March 2024

ಎಲ್​​ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ| ಪ್ರಧಾನಿ ಮೋದಿಯಿಂದ ಭರ್ಜರಿ ಗಿಫ್ಟ್

ಸಮಗ್ರ ನ್ಯೂಸ್: ಇಂದು ಅಂತರಾಷ್ಟ್ರೀಯ ಮಹಿಳಾ ದಿನ ಈ ದಿನವೇ ಪ್ರಧಾನಿ ಮೋದಿ ದೇಶದ ಜನತೆಗೆ ಉಡುಗೊರೆ ನೀಡಿದ್ದು, ಎಲ್​​ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಸಂದೇಶ ಪ್ರಕಟಿಸಿರುವ ಮೋದಿ, ದೇಶದ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಒಂದು ಕಡೆ ಲೋಕ ಸಭಾ ಚುನಾವಣೆ ಮುಂದೆ ಬರುತ್ತಿದೆ. ಇದೆ ಸಮಯದಲ್ಲಿ ಸಿಲಿಂಡರ್ ಬೆಲೆ […]

ಎಲ್​​ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ| ಪ್ರಧಾನಿ ಮೋದಿಯಿಂದ ಭರ್ಜರಿ ಗಿಫ್ಟ್ Read More »

ಇಂದು ಮಹಾಶಿವರಾತ್ರಿ| ಪರಶಿವನ ಆರಾಧನೆ ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರದೆ, ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಹಬ್ಬದ ಕುರಿತು ಅನೇಕ ಕಥೆಗಳಿವೆ. ​ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಗೆ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನ ಮಹಾಶಿವರಾತ್ರಿ. ಅಲ್ಲದೆ, ದೇವತೆ ಹಾಗೂ

ಇಂದು ಮಹಾಶಿವರಾತ್ರಿ| ಪರಶಿವನ ಆರಾಧನೆ ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಲೋಕಸಭಾ ಚುನಾವಣೆ/ ಮತ್ತೆ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವಕರಿಗೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ನೀಡಿದ್ದು, ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ ಭಾರತದಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ತುಂಬಿಲ್ಲ.

ಲೋಕಸಭಾ ಚುನಾವಣೆ/ ಮತ್ತೆ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ರಾಹುಲ್ Read More »

ಕೇರಳ ಮಾಜಿ ಸಿಎಂ ದಿ. ಕೆ. ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆ

ಸಮಗ್ರ ನ್ಯೂಸ್: ಕೇರಳ ಮಾಜಿ ಸಿಎಂ, ಕಾಂಗ್ರೆಸ್ ದಿಗ್ಗಜ ದಿ. ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೆಲವು ಸಮಯದ ಹಿಂದೆ ತಮ್ಮ ಪಕ್ಷಾಂತರದ ವರದಿಗಳನ್ನು ತಳ್ಳಿಹಾಕುವ ಫೇಸ್ ಬುಕ್ ಪೋಸ್ಟ್ ಅಳಿಸಿದ ಬಳಿಕ ಬಿಜೆಪಿಗೆ ಸೇರುತ್ತಾರೆ ಎಂಬುದು ಖಚಿತವಾಗಿತ್ತು.ಇದೀಗ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕೇರಳ ಮಾಜಿ ಸಿಎಂ ದಿ. ಕೆ. ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆ Read More »

ಉಜ್ವಲ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿ/ ಮತ್ತೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ

ಸಮಗ್ರ ನ್ಯೂಸ್: ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿಯನ್ನು ಮುಂದಿನ ವರ್ಷ ಮಾರ್ಚ್ ತಿಂಗಳ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಳೆದ ಅಕ್ಟೋಬರ್‍ನಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡುತ್ತಿದ್ದ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್, 14.2 ಕೆಜಿ ಎಲ್‍ಪಿಜಿ ಸಿಲಿಂಡರ್‍ಗೆ ನೀಡುತ್ತಿದ್ದ 300 ರೂಪಾಯಿ ಸಬ್ಸಿಡಿ ಯೋಜನೆ ಲಾಭವನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಣೆಯಾಗಿದೆ. ಪ್ರತಿ

ಉಜ್ವಲ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿ/ ಮತ್ತೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ Read More »

ಕಸಾಪ: ಸಂಘಟನಾ ಕಾರ್ಯದರ್ಶಿಗಳ ನೇಮಕ

ಸಮಗ್ರ ನ್ಯೂಸ್ :ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಸಂಘಟಕರುಗಳಾದ ಕಾ.ವೀ. ಕೃಷ್ಣದಾಸ್ ಮತ್ತು ಗುರು ಪ್ರಸಾದ್ ಕಡಂಬಾರ್ ಅವರನ್ನು ನೇಮಕ ಮಾಡಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್ ರೇವಣ್ಕರ್ ಅವರು ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕ್ರಿಯಾಶೀಲವಾಗಿರಿಸಲು ಜಿಲ್ಲಾಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅವರ ಸೂಚನೆಯಂತೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ

ಕಸಾಪ: ಸಂಘಟನಾ ಕಾರ್ಯದರ್ಶಿಗಳ ನೇಮಕ Read More »

ಉಡುಪಿಯಲ್ಲಿ ರಸ್ತೆ ಅಪಘಾತ: ಗರ್ಭಿಣಿ ಮಂಗ ಮೃತ್ಯು

ಸಮಗ್ರ ನ್ಯೂಸ್: ಗರ್ಭಿಣಿ ಮಂಗವೊಂದು ರಸ್ತೆ ದಾಟುತ್ತಿದ್ದಾಗ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಗವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ದೊಡ್ಡರಂಗಡಿಯ ಪ್ರವೀಣ್ ಶೆಟ್ಟಿಯವರ ಸಹಕಾರದೊಂದಿಗೆ ಬೈಲೂರಿನ ಪಶು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯ ಡಾ. ವಾಗೇಶ್ ಚಿಕಿತ್ಸೆ ನೀಡಿದರೂ ಮಂಗಕ್ಕೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದೆ. ಬಳಿಕ ಮಂಗದ ಕಳೇಬರವನ್ನು ನಿತ್ಯಾನಂದ ಒಳಕಾಡು ಅವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇನ್ನು ಮಂಗದ

ಉಡುಪಿಯಲ್ಲಿ ರಸ್ತೆ ಅಪಘಾತ: ಗರ್ಭಿಣಿ ಮಂಗ ಮೃತ್ಯು Read More »

ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗಕ್ಕೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ವಿಜಯನಗರ ಜಿಲ್ಲಾ ಪಂಚಾಯತ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಟೆಕ್ನಿಕಲ್ ಅಸಿಸ್ಟೆಂಟ್, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 11, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- 3ಟೆಕ್ನಿಕಲ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್​)- 4ಟೆಕ್ನಿಕಲ್ ಅಸಿಸ್ಟೆಂಟ್ (ಸಿರಿಕಲ್ಚರ್)-2ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್ರಿ)- 3ಡೇಟಾ ಎಂಟ್ರಿ ಆಪರೇಟರ್(DEO) -1 ವಿದ್ಯಾರ್ಹತೆ:ಟೆಕ್ನಿಕಲ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- ಅಗ್ರಿಕಲ್ಚರ್​​ನಲ್ಲಿ ಪದವಿಟೆಕ್ನಿಕಲ್

ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗಕ್ಕೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ Read More »

ಪುತ್ತೂರು ನಗರದಲ್ಲಿ ಹದಗೆಟ್ಟ ರಸ್ತೆ: ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್ :ಪುತ್ತೂರು ನಗರದ ಪ್ರಮುಖ ರಸ್ತೆಗಳು ವಾಹನ ಸಂಚಾರಕ್ಕೆ ಅಸಾಧ್ಯವಾಗಿರುವ ರೀತಿಯಲ್ಲಿ ಇದ್ದು ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಪುತ್ತೂರು ಗಾಂಧಿಕಟ್ಟೆ ಬಳಿ ರಸ್ತೆ ಗುಜರಿಯಂತಾಗಿದೆ, ವಿಶ್ವಕರ್ಮ ಸಭಾಭವನದ ಬಳಿಯಲ್ಲಿ ಹದೆಗೆಟ್ಟಿರುವ ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿ ದುರಸ್ಥಿಗೊಳಿಸಬೇಕೆಂದು ಪುತ್ತಿಲ ಪರಿವಾರ ನಗರಸಭೆ ಪೌರಾಯುಕ್ತ ಮಧುಕುಮಾರ್ ರವರಿಗೆ ಮನವಿ ಸಲ್ಲಿಸಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ. ಮುಂದಿನ ದಿವಸಗಳಲ್ಲಿ ರಸ್ತೆ ತಡೆಮಾಡಿ ಪ್ರತಿಭಟನೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ

ಪುತ್ತೂರು ನಗರದಲ್ಲಿ ಹದಗೆಟ್ಟ ರಸ್ತೆ: ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ Read More »

ಮಾ.8, 9ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ‘ಮಹಿಳಾ ಚೈತನ್ಯ ದಿನ’

ಸಮಗ್ರ ನ್ಯೂಸ್ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಈ ವರ್ಷದ ‘ಮಹಿಳಾ ಚೈತನ್ಯ ದಿನ’ವನ್ನು ಮಾ.8 ಮತ್ತು 9ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಒಕ್ಕೂಟದ ಅಖಿಲಾ ವಿದ್ಯಾಸಂದ್ರ ಬೆಂಗಳೂರು ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಪೆಬ್ ದಾಳಿ ಹಾಗೂ ಹೊಸದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು 2013ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ

ಮಾ.8, 9ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ‘ಮಹಿಳಾ ಚೈತನ್ಯ ದಿನ’ Read More »