March 2024

ಬಂಟ್ವಾಳ: ಜಮೀನಿನ ಮಾಲಕನಿಗೆ ಜೀವ ಬೇದರಿಕೆ- ಹಲ್ಲೆ..!

ಸಮಗ್ರ ನ್ಯೂಸ್ : ವ್ಯಕ್ತಿಯೋರ್ವರ ಕೃಷಿಯೇತರ ಜಾಗದಲ್ಲಿ ಸುತ್ತಲೂ ಅಳವಡಿಸಿದ್ದ ಬೇಲಿ ಹಾಳಾಗಿದ್ದ ಬೇಲಿಯ ಕಂಬಗಳನ್ನು ರಿಪೇರಿ ಮಾಡುತ್ತಿದ್ದ ವೇಳೆ ತಂಡವೊಂದು ಅಕ್ರಮ ಪ್ರವೇಶಿಸಿ ಜಮೀನಿನ ಮಾಲಿಕನಿಗೆ ಜೀವ ಬೇದರಿಕೆ ಒಡ್ಡಿ, ಹಲ್ಲೆ ನಡೆಸಿ ಕೃಷಿ ಕೃತಗಳಿಗೆ ಹಾನಿ ಮಾಡಿದ ಘಟನೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಜೆರಾಲ್ಡ್ ಗ್ರೇಶನ ಡಿ ಸೋಜ, ಆಂದ್ರು ಡಿ ಸೋಜ, ಚಾಲ್ಸ್ ಡಿ ಸೋಜ, ಅಸ್ಟಿನ್ ಡಿ ಸೋಜ ಎಂದು ಗುರುತಿಸಲಾಗಿದೆ. ಕಳ್ಳಿಗೆ ಗ್ರಾಮ, ಬಂಟ್ವಾಳ ನಿವಾಸಿ […]

ಬಂಟ್ವಾಳ: ಜಮೀನಿನ ಮಾಲಕನಿಗೆ ಜೀವ ಬೇದರಿಕೆ- ಹಲ್ಲೆ..! Read More »

ಸೇತುವೆಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು

ಸಮಗ್ರ ನ್ಯೂಸ್ : ವಿದ್ಯಾರ್ಥಿಯೋರ್ವ ಎರಡು ಸೇತುವೆಗಳ ನಡುವಿನ ಅಂತರವನ್ನು ಜಿಗಿಯಲು ಪ್ರಯತ್ನಿಸುವಾಗ ವಿದ್ಯಾರ್ಥಿ ಬಿದ್ದು ಸಾವನ್ನಪ್ಪಿದ ಘಟನೆ ಕಣ್ಣೂರಿನ ನೆಟ್ಟೂರಿನ ಮುಳಪಿಲಂಗಾಡ್ ತಲಕ್ಕೇರಿ-ಮಾಹಿ ಬೈಪಾಸ್‌ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಮಹಮ್ಮದ್ ನಿದಾನ್ (18) ಎಂದು ಗುರುತಿಸಲಾಗಿದೆ. ನೆಟ್ಟೂರಿನಿಂದ ಇನ್ನೂರು ಮೀಟರ್ ದೂರದಲ್ಲಿ ಮುಳಪಿಲಂಗಾಡ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಎರಡು ಸೇತುವೆಗಳ ನಡುವಿನ ಅಂತರವನ್ನು ಜಿಗಿಯಲು ಪ್ರಯತ್ನಿಸುವಾಗ ವಿದ್ಯಾರ್ಥಿ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ತಲಕ್ಕೇರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನೆಟ್ಟೂರು ಸೇತುವೆ

ಸೇತುವೆಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು Read More »

ಇಂದು ಡಾ .ಸಿ.ಎನ್ ಮಂಜುನಾಥ್ ಬಿಜೆಪಿ ಪಕ್ಷ ಸೇರ್ಪಡೆ..!

ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಡಾ.ಸಿ.ಎನ್ ಮಂಜುನಾಥ್ ಅವರ ಹೆಸರು ಮುನ್ನೆಲೆಯಲ್ಲಿದೆ. ಡಾ.ಮಂಜುನಾಥ್ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದು ಲೋಕಸಭಾ ಚುನಾವಣೆ ಅಖಾಡಕ್ಕೆ ಬರುವುದು ಖಚಿತವಾಗಿದೆ. ಇದಕ್ಕೆಲ್ಲದ್ದಕು ಬಿಗ್ ನ್ಯೂಸ್ ಆಗಿ ಇಂದು ಡಾ .ಸಿ.ಎನ್ ಮಂಜುನಾಥ್ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಬೆಳಗ್ಗೆ10 ಗಂಟೆಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.

ಇಂದು ಡಾ .ಸಿ.ಎನ್ ಮಂಜುನಾಥ್ ಬಿಜೆಪಿ ಪಕ್ಷ ಸೇರ್ಪಡೆ..! Read More »

ಪುತ್ತೂರು : ಮಾ.14 ರಂದು ವಿದ್ಯುತ್ ನಿಲುಗಡೆ

ಸಮಗ್ರ ನ್ಯೂಸ್ : ಉಪ್ಪಿನಂಗಡಿ- ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‍ಪ್ರೆಸ್, ಕಾಂಚನ ಮತ್ತು ವಾಟರ್ ಸಪ್ಲೈ ಫೀಡರ್ ಮತ್ತು 110/33/11 ಕೆವಿ ಕಲ್ಲೇರಿ ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಮತ್ತು ಕೆಮ್ಮಾರ ಫೀಡರ್‍ನಲ್ಲಿ ಮಾ.14 ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5.30ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್

ಪುತ್ತೂರು : ಮಾ.14 ರಂದು ವಿದ್ಯುತ್ ನಿಲುಗಡೆ Read More »

ರಾಜ್ಯ ಸರಕಾರದ ವಕ್ತಾರರಾಗಿ ಐವರು ಸಚಿವರ ನೇಮಕ

ಸಮಗ್ರ ನ್ಯೂಸ್: ರಾಜ್ಯ ಸರಕಾರದ ವಕ್ತಾರರಾಗಿ ಸಚಿವರಾದ ಈಶ್ವರ ಖಂಡ್ರೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಹಾಗೂ ಕೃಷ್ಣಬೈರೇಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಗಳು, ದಾಖಲೆಗಳನ್ನು ಹಾಗೂ ಸರಕಾರದ ಮಾಹಿತಿಗಳ ಬಗ್ಗೆ ಸಚಿವರುಗಳಿಗೆ ಮಾಹಿತಿ ನೀಡಲು ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸಿಎಂ ಸೂಚಿಸಿದ್ದಾರೆ.

ರಾಜ್ಯ ಸರಕಾರದ ವಕ್ತಾರರಾಗಿ ಐವರು ಸಚಿವರ ನೇಮಕ Read More »

ಲೋಕಸಭೆ ಚುನಾವಣೆ/ ಸ್ಪರ್ಧೆಯಿಂದ ಹಿಂದೆ ಜಾರಿದ್ರಾ ಖರ್ಗೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಒಂದು ವೇಳೆ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಯಸಿದರೆ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ನಾವು ಹಿಂದ ಸರಿಯುತ್ತಿದ್ದೇವೆ ಎಂದು ಸೂಚಿಸುವುದು ತಪ್ಪು. ನನಗೆ ಈಗ 83 ವರ್ಷ. ನೀವು (ಪತ್ರಕರ್ತರು) 60-65 ವರ್ಷಕ್ಕೆ ನಿವೃತ್ತಿ ಪಡೆಯುತ್ತೀರಿ. ನಾನು 83 ಆದ ಮೇಲೆ

ಲೋಕಸಭೆ ಚುನಾವಣೆ/ ಸ್ಪರ್ಧೆಯಿಂದ ಹಿಂದೆ ಜಾರಿದ್ರಾ ಖರ್ಗೆ Read More »

ರಾಮಮಂದಿರಕ್ಕೆ ಪ್ರತಿದಿನ ಒಂದೂವರೆ ಲಕ್ಷ ಜನ ಭಕ್ತರು ಭೇಟಿ/ ಪ್ರವೇಶ ಸಂಪೂರ್ಣ ಉಚಿತ

ಸಮಗ್ರ ನ್ಯೂಸ್: ಪ್ರತೀದಿನ ರಾಮಮಂದಿರಕ್ಕೆ ಸರಾಸರಿ ಒಂದರಿಂದ ಒಂದೂವರೆ ಲಕ್ಷ ಜನ ಭಕ್ತರು ಭೇಟಿ ನೀಡುತ್ತಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ತಿಳಿಸಿದೆ. 60ರಿಂದ 70 ನಿಮಿಷದೊಳಗೆ ಶ್ರೀರಾಮ ದೇವರ ದರ್ಶನ ಮಾಡಲು ಭಕ್ತರ ಅನುಕೂಲಕ್ಕಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 6.30ರಿಂದ ಆರಂಭವಾಗಿ ರಾತ್ರಿ 9.30ರ ವರೆಗೆ ದರ್ಶನ ಸಮಯ ನಿಗದಿಪಡಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಟ್ವೀಟ್ ಮಾಡಿ ತಿಳಿಸಿದೆ. ದರ್ಶನ ಟಿಕೆಟ್ ಅನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್

ರಾಮಮಂದಿರಕ್ಕೆ ಪ್ರತಿದಿನ ಒಂದೂವರೆ ಲಕ್ಷ ಜನ ಭಕ್ತರು ಭೇಟಿ/ ಪ್ರವೇಶ ಸಂಪೂರ್ಣ ಉಚಿತ Read More »

ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾಗುತ್ತದೆ ಎಂದು 4 ವರ್ಷದ ಮಗುವಿಗೆ ಪಾತ್ರೆ ತೊಳೆಯಲು ಬಿಟ್ಟ ಪಾಪಿ ತಾಯಿ

ಸಮಗ್ರ ನ್ಯೂಸ್: ಪ್ರಿಯತಮನ ಆಸೆಗಾಗಿ ಮಕ್ಕಳಿಗೆ ಕೆಲಸಕೊಟ್ಟು ಪ್ರಿಯತಮನ ಜೊತೆ ಮಾತನಾಡುವ ಅಮಾನವೀಯ ಘಟನೆ ಚಿಕ್ಕಮಗಳೂರಿನ ಶಂಕರಮಠದಲ್ಲಿ ನಡೆದಿದೆ. ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾಗುತ್ತದೆ ಎಂದು ಪ್ರಿಯತಮನ ಮನೆಯಲ್ಲಿ ಮಗನಿಗೆ ಪಾತ್ರೆ ತೊಳೆಯಲು ಬಿಟ್ಟಿದ್ದಾಳೆ ಈ ಪಾಪಿ ತಾಯಿ. 4 ವರ್ಷದ ಈ ಮಗು ದಿನ ಪಾತ್ರೆ ತೊಳೆಯುತ್ತಿದೆಯಂತೆ. ಮಗುವಿನ ಕಷ್ಟ ನೋಡಲಾರದೆ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಪತಿ ಇದ್ದರು ಈ ನೇತ್ರಾವತಿ ಪ್ರಿಯಕರನೊಂದಿಗೆ ಲವ್ವಿಡವ್ವಿ ಆಡುತ್ತಿದ್ದಳಂತೆ.11 ವರ್ಷಗಳ ಹಿಂದೆ ಈಕೆಗೆ ಶಿವು ಜೊತೆ ವಿವಾಹವಾಗಿತ್ತು. ಈಕೆಯ

ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾಗುತ್ತದೆ ಎಂದು 4 ವರ್ಷದ ಮಗುವಿಗೆ ಪಾತ್ರೆ ತೊಳೆಯಲು ಬಿಟ್ಟ ಪಾಪಿ ತಾಯಿ Read More »

ಕಾರ್ಕಳ: ಆಸ್ತಿ ವಿಚಾರಕ್ಕೆ ಸಹೋದರನ ಕೊಲೆ: ಜೀವಾವಧಿ ಶಿಕ್ಷೆ

ಸಮಗ್ರ ನ್ಯೂಸ್ : ಆಸ್ತಿ ವಿಚಾರವಾಗಿ ಸಹೋದರನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜು ಯಾನೆ ಕಪಿಲ (38) ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.12ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾರ್ಕಳ ತಾಲೂಕು ನಿಟ್ಟೆ ಬಜಕಳ ನಿವಾಸಿ ರಾಜು ಯಾನೆ ಕಪಿಲ ಮತ್ತು ಶೇಖರ ಸಹೋದರರಾಗಿದ್ದು, ಇವರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. 2022ರ ಮಾ.6ರಂದು ಶೇಖರ ಅವರು ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ರಾಜು ಬಂದು ಗಲಾಟೆ ನಡೆಸಿ

ಕಾರ್ಕಳ: ಆಸ್ತಿ ವಿಚಾರಕ್ಕೆ ಸಹೋದರನ ಕೊಲೆ: ಜೀವಾವಧಿ ಶಿಕ್ಷೆ Read More »

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ/ ಜೂನ್ 14 ರವರೆಗೆ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು (ಆಧಾರ್ ಪ್ರಾಧಿಕಾರ) ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆಗಾಗಿ ಇದ್ದ ಅವಧಿಯನ್ನು ಜೂನ್ 14 ರವರೆಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳಲು ಮೈ ಆಧಾರ್ ಪೋರ್ಟಲ್‍ನಲ್ಲಿ ಡಿಸೆಂಬರ್ 14 ಕೊನೆ ದಿನ ನಿಗದಿ ಮಾಡಲಾಗಿತ್ತು. ನಂತರ ಶುಲ್ಕ ಸಹಿತ ನವೀಕರಣಕ್ಕೆ ಅವಕಾಶವಿತ್ತು. ಆದರೆ ಈಗ ಉಚಿತ ನವೀಕರಣ ಅವಧಿಯನ್ನು ಜೂ.14 ರವರೆಗೆ ವಿಸ್ತರಿಸಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‍ನಲ್ಲಿ ಮಾತ್ರ ಲಭ್ಯವಿದೆ.

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ/ ಜೂನ್ 14 ರವರೆಗೆ ಅವಧಿ ವಿಸ್ತರಣೆ Read More »