September 2025

ಕುಕ್ಕೆ ಸುಬ್ರಹ್ಮಣ್ಯ ಸೇವಾ ದರಗಳ ಪರಿಷ್ಕರಣೆ| ಸೇವೆಗಳ ನೂತನ ದರಪಟ್ಟಿ ಇಂತಿದೆ…

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕತ ದರ ಸೆ.1 ರಿಂದಲೇ ಜಾರಿಗೆ ಬಂದಿದೆ. ದೇವಸ್ಥಾನದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ನಷ್ಟದಲ್ಲಿ ನಡೆಯುವ ಕೆಲವು ಪ್ರಮುಖ ಸೇವೆಗಳ ಸೇವಾದರ ಹೆಚ್ಚಿಸಿ ಪರಿಷ್ಕರಿಸುವ ಅಗತ್ಯವಿರುವುದರಿಂದ, ಸೇವಾದರ ಪರಿಷ್ಕರಣೆಗೆ ಈ ಹಿಂದಿನ ಆಡಳಿತಾಧಿಕಾರಿಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇಲಾಖೆಗೆ ಸಲ್ಲಿಸಿದ ವಿವಿಧ ಸೇವೆಗಳ ಪರಿಷ್ಕರಣೆಗಳಲ್ಲಿ ಸುಮಾರು 40 ರಷ್ಟು ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ. ಪರಿಷ್ಕರಣೆಯನ್ನು ಮುಂದಿನ ಅವಧಿಗೆ […]

ಕುಕ್ಕೆ ಸುಬ್ರಹ್ಮಣ್ಯ ಸೇವಾ ದರಗಳ ಪರಿಷ್ಕರಣೆ| ಸೇವೆಗಳ ನೂತನ ದರಪಟ್ಟಿ ಇಂತಿದೆ… Read More »

ಇಂದು ಭಾಗಶಃ ಸೂರ್ಯಗ್ರಹಣ| ಗ್ರಹಣದ ಅವಧಿ, ಸೂತಕ ಮಾಹಿತಿಗಳು ಇಲ್ಲಿದೆ…

ಸಮಗ್ರ ನ್ಯೂಸ್: ಮಹಾಲಯ ಅಮಾವಾಸ್ಯೆಯ ದಿನದಂದೇ ಸೂರ್ಯ ಗ್ರಹಣವೂ ಸಂಭವಿಸಲಿದೆ. ಭಾರತೀಯ ಗ್ರಂಥಗಳಲ್ಲಿ, ಗ್ರಹಣಗಳನ್ನು ದೇವರುಗಳು ಮತ್ತು ರಾಕ್ಷಸರ ನಡುವಿನ ಹೋರಾಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸ್ಕಂದ ಪುರಾಣ ಮತ್ತು ನಾರದ ಸಂಹಿತಾ ಗ್ರಹಣಗಳ ಸಮಯದಲ್ಲಿ ಕ್ರಿಯೆಗಳು ಶುಭವೂ ಅಲ್ಲ, ಶುಭವೂ ಅಲ್ಲ ಎಂದು ಸ್ಪಷ್ಟವಾಗಿ ಹೇಳುತ್ತವೆ. ಸೂರ್ಯ ಗ್ರಹಣವು ಬಹಳ ಅಪರೂಪದ ಖಗೋಳ ಘಟನೆಯಾಗಿದೆ. ಸೂರ್ಯ ಗ್ರಹಣದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನು ಒಂದೇ ಸಮನಾದ ರೇಖೆಯಲ್ಲಿ ಇರುತ್ತಾರೆ. ಈ ಸಮಯದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ

ಇಂದು ಭಾಗಶಃ ಸೂರ್ಯಗ್ರಹಣ| ಗ್ರಹಣದ ಅವಧಿ, ಸೂತಕ ಮಾಹಿತಿಗಳು ಇಲ್ಲಿದೆ… Read More »

ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಈ ಒಂದು ಉಘಟನೆ ಮಾಸುವ ಮುನ್ನವೇ ಹಾಸನದಲ್ಲಿ ಮತ್ತೊಂದು ಘಟನೆ ನಡೆದಿದ್ದು ಗಣೇಶನ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದಾರೆ. ಹಾಸನದಲ್ಲಿ ಗಣೇಶನಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆಯಲಾಗಿದೆ. ಬೇಲೂರು ಪಟ್ಟಣದಲ್ಲಿ ಕಿಡಿಗೇಡಿಗಳಿಂದ ನೀಚತನ ನಡೆದಿದ್ದು, ಎರಡು ಚಪ್ಪಲಿಗಳಿಗೆ ದಾರ ಕಟ್ಟಿ ಗಣೇಶನ ಮೂರ್ತಿಗೆ

ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು Read More »

ದ್ವಾದಶ ರಾಶಿಗಳ ವಾರಭವಿಷ್ಯ| ಸೆ.22ರಿಂದ 28ರವರೆಗೆ…

ಸಮಗ್ರ ನ್ಯೂಸ್: ಈ ವಾರ ನವರಾತ್ರಿಯ ಪರ್ವಕಾಲವಿದ್ದು, ವಿವಿಧ ಹಬ್ಬಗಳು ಮತ್ತು ಉತ್ಸವಗಳನ್ನು ಆಚರಿಸಲಾಗುತ್ತದೆ. ಗ್ರಹಗಳ ಸ್ಥಿತಿಯನ್ನು ಪರಿಗಣಿಸಿ, ಈ ವಾರದ ಫಲಗಳನ್ನು ವಿವರಿಸಲಾಗಿದೆ. ಮೇಷ ರಾಶಿ:ಮೇಷ ರಾಶಿಯ ಜನರಿಗೆ ಈ ವಾರವು ಅತ್ಯಂತ ಶುಭಫಲವನ್ನು ತರುವ ವಾರವಾಗಿರಲಿದೆ, ನಿಮ್ಮ ಹಲವಾರು ಕೆಲಸಗಳಲ್ಲಿ ಯಶಸ್ಸು ಇರಲಿದೆ. ನೀವು ನಿಮ್ಮ ವಿರೋಧಿಗಳ ಬಗ್ಗೆಯೂ ಅತ್ಯಂತ ಜಾಗರೂಕರಾಗಿರಬೇಕು. ವಾರದ ಉತ್ತರಾರ್ಧದಲ್ಲಿ ಕೆಲಸದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ದೀರ್ಘ ಅಥವಾ ಅಲ್ಪಾವಧಿಯ ಪ್ರಯಾಣಕ್ಕೆ ಅವಕಾಶಗಳು ಇರುತ್ತವೆ. ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಹೆಚ್ಚು ಶುಭ

ದ್ವಾದಶ ರಾಶಿಗಳ ವಾರಭವಿಷ್ಯ| ಸೆ.22ರಿಂದ 28ರವರೆಗೆ… Read More »

ಮಲೆಯಾಳಂನ ಖ್ಯಾತ ನಟ ಮೋಹನ್ ಲಾಲ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಸಮಗ್ರ ನ್ಯೂಸ್: ಖ್ಯಾತ ನಟ, ಮಲಯಾಳಂ ಸೂಪರ್‌ ಸ್ಟಾರ್ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಪ್ರಕಟಿಸಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ದಂತಕಥೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ” ಎಂದು ಸಚಿವಾಲಯ ಎಕ್ಸ್ ಪೋಸ್ಟ್‌ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 23 ರಂದು ನಡೆಯಲಿರುವ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಮೋಹನ್ ಲಾಲ್

ಮಲೆಯಾಳಂನ ಖ್ಯಾತ ನಟ ಮೋಹನ್ ಲಾಲ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ Read More »

ಮೂಡಿಗೆರೆ ಬಿಜಿಎಸ್ ವಿಎಸ್ ಪಿಯು ಕಾಲೇಜು ತ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್: ಸೆ.19 ರಂದು ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ತ್ರೋಬಾಲ್ ವಿಭಾಗದಲ್ಲಿ ಮೂಡಿಗೆರೆ ಪಟ್ಟಣದ ಬಿಜಿಎಸ್ ವಿಎಸ್ ಪದವಿ ಪೂರ್ವ ಕಾಲೇಜು ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದೆ. ಇದರೊಂದಿಗೆ ತಂಡವು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ತಂಡದ ನಾಯಕಿ ತನುಶ್ರೀ ಬೆಟ್ಟಗೆರೆ, ಉಪನಾಯಕಿ ತನ್ಸಿಯಾ, ಹಾಗೂ ಆಟಗಾರರಾದ ನೂರೆನ್, ಶ್ರೀಯಾ, ಸಂತೃಪ್ತಿ, ಹೇಮಾ ಸಿಂದೂರ, ಧನ್ಯ, ಕೀರ್ತನ, ಸಾನ್ವಿ, ಜೈಫಾ, ಅಪೇಕ್ಷಾ, ಅನ್ವಿತಾ ತಮ್ಮ ಅದ್ಭುತ ಆಟದಿಂದ

ಮೂಡಿಗೆರೆ ಬಿಜಿಎಸ್ ವಿಎಸ್ ಪಿಯು ಕಾಲೇಜು ತ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಚಿಕ್ಕಮಗಳೂರು: SSLCಯಲ್ಲಿ 92% ಅಂಕ ಗಳಿಸಿದ ಸಮೃದ್ಧ್ | ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ,PSI ದಿಲೀಪ್ ಅಭಿನಂದನೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ , ಹಾಗೂ PSI ದಿಲೀಪ್ ಅವರು SSLC ಪರೀಕ್ಷೆಯಲ್ಲಿ 92% ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿರುವ ಸಮೃದ್ಧ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಬಣಕಲ್ ನಜರತ್ ಶಾಲೆಯ ವಿದ್ಯಾರ್ಥಿ ಸಮೃದ್ಧ್ ಅವರು ICSE SSLC ಪರೀಕ್ಷೆಯಲ್ಲಿ 92% ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾರೆ. ಸಮೃದ್ಧ್ ಅವರು ಬಾಳೂರು ಹೆಡ್ ಕಾನ್ಸ್ಟೆಬಲ್ ನಂದೀಶ್ ಅವರ ಪುತ್ರ. ಚಿಕ್ಕಮಗಳೂರು

ಚಿಕ್ಕಮಗಳೂರು: SSLCಯಲ್ಲಿ 92% ಅಂಕ ಗಳಿಸಿದ ಸಮೃದ್ಧ್ | ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ,PSI ದಿಲೀಪ್ ಅಭಿನಂದನೆ Read More »

‘ ದೀಪಿಕಾ’ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಲೋಕಾರ್ಪಣೆ| ಉನ್ನತ ಶಿಕ್ಷಣಕ್ಕೆ ಸಿಗಲಿದೆ 30,000

ಸಮಗ್ರ ನ್ಯೂಸ್: ಸರ್ಕಾರಿ ಶಾಲಾಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ.ಗಳಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ದೀಪಿಕಾ ವಿದ್ಯಾರ್ಥಿ ವೇತನ ಕಾರ್ಯಕ್ರಮದಿಂದ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೆ.19 ರಂದು ಉನ್ನತ ಶಿಕ್ಷಣ ಇಲಾಖೆ ಮತ್ತು ಅಜಿಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗಾಗಿ (ದೀಪಿಕಾ) ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿ, ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜರಾದ

‘ ದೀಪಿಕಾ’ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಲೋಕಾರ್ಪಣೆ| ಉನ್ನತ ಶಿಕ್ಷಣಕ್ಕೆ ಸಿಗಲಿದೆ 30,000 Read More »

ಹವಾಮಾನ ವರದಿ| ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕದ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಸಕ್ರಿಯವಾಗಿದ್ದು, ಕರಾವಳಿ ಕರ್ನಾಟಕದಲ್ಲಿಯೂ ಪರಿಣಾಮ ಬೀರುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ, ಒಳನಾಡಿನ ಹಲವು ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ವಾಯುಭಾರ ಕುಸಿತ ಸಂಭವಿಸಿರುವ ಕಾರಣ ರಾಜ್ಯದಲ್ಲಿ ಮುಂದಿನ 5 ದಿನಗಳ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳು, ಚಿತ್ರದುರ್ಗದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ,

ಹವಾಮಾನ ವರದಿ| ಮತ್ತೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ Read More »

ಜಾತಿಗಣತಿ ವಿರುದ್ದ ತಿರುಗಿ ಬಿದ್ದ ಒಕ್ಕಲಿಗ ಸಮುದಾಯ| ಇಂದು(ಸೆ.20) ಬೆಂಗಳೂರಿನಲ್ಲಿ ಮಹತ್ವದ ಸಭೆ| ಡಿಕೆಶಿ, ಹೆಚ್ ಡಿಕೆ, ಆರ್ ಅಶೋಕ್ ಭಾಗಿ ಸಾಧ್ಯತೆ

ಸಮಗ್ರ ನ್ಯೂಸ್: ಜಾತಿ ಗಣತಿಯು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ಕಾರಣಕ್ಕೆ ಒಕ್ಕಲಿಗ ಸಮುದಾಯವು ಇಂದು (ಸೆ.20) ಮಹತ್ವದ ಸಭೆ ಕರೆಯುವ ಮೂಲಕ ತನ್ನ ನಿಲುವು ಸ್ಪಷ್ಟಪಡಿಸಲು ಮುಂದಾಗಿದೆ. ಬೆಂಗಳೂರಿನ ವಿಜಯ ನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಈ ಸಭೆ ನಡೆಯಲಿದ್ದು, ಸಮುದಾಯದ ಪ್ರಮುಖ ನಾಯಕರು ಮತ್ತು ಮಠಾಧೀಶರು ಭಾಗವಹಿಸಲಿದ್ದಾರೆ. ನಿರ್ಮಲಾನಂದ ಶ್ರೀಗಳು ಕರೆದಿರುವ ಒಕ್ಕಲಿಗರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ

ಜಾತಿಗಣತಿ ವಿರುದ್ದ ತಿರುಗಿ ಬಿದ್ದ ಒಕ್ಕಲಿಗ ಸಮುದಾಯ| ಇಂದು(ಸೆ.20) ಬೆಂಗಳೂರಿನಲ್ಲಿ ಮಹತ್ವದ ಸಭೆ| ಡಿಕೆಶಿ, ಹೆಚ್ ಡಿಕೆ, ಆರ್ ಅಶೋಕ್ ಭಾಗಿ ಸಾಧ್ಯತೆ Read More »