೇನಿ ಸಾವಿಗೆ ಕಣ್ಣೀರಾದ ಭಾರತದ ಮುಸ್ಲಿಂ ಮಹಿಳೆಯರ ಛಳಿ ಬಿಡಿಸಿದ ಇರಾನಿಯನ್ ಮಹಿಳೆಯರು!! ಏನಿದು ಈ ಡಿಜಿಟಲ್ ವಾರ್?!

ಸಮಗ್ರ ನ್ಯೂಸ್: ಇರಾನ್ ಸರ್ವಾಧಿಕಾರಿ ಆಯತೊಲ್ಲಾ ಅಲಿ ಖಮೆನಿ ಸಾವಿಗೆ ದುಃಖ ವ್ಯಕ್ತಪಡಿಸುತ್ತಿರುವ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು ವಿಚಿತ್ರ ಡ್ಯಾನ್ಸ್ ಮೂಲಕ ಲೇವಡಿ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೆನಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಭಾರತ ಮತ್ತು ಇರಾನ್ ಮಹಿಳೆಯರ ನಡುವೆ ಇದೀಗ ‘Digital war’ ಆರಂಭವಾಗಿದೆ. ಖಮೆನಿ ಸಾವಿಗೆ ಕಣ್ಣೀರು ಹಾಕಿದ್ದ ಭಾರತೀಯ ಮುಸ್ಲಿಂ ಮಹಿಳೆಯರನ್ನು ಇರಾನ್ ಮಹಿಳೆಯರು

ಖಮೇನಿ ಸಾವಿಗೆ ಕಣ್ಣೀರಾದ ಭಾರತದ ಮುಸ್ಲಿಂ ಮಹಿಳೆಯರ ಛಳಿ ಬಿಡಿಸಿದ ಇರಾನಿಯನ್ ಮಹಿಳೆಯರು!! ಏನಿದು ಈ ಡಿಜಿಟಲ್ ವಾರ್?! Read More »

ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್ ನೀಡಿದ ರಷ್ಯಾ

ಸಮಗ್ರ ನ್ಯೂಸ್: ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಇಡೀ ಪ್ರಪಂಚದ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ನಡುಕ ಹುಟ್ಟಿಸಿದೆ. ಅದರಲ್ಲೂ ಇರಾನ್, ತೈಲ ಸಾಗಣೆಯ ನಿರ್ಣಾಯಕ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ, ಪೂರೈಕೆಯಲ್ಲಿ ದೊಡ್ಡ ಮಟ್ಟದ ಅಡಚಣೆ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಸಿದ್ಧವಾಗಿದೆ ಎಂದು ವರದಿಯಾಗಿದೆ. ಉದ್ಯಮ ವಲಯದ ಮೂಲಗಳ ಪ್ರಕಾರ, ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯನ್

ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್ ನೀಡಿದ ರಷ್ಯಾ Read More »