March 2024

ಕಾಂಗ್ರೆಸ್ ಸೇರಿದ ಕೆ. ಜಯಪ್ರಕಾಶ್ ಹೆಗ್ಡೆ

ಸಮಗ್ರ ನ್ಯೂಸ್: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಮತ್ತಿತರರನ್ನು, ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ, ಕೆ ಜೆ ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಳರ್, ಉಡುಪಿ ಮತ್ತು ಚಿಕ್ಕಮಗಳೂರಿನ ಹಲವು ನಾಯಕರು ಪಾಲ್ಗೊಂಡಿದ್ದರು. ಜಯಪ್ರಕಾಶ್ ಹೆಗ್ಡೆ ಅವರನ್ನು ಉಡುಪಿ ಚಿಕ್ಕಮಗಳೂರಿಗೆ […]

ಕಾಂಗ್ರೆಸ್ ಸೇರಿದ ಕೆ. ಜಯಪ್ರಕಾಶ್ ಹೆಗ್ಡೆ Read More »

ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ/ ನೀರು ಪೂರೈಕೆ 20% ರಷ್ಟು ಕಡಿತ

ಸಮಗ್ರ ನ್ಯೂಸ್: ಬೃಹತ್ ಪ್ರಮಾಣದಲ್ಲಿ ನೀರನ್ನು ಬಳಸುವ ಕಂಪನಿಗಳು, ಆಸ್ಪತ್ರೆಗಳು, ರೈಲ್ವೆ, ವಿಮಾನ ನಿಲ್ದಾಣಗಳಿಗೆ 20% ರಷ್ಟು ನೀರು ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ರಾಜಧಾನಿಯಲ್ಲಿನ ಕುಡಿಯುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಬೆಂಗಳೂರು ನೀರು ಸರಬರಾಜು ಮಂಡಳಿ ನಿರ್ಧರಿಸಿದೆ. ಮಂಡಳಿಯು ಬೆಂಗಳೂರಿನಲ್ಲಿ ದೊಡ್ಡ ನೀರು ಸರಬರಾಜು ಜಾಲಗಳನ್ನು ಹೊಂದಿರುವ ಗ್ರಾಹಕರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಬೃಹತ್ ಪ್ರಮಾಣದಲ್ಲಿ ನೀರನ್ನು ಪಡೆಯುವ 3 ಲಕ್ಷ ಸಂಸ್ಥೆಗಳಿದ್ದು ಏಪ್ರಿಲ್ 1 ರಿಂದ 20% ರಷ್ಟು ನೀರು ಪೂರೈಕೆಯನ್ನು ಸಂಪೂರ್ಣವಾಗಿ

ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ/ ನೀರು ಪೂರೈಕೆ 20% ರಷ್ಟು ಕಡಿತ Read More »

ಕಳೆದುಹೋದ ಮೊಬೈಲ್ ಪೋನ್‍ಗಳು/ ಕಂಡುಹಿಡಿಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿ

ಸಮಗ್ರ ನ್ಯೂಸ್: ಕಳೆದುಹೋದ ಮೊಬೈಲ್ ಪೋನ್‍ಗಳನ್ನು ಕಂಡುಹಿಡಿಯುವಲ್ಲಿ ಮತ್ತು ಮರುಪಡೆಯುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸಿಇಐಆರ್ ಪೋರ್ಟಲ್‍ನಲ್ಲಿ ಮೊಬೈಲ್ ಸಾಧನಗಳ ನವೀಕರಣದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. 2,06,905 ಲಕ್ಷ ಮೊಬೈಲ್ ಪೋನ್ ಪ್ರಕರಣಗಳು ಸಿಇಐಆರ್ (ಸೆಂಟ್ರಲ್ ಈಕ್ವಿಪ್ಟೆಂಟ್ ಐಡೆಂಟಿಟಿ ರಿಜಿಸ್ಟ್ರಿ) ಪೋರ್ಟಲ್‍ನಲ್ಲಿ ದಾಖಲಾಗಿವೆ. ಇವುಗಳಲ್ಲಿ 89,794 ಸೆಲ್ ಪೋನ್‍ಗಳ ಉಲ್ಲೇಖಗಳು ಕಂಡುಬಂದಿವೆ. ಪೋಲೀಸರು 29,550 ಮೊಬೈಲ್ ಗಳನ್ನು ಪತ್ತೆ ಮಾಡಿದ್ದಾರೆ. ಇದರಿಂದ ಕದ್ದ ಮೊಬೈಲ್ ಪೋನ್ ಗಳನ್ನು ವಾಪಸ್ ಪಡೆಯುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ.

ಕಳೆದುಹೋದ ಮೊಬೈಲ್ ಪೋನ್‍ಗಳು/ ಕಂಡುಹಿಡಿಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿ Read More »

ನೂತನ ಚುನಾವಣಾ ಆಯುಕ್ತರ ಆಯ್ಕೆ/ ಮೋದಿ ನೇತೃತ್ವದಲ್ಲಿ ಮಾರ್ಚ್ 14 ರಂದು ಸಭೆ

ಸಮಗ್ರ ನ್ಯೂಸ್: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ ಹಾಗೂ ಅನೂಪ್ ಚಂದ್ರ ಪಾಂಡೆ ರಾಜೀನಾಮೆ ಹಿನ್ನೆಲೆಯಲ್ಲಿ ಖಾಲಿ ಇರುವ ಎರಡು ಚುನಾವಣಾ ಆಯುಕ್ತರ ಹುದ್ದೆಗಳ ಭರ್ತಿ ಪ್ರಕ್ರಿಯೆ ಚುರುಕುಗೊಂಡಿದ್ದು, ಮಾ.14ರಂದು ಉನ್ನತಾಧಿಕಾರಿಗಳ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ಚುನಾವಣಾ ಸಮಿತಿಯು ಚುನಾವಣಾ ಆಯೋಗವನ್ನು ಆಯ್ಕೆ ಮಾಡಲು ಮಾರ್ಚ್ 14 ರಂದು ಸಭೆ ನಡೆಸಲು ನಿರ್ಧರಿಸಿದೆ. ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಸಭೆ ನಡೆಯಲಿದೆ ಎಂದು

ನೂತನ ಚುನಾವಣಾ ಆಯುಕ್ತರ ಆಯ್ಕೆ/ ಮೋದಿ ನೇತೃತ್ವದಲ್ಲಿ ಮಾರ್ಚ್ 14 ರಂದು ಸಭೆ Read More »

ಇಂದಿನಿಂದ ಸ್ವಯಂಚಾಲಿತ ಮ್ಯುಟೇಶನ್ ಮಾಹಿತಿ ಪರಿಷ್ಕರಣೆ ಜಾರಿ| ಎ.1 ರಿಂದ RTC ಗೆ ಆಧಾರ್ ಜೋಡಣೆ ಕಡ್ಡಾಯ

ಸಮಗ್ರ ನ್ಯೂಸ್: ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ದಾಖಲಿಸುವ ಮ್ಯುಟೇಷನ್‌ ಕ್ರಮವನ್ನು ಸ್ವಯಂಚಾಲಿತ ವ್ಯವಸ್ಥೆ ಇಂದಿನಿಂದ ಜಾರಿಯಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಂದಾಯ ಇಲಾಖೆಯ ಸೇವೆಯಾಗಿರುವ ಪಹಣಿಯಲ್ಲಿ ರಾಜ್ಯದ ರೈತರ ಬ್ಯಾಂಕ್ ಸಾಲ, ತೀರುವಳಿ ಸೇರಿದಂತೆ ವಿವಿಧ ಮಾಹಿತಿಗಳು ಗ್ರಾಮಾಧಿಕಾರಿಗಳು ದೃಢೀಕರಣದ ನೀಡಿದ ನಂತರ ದಾಖಲಾಗುತ್ತಿದ್ದವು. ಆದರೇ ಇನ್ನು ಮುಂದೆ ಪಹಣಿಯಲ್ಲಿ ಈ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗಲಿವೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ,

ಇಂದಿನಿಂದ ಸ್ವಯಂಚಾಲಿತ ಮ್ಯುಟೇಶನ್ ಮಾಹಿತಿ ಪರಿಷ್ಕರಣೆ ಜಾರಿ| ಎ.1 ರಿಂದ RTC ಗೆ ಆಧಾರ್ ಜೋಡಣೆ ಕಡ್ಡಾಯ Read More »

ಸಿಂಹ ಸೆರೆಗೆ ಬೋನು ಇಡ್ತಾರಾ ‘ಕೈ’ ಟ್ರಬಲ್ ಶೂಟರ್ |ಕುತೂಹಲ ಮೂಡಿಸಿದ ಮೈಸೂರು ಟಿಕೆಟ್ ಫೈಟ್

ಸಮಗ್ರ ನ್ಯೂಸ್: ರಾಜ್ಯದ ಟ್ರಬಲ್ ಶೂಟರ್ ಇದೀಗ ಮೈಸೂರಿನ ಚುನಾವಣೆ ಅಖಾಡಕ್ಕೆ ಇಳಿದಿದ್ದು, ಟಿಕೆಟ್ ವಂಚಿತ ಪ್ರಭಾವಿ ಒಕ್ಕಲಿಗ ಯುವ ನಾಯಕ ಪ್ರತಾಪ್ ಸಿಂಹರನ್ನು ಕಾಂಗ್ರೆಸ್ ಗೆ ಕರೆತರಲು ಪ್ಲ್ಯಾನ್ ರೆಡಿಯಾಗ್ತಿರುವ ಸುದ್ದಿ ಹರಿದಾಡ್ತಿದೆ. ಈ ನಡುವೆ ತವರು ನೆಲದಲ್ಲಿನ ಬೆಳವಣಿಗೆ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವಂತಹ ಮಾಸ್ಟರ್ ಸ್ಟ್ರೋಕ್ ಗೆ ಕೈ ಹಾಕಿರುವುದು ಕಾಂಗ್ರೆಸ್ ಆಪ್ತವಲಯದಿಂದ ಮಾಹಿತಿ ಹೊರಬಿದ್ದಿದೆ. ಸಿದ್ದರಾಮಯ್ಯರನ್ನು ಮಟ್ಟಹಾಕಲು ಅವರ ಹುಟ್ಟೂರಿನಲ್ಲೇ ಓರ್ವ

ಸಿಂಹ ಸೆರೆಗೆ ಬೋನು ಇಡ್ತಾರಾ ‘ಕೈ’ ಟ್ರಬಲ್ ಶೂಟರ್ |ಕುತೂಹಲ ಮೂಡಿಸಿದ ಮೈಸೂರು ಟಿಕೆಟ್ ಫೈಟ್ Read More »

ಮಂಗಳೂರು: ಜೀವ ಬೆದರಿಕೆ ಆರೋಪ: ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಉಳ್ಳಾಲ ಠಾಣಾಧಿಕಾರಿ ಎಚ್.ಎನ್.ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ನ ಮಹಿಳಾ ಕಾರ್ಯದರ್ಶಿಗೆ ಅಡ್ಡಿಪಡಿಸುವುದು, ಹಲ್ಲೆ ಮಾಡುವುದು ಮತ್ತು ಜೀವ ಬೆದರಿಕೆ ಹಾಕಿರುವುದು ಆರೋಪದಲ್ಲಿ ಉಲ್ಲೇಖಿಸಲಾಗಿದೆ. ಕೊಣಾಜೆ ಗ್ರಾಮದ ಸರ್ವೆ ನಂ.149ರಲ್ಲಿ ಎರಡು ಎಕರೆ ಜಮೀನನ್ನು ಟ್ರಸ್ಟ್ಗೆ ಮಂಜೂರು ಮಾಡಲಾಗಿದೆ. ಜನವರಿ 26ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಟ್ರಸ್ಟ್ನ ಕಾರ್ಯದರ್ಶಿ ಲತಾ ರೈ, ಸದಸ್ಯರಾದ ಡಾ.ಸಿ.ಎನ್.ಶಂಕರ್ ರಾವ್ ಮತ್ತು ಪ್ರೊ.ಕೆ.ಎಂ.ಬಾಲಕೃಷ್ಣ ಅವರೊಂದಿಗೆ ನಿವೇಶನದ ಗಡಿಭಾಗಕ್ಕೆ ತೆರಳಿದ್ದರು.

ಮಂಗಳೂರು: ಜೀವ ಬೆದರಿಕೆ ಆರೋಪ: ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು Read More »

ಕಾಂಗ್ರೆಸ್ ಕಾರ್ಯಕರ್ತನ ಕೊಲೆ: ಮರಕ್ಕೆ ನೇತು ಹಾಕಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್ : ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಂದು ಮರಕ್ಕೆ ನೇತು ಹಾಕಿರುವ ಭೀಕರ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಜಮೀನೊಂದರಲ್ಲಿ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ಕಾರ್ಯಕರ್ತ ಡೋಣಿ ಗ್ರಾಮದ ಶರಣಪ್ಪ ಸಂದಿಗೌಡ್ರ ಎಂದು ತಿಳಿದುಬಂದಿದೆ. ಕೊಲೆಗೂ ಮುನ್ನ ಶರಣಪ್ಪ ಸಂದಿಗೌಡ್ರರನ್ನು ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಖಾರದ ಪುಡಿ ಎರಚಿ

ಕಾಂಗ್ರೆಸ್ ಕಾರ್ಯಕರ್ತನ ಕೊಲೆ: ಮರಕ್ಕೆ ನೇತು ಹಾಕಿದ ದುಷ್ಕರ್ಮಿಗಳು Read More »

ಕುಂದಾಪುರ: ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಸಾವು

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಕುಂದಾಪುರದ ಹೆಂಗವಳ್ಳಿ ಗ್ರಾಮದ ಒಳಗುಡ್ಡೆ ತೊಂಬತ್ತು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಕೃಷ್ಣ ಎಂಬವರ ಮಗಳು 10 ನೇ ತರಗತಿ ವಿದ್ಯಾರ್ಥಿನಿ ಅಕ್ಷಯ (16) . ಅಮಾಸೆಬೈಲು ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಕ್ಷಯ ಎಂದಿನಂತೆ ನಿನ್ನೆ ಸಂಜೆ ಶಾಲೆ ಮುಗಿಸಿ ವಾಪಾಸ್ಸು ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಬಾವಿಯ ನೀರನ್ನು ಕೃಷಿ ಅಡಿಕೆ ತೋಟಕ್ಕೆ ಬೀಡಲು ಬಾವಿಯ

ಕುಂದಾಪುರ: ಕಾಲು ಜಾರಿ ಬಾವಿಗೆ ಬಿದ್ದು ಬಾಲಕಿ ಸಾವು Read More »

ಬೈಂದೂರು: ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ವ್ಯಕ್ತಿ ಸಮುದ್ರಪಾಲು

ಸಮಗ್ರ ನ್ಯೂಸ್ : ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ನೇಜಿ ಮೊಹಮ್ಮದ್ ರಿಜ್ವಾನ್ (33) ಮೃತಪಟ್ಟರು. ಇವರು ನಿನ್ನೆ ರಾತ್ರಿಯಿಂದ ಇಂದು ಬೆಳಿಗ್ಗಿನ ಅವಧಿಯಲ್ಲಿ ಬೈಂದೂರಿನ ಶಿರೂರು ಗ್ರಾಮದ ಶಿರೂರು ಅಳಿವೆಗದ್ದೆ ಬಂದರಿನ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಸಂಬಂಧಿ ನೀಡಿದ

ಬೈಂದೂರು: ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ವ್ಯಕ್ತಿ ಸಮುದ್ರಪಾಲು Read More »