March 2024

ತುಮಕೂರಿನಲ್ಲಿ ತುಕಾಲಿ ಸಂತೋಷ್​ ಕಾರು ಅಪಘಾತ: ಆಟೋ ಜಖಂ

ಸಮಗ್ರ ನ್ಯೂಸ್: ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್​ ಅವರ ಕಾರು ಅಪಘಾತಕೀಡಾಗಿದೆ. ಎರಡು ವಾರಗಳ ಹಿಂದೆ ಅಷ್ಟೇ ಅವರು ಹೊಸ ಕಾರು ಖರೀದಿ ಮಾಡಿದ್ದರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್​ ಅವರ ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ ಕಿಯಾ ಕಾರು ಜಖಂ ಆಗಿದೆ. ಆಟೋ ಕೂಡ ಭಾಗಶಃ ಜಖಂ ಆಗಿದೆ. ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ತುಮಕೂರು ಕಡೆಯಿಂದ […]

ತುಮಕೂರಿನಲ್ಲಿ ತುಕಾಲಿ ಸಂತೋಷ್​ ಕಾರು ಅಪಘಾತ: ಆಟೋ ಜಖಂ Read More »

ಮತ್ತೆ ಏರಿಕೆಯತ್ತ ಅಡಿಕೆ ಮಾರುಕಟ್ಟೆ| ನಿಲ್ಲದ ಕೋಕ್ಕೊ ನಾಗಾಲೋಟ

ಸಮಗ್ರ ನ್ಯೂಸ್: ತೀವ್ರ ಕುಸಿತ ಕಂಡಿದ್ದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆ ಕಾಣುತ್ತಿದೆ. ಕಳೆದೆರಡು ವಾರಗಳ ಹಿಂದೆ 310ಕ್ಕೆ ಕುಸಿದಿದ್ದ ಹೊಸ ಅಡಿಕೆ ದರ ಇದೀಗ ₹.350ರತ್ತ ಜಿಗಿದಿದೆ. ಹೊರ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದ ಹಿಂದಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ., ಸಿಂಗಲ್‌ ಚೋಲ್‌ 15 ರೂ., ಡಬ್ಬಲ್‌ ಚೋಲ್‌ 20 ರೂ.ನಷ್ಟು ಹೆಚ್ಚಳ ಕಂಡಿದೆ. ದಿನದಿಂದ ದಿನಕ್ಕೆ ದರ ಏರಿಕೆಯತ್ತ ಮುಖ ಮಾಡಿದೆ. ಕ್ಯಾಂಪ್ಕೋ ಕೂಡ ಧಾರಣೆ ಏರಿಸುವಲ್ಲಿ ಉತ್ಸಾಹ

ಮತ್ತೆ ಏರಿಕೆಯತ್ತ ಅಡಿಕೆ ಮಾರುಕಟ್ಟೆ| ನಿಲ್ಲದ ಕೋಕ್ಕೊ ನಾಗಾಲೋಟ Read More »

ದ.ಕನ್ನಡದಲ್ಲಿ ಚೌಟರಿಗೆ ಅವಕಾಶ| ಕೈ ಹಿಡಿದ ಜಾತಿ ಸಮೀಕರಣ| ನಳಿನ್ ವಿರೋಧಿ ಸಂಘ ನಾಯಕರ ಏಕತೆ

ಸಮಗ್ರ ಸಮಾಚಾರ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಲೋಕಸಬಾ ಸ್ಪರ್ಧೆ ಅವಕಾಶ ಈ ಬಾರಿ ಬ್ರಿಜೇಶ್ ಚೌಟರಿಗೆ ಒಲಿದು ಬಂದಿದೆ. ಈ ಕ್ಷೇತ್ರದಲ್ಲಿ ಜೈನ್ ಸಮುದಾಯದಿಂದ ಧನಂಜಯ ಕುಮಾರ್ ಬಿಜೆಪಿಯಿಂದ ಒಕ್ಕಲಿಗ ಸದಾನಂದ ಗೌಡ ಒಂದು ಬಾರಿ, ಬಂಟ್ಸ್ ನಳಿನ್ 3 ಬಾರಿ ಅದ ಬಳಿಕ ಮತ್ತೇ ಬಿಜೆಪಿ ಬಂಟ ಸಮುದಾಯಕ್ಕೆ ಮಣೆ ಹಾಕಿದೆ‌. 1990 ಅಯೋಧ್ಯೆ ರಾಮ ಮಂದಿರ,ಹಿಂದುತ್ವ ಈ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ ಪೂರಕವಾಗಿತ್ತು. ನಾಲ್ಕನೇ ಬಾರಿ ಕಟೀಲ್ ಟಿಕೆಟ್ ಖಂಡಿತ ಅವರ ಆಪ್ತ ವಲಯದಲ್ಲಿ

ದ.ಕನ್ನಡದಲ್ಲಿ ಚೌಟರಿಗೆ ಅವಕಾಶ| ಕೈ ಹಿಡಿದ ಜಾತಿ ಸಮೀಕರಣ| ನಳಿನ್ ವಿರೋಧಿ ಸಂಘ ನಾಯಕರ ಏಕತೆ Read More »

ಯಡಿಯೂರಪ್ಪ ಲಿಂಗಾಯತನೇ ಅಲ್ಲ : ಯತ್ನಾಳ್

ಸಮಗ್ರ ನ್ಯೂಸ್ : ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ದಂಧೆಯಾಗಿದೆ. ಅಲ್ಲದೆ ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು ಉದ್ದಾರ ಮಾಡಿಲ್ಲ ಹಾಗೂ ಅವನು ಲಿಂಗಾಯತನೇ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಹೌದು, ನಿರಂತರವಾಗಿ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಬಗ್ಗೆ ಕಿಡಿಕಾರುವ ಬಸವನಗೌಡ ಯತ್ನಾಳ್ ಅವರು ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಯಾವೊಬ್ಬ ಲಿಂಗಾಯತರನ್ನು

ಯಡಿಯೂರಪ್ಪ ಲಿಂಗಾಯತನೇ ಅಲ್ಲ : ಯತ್ನಾಳ್ Read More »

ಮಣಿಪಾಲ: ಚಾಲಕನ ನಿರ್ಲಕ್ಷ್ಯದಿಂದ ಚಕ್ರಕ್ಕೆ ಸಿಲುಕಿ ಬಸ್ ಮಾಲಕ ಸಾವು

ಸಮಗ್ರ ನ್ಯೂಸ್: ಬಸ್‍ವೊಂದನ್ನು ಗ್ಯಾರೇಜ್‍ನಲ್ಲಿ ರಿಪೇರಿಗೆ ನೀಡಿದ್ದರು. ಈ ವೇಳೆ ಬಸ್‍ನ ಎದುರು ಮಾಲಕ ನಿಂತಿದ್ದನ್ನು ಚಾಲಕ ಗಮನಿಸದೆ ಬಸ್ ಚಲಾಯಿಸಿದ ಪರಿಣಾಮ ಮಾಲಕ ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ 80 ಬಡಗಬೆಟ್ಟುವಿನ ಗ್ಯಾರೇಜ್ ಒಂದರಲ್ಲಿ ಬುಧವಾರ ಅವಘಡದಲ್ಲಿ ಸಂಭವಿಸಿದೆ. ಖಾಸಗಿ ಬಸ್‍ನ ಮಾಲಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ತತ್‍ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಮಣಿಪಾಲ: ಚಾಲಕನ ನಿರ್ಲಕ್ಷ್ಯದಿಂದ ಚಕ್ರಕ್ಕೆ ಸಿಲುಕಿ ಬಸ್ ಮಾಲಕ ಸಾವು Read More »

ಕಡಬ : ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿದ ಕಿರಾತಕನಿಗೆ ಸೆರೆವಾಸ

ಸಮಗ್ರ ನ್ಯೂಸ್ : ಪ್ರೀತಿ ನಿರಾಕರಣೆಯ ಆಕ್ರೋಶದಿಂದ ಮಾ. 4ರಂದು ಬೆಳಗ್ಗೆ ಕಡಬ ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿದ ಆರೋಪಿ ಅಬಿನ್ ನನ್ನು ಪೊಲೀಸರು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್ ಸಿಬಿ (22) ತನ್ನ ಊರಿನಿಂದ ರೈಲಿನ ಮೂಲಕ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿ ಆ್ಯಸಿಡ್ ಖರೀದಿಸಿ

ಕಡಬ : ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿದ ಕಿರಾತಕನಿಗೆ ಸೆರೆವಾಸ Read More »

ಉಡುಪಿ: ‘ಶೋಭಾ ಕರಂದ್ಲಾಜೆ ಅನ್ಯಾಯದ ವಿರುದ್ಧ ಧ್ವನಿಯೆತ್ತಿಲ್ಲ’- ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್ : ಸಂಸದೆ ಶೋಭಾ ಕರಂದ್ಲಾಜೆ ಒಮ್ಮೆಯೂ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಲಿಲ್ಲ, ಇಂಥ ಸಂಸದರು ನಿಮಗೆ ಬೇಕಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ 4.30 ಲಕ್ಷ ಕೋಟಿ ರೂ. ಸಂದಾಯವಾಗುತ್ತಿದ್ದರೂ ಅಲ್ಲಿಂದ ನಮಗೆ ವಾಪಸ್ಸು ಬರುತ್ತಿರೋದು ಕೇವಲ 50,257 ಕೋಟಿ ರೂ. ಮಾತ್ರ. ಈ ರೀತಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಶೋಭಾ ಕರಂದ್ಲಾಜೆ ಒಮ್ಮೆಯೂ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಲಿಲ್ಲ.

ಉಡುಪಿ: ‘ಶೋಭಾ ಕರಂದ್ಲಾಜೆ ಅನ್ಯಾಯದ ವಿರುದ್ಧ ಧ್ವನಿಯೆತ್ತಿಲ್ಲ’- ಸಿಎಂ ಸಿದ್ದರಾಮಯ್ಯ Read More »

ನೆಲ್ಯಾಡಿ: ಅನಾರೋಗ್ಯದಿಂದ ವ್ಯಕ್ತಿ ಸಾವು

ಸಮಗ್ರ ನ್ಯೂಸ್ : ಬಿದ್ದು ತಲೆಗೆ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಘಟನೆ ನೆಲ್ಯಾಡಿಯ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಶೀನ ಮುಗೇರ(50) ಎಂದು ಗುರುತಿಸಲಾಗಿದೆ. ಮಾ.10ರಂದು ಸಾಯಂಕಾಲ ನೆಲ್ಯಾಡಿ ಪೇಟೆಗೆ ಹೋದವರು ವಾಪಾಸು ಮನೆಗೆ ಬಂದಾಗ ಅವರ ತಲೆಯ ಹಿಂಬದಿ ಗಾಯವಾಗಿತ್ತು. ಮನೆಯವರು ವಿಚಾರಿಸಿದಾಗ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಬಿದ್ದು ಗಾಯವಾಗಿದೆ ಎಂದು ತಿಳಿಸಿದ್ದರು. ಬಳಿಕ ಅವರಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದರು.

ನೆಲ್ಯಾಡಿ: ಅನಾರೋಗ್ಯದಿಂದ ವ್ಯಕ್ತಿ ಸಾವು Read More »

ಡಿವಿಎಸ್ ಗೆ ಅಮಿತ್ ‘ಶಾ’ಕ್| ಬೆಂಗಳೂರು ಉತ್ತರಕ್ಕೆ ಶೋಭಾ; ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಾ ಗೌಡ್ರು!?

ಸಮಗ್ರ ನ್ಯೂಸ್: 2 ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಈ ಬಗ್ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸದಾನಂದಗೌಡ ಅವರಿಗೆ ಕರೆ ಮಾಡಿದ್ದು, ಅಭ್ಯರ್ಥಿ ಬದಲಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ತಮಗೆ ಟಿಕೆಟ್​ ಇಲ್ಲ ಎನ್ನುವುದನ್ನು ಸದಾನಂದಗೌಡರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಇಲ್ಲ ಎನ್ನುವುದನ್ನು ದೂರವಾಣಿ ‌ಮೂಲಕ

ಡಿವಿಎಸ್ ಗೆ ಅಮಿತ್ ‘ಶಾ’ಕ್| ಬೆಂಗಳೂರು ಉತ್ತರಕ್ಕೆ ಶೋಭಾ; ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಾ ಗೌಡ್ರು!? Read More »

ಗ್ಯಾರಂಟಿ ಯೋಜನೆ ಸ್ಥಗಿತವಾಗುವುದಿಲ್ಲ: ಸಚಿವೆ ಹೆಬ್ಬಾಳ್ಕರ್

ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ಪ್ರಚಾರಕ್ಕಾಗಿ ಜಾರಿಗೆ ತಂದಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. ಉಡುಪಿಯ ಕುಂಜಿಬೆಟ್ಟುವಿನ ಲಕ್ಷ್ಮೀ ನಾರಾಯಣ ರಾವ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು,

ಗ್ಯಾರಂಟಿ ಯೋಜನೆ ಸ್ಥಗಿತವಾಗುವುದಿಲ್ಲ: ಸಚಿವೆ ಹೆಬ್ಬಾಳ್ಕರ್ Read More »