March 2024

ನಂಜನಗೂಡು:ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಸಮಗ್ರ ನ್ಯೂಸ್‌: ನಂಜನಗೂಡಿನ ನೆಲ್ಲಿತಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಕುಡಿಯುವ ನೀರು ಕೊಡಿ ಎಂದು ಖಾಲಿ ಕೊಡೆ ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೆಲ್ಲಿತಾಳಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಿಂದ ಸುಮಾರು 1 ಕಿಲೋ ಮಿಟರ್ ದೂರದಿಂದ ನೀರನ್ನು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಗೂಲಿಯಿಂದ ಜೀವನ ನಡೆಸುವ ನಾವು ನೀರಿಗಾಗಿ […]

ನಂಜನಗೂಡು:ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ Read More »

ಕಾಂಗ್ರೆಸ್ ಪಕ್ಷ‌ಕ್ಕೆ ಸೇರ್ಪಡೆಯಾದ ಧೀರಜ್ ಪ್ರಸಾದ್

ಸಮಗ್ರ ನ್ಯೂಸ್‌ : ಬಿಜೆಪಿ ಪಕ್ಷವನ್ನು ತೊರೆದು ಧೀರಜ್ ಪ್ರಸಾದ್ ರವರು ಕಾಂಗ್ರೆಸ್ ಪಕ್ಷ‌ಕ್ಕೆ ಸೇರ್ಪಡೆಯಾದರು. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಂಗಿ ಮಗ ಧೀರಜ್ ಪ್ರಸಾದ್ ಇಂದು ಬೆಂಗಳೂರಿನ‌ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು. ಇತ್ತೀಚೆಗೆ ಬಿಜೆಪಿ ಬೆಳೆವಣಿಗೆಯಿಂದ ಬೇಸತ್ತು ಧೀರಜ್ ಪಕ್ಷವನ್ನು ತೊರೆದರು. ಟಿಕೆಟ್ ಕೈ ತಪ್ಪಿದ ಬಳಿಕ ಶ್ರೀನಿವಾಸ್ ಪ್ರಸಾದ್ ರನ್ನ ಅವರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿರಲಿಲ್ಲ. ಧೀರಜ್ ಜೊತೆಗೆ ಸುನೀಲ್ ಬೋಸ್

ಕಾಂಗ್ರೆಸ್ ಪಕ್ಷ‌ಕ್ಕೆ ಸೇರ್ಪಡೆಯಾದ ಧೀರಜ್ ಪ್ರಸಾದ್ Read More »

ನೇತ್ರಾವತಿ ನದಿಗೆ ಹಾರಿ ತಾಯಿ ಮಗು ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಒಂದು ವರ್ಷದ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಡ್ಯಾಂ ಬಳಿಯ ನಡೆದಿದೆ. ಅಡ್ಯಾರ್ ಪದವು ನಿವಾಸಿ ಚೈತ್ರಾ ಹಾಗೂ ಒಂದು ವರ್ಷದ ಮಗು ದಿಯಾಂಶ್ ಮೃತ ದುರ್ದೈವಿಗಳು. ಇಬ್ಬರ ಮೃತದೇಹಗಳು ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ. ಗುರುವಾರವಷ್ಟೇ ಚೈತ್ರ ಮಗುವಿನ ಹುಟ್ಟುಹಬ್ಬವನ್ನು ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಿದ್ದರು. ನಂತರ ನಿನ್ನೆ ಶುಕ್ರವಾರ ಮಧ್ಯಾಹ್ನದ ನಂತರ ತಾಯಿ-ಮಗು ನಾಪತ್ತೆಯಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಸಂಬಂಧಿಕರು

ನೇತ್ರಾವತಿ ನದಿಗೆ ಹಾರಿ ತಾಯಿ ಮಗು ಆತ್ಮಹತ್ಯೆ Read More »

ವೈದ್ಯ ಲೋಕದಿಂದ ಹೊಸ ಪ್ರಯೋಗ|ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ

ಸಮಗ್ರ ನ್ಯೂಸ್: ವೈದ್ಯ ಲೋಕದಿಂದ ಏನಾದರು ಒಂದು ರೀತಿಯಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತದೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ, ಬೆಂಗಳೂರು ವೈದ್ಯರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೀವ ಕೈಚೆಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನು ಅಳವಡಿಸಿ ಹೊಸ ಜೀವನವನ್ನು ವೈದ್ಯರು ಕಟ್ಟಿಕೊಟ್ಟಿದ್ದಾರೆ. ಈ ವ್ಯಕ್ತಿಗೆ ಹೃದಯವಿಲ್ಲ, ಅಂದರೆ ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ. ದುರ್ಬಲ ಹೃದಯ ತೆಗೆದು ಕೃತಕ ಹೃದಯ ಅಳವಡಿಕೆ ಮಾಡಲಾಗಿದೆ. ಈ ಹೃದಯವು ದೇಹದೊಳಗೆ ಇರವುದಿಲ್ಲ. ಬದಲಾಗಿ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಬೇಕಿದೆ. ಬಾಗಲಕೋಟೆ ಜಿಲ್ಲೆಯ

ವೈದ್ಯ ಲೋಕದಿಂದ ಹೊಸ ಪ್ರಯೋಗ|ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ Read More »

ಎಲ್. ಕೆ ಅಡ್ವಾಣಿ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ಸಮಗ್ರ ನ್ಯೂಸ್: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಐವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ ‘ಭಾರತ ರತ್ನ’ವನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್, ಕರ್ಪೂರಿ ಠಾಕೂರ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. ನರಸಿಂಹರಾವ್ ಅವರ ಪುತ್ರ ಪಿ.ವಿ.ಪ್ರಭಾಕರ್ ರಾವ್ ಅವರು ತಮ್ಮ ತಂದೆಗೆ ಪ್ರದಾನ ಮಾಡಿದ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್

ಎಲ್. ಕೆ ಅಡ್ವಾಣಿ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ Read More »

ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಪುನರ್ ರಚನೆ

ಸಮಗ್ರ ನ್ಯೂಸ್‌ : ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧಿಕಾರೇತರ ಸದಸ್ಯರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಗಳಾದ , ಕೆ.ಎಸ್. ಗೋಪಾಲಕೃಷ್ಣ ಇವರನ್ನು ಸರ್ಕಾರದಿಂದ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಮಿತಿಯಲ್ಲಿ ಸೋಮವಾರಪೇಟೆ ತಾಲೂಕಿನ ಉಮಾ ಪ್ರಭಾಕರ್, ಟಿ..ಕೆ ಪ್ರಭಾಕರ್, ಸುರೇಶ್ ಬಾಬು, ಕುಂಯ್ ಕೃಷ್ಣನ್, ಎ.ಪಿ ಸುಬ್ಬಯ್ಯ, ಮುಸ್ತಫ ಇವರುಗಳನ್ನು ಆಯ್ಕೆಗೊಳಿಸಿ ಸರ್ಕಾರದ ರಾಜ್ಯಪಾಲರ ಆದೇಶದ ಅನ್ವಯ, ಜಲ ಸಂಪನ್ಮೂಲ ಇಲಾಖೆಯ

ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಪುನರ್ ರಚನೆ Read More »

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತೇಜಸ್ವಿನಿ ಗೌಡ

ಸಮಗ್ರ ನ್ಯೂಸ್: ಬಿಜೆಪಿ ಮಾಜಿ MLC ತೇಜಸ್ವಿನಿ ಗೌಡ ಮೊನ್ನೆಯಷ್ಟೆ ಬಿಜೆಪಿ MLC ಸ್ಥಾನಕ್ಕೆ ರಾಜೀನಾಮೆ ನೀಡಿ ದರು, ಇದೀಗ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೆ ಬಿಜೆಪಿಗೆ‌ ಇದೊಂದು ರೀತಿಯ ಆಘಾತವುಂಟಾಗಿದೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ನಂತರ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಭಿಚಾರಿಗಳು, ಭ್ರಷ್ಟಾಚಾರಿಗಳ ಪರವಾಗಿ ವಕ್ತಾರಿಕೆ ಮಾಡಿದ್ದೇನೆ. ದೆಹಲಿಯಲ್ಲಿ ಕಾಂಗ್ರೆಸ್ ಸೇರಬೇಕೆಂಬುದು ಹೈಕಮಾಂಡ್ ತೀರ್ಮಾನ ಅದಕ್ಕಾಗಿ ಇಲ್ಲಿ ಬಂದು ಸೇರಿದ್ದೇನೆ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತೇಜಸ್ವಿನಿ ಗೌಡ Read More »

ಏ. 19-ಜೂ.1 ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ| ಚುನಾವಣಾ ಆಯೋಗ

ಸಮಗ್ರ ನ್ಯೂಸ್‌ : ಲೋಕಸಭೆ ಚುನಾವಣೆಯ ಸಿದ್ಧತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಜೆಪಿ, ಕಾಂಗ್ರೆಸ್‌ ಸೇರಿ ಈಗಾಗಲೇ ನೂರಾರು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು, ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ಏಪ್ರಿಲ್‌ 19ರಿಂದ ಜೂನ್‌ 1ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ ಎಂದ ಚುನಾವಣಾ ಆಯೋಗವು ಆದೇಶಿಸಿದೆ. ಮೊದಲ ಹಂತದ ಮತದಾನ ನಡೆಯುವ ಏಪ್ರಿಲ್‌ 19ರ ಬೆಳಗ್ಗೆ 7 ಗಂಟೆಯಿಂದ ಚುನಾವಣೆ ಮುಗಿಯುವ ಜೂನ್‌ 1ರ ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ. ಚುನಾವಣೆಯಲ್ಲಿ ಪಕ್ಷಗಳಿಗೆ ಬೆಂಬಲ, ಅಭಿಪ್ರಾಯ ಸಂಗ್ರಹ

ಏ. 19-ಜೂ.1 ರವರೆಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುವಂತಿಲ್ಲ| ಚುನಾವಣಾ ಆಯೋಗ Read More »

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ

ಸಮಗ್ರ ನ್ಯೂಸ್‌ : ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂ. ಬಂಪರ್‌ ಲಾಟರಿ ಹೊಡೆದ ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ. ನಜರ್‌ ಅವರು ಮಾಧ್ಯಮದ ಜೊತೆ ಮಾತನಾಡಿ, “ನನಗೆ ಲಾಟರಿ ಬಹುಮಾನ ಸಿಕ್ಕಿದೆ ಎಂಬ ಸುದ್ದಿ ತಿಳಿದು ಶಾಕ್‌ ಆಯಿತು. ಈಗಲೂ ನಾನು ಈ ಸುದ್ದಿಯ ಗುಂಗಿನಿಂದ ಹೊರಬಂದಿಲ್ಲ” ಎಂದು ತಿಳಿಸಿದರು. ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ Read More »

ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ

ಸಮಗ್ರ ನ್ಯೂಸ್‌ : ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಗೌತಂಪುರ ಮಾರಿಕಾಂಬಾ ಜಾತ್ರೆಯಲ್ಲಿ ನಡೆದಿದೆ. ಅಂಗಡಿ ಮುಂಗಟ್ಟು ಬಳಿ ಗಲಾಟೆ ಮಾಡುತ್ತಿರುವುದನ್ನು ತಡೆಯಲು ಹೋದ ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಕಿರಣ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ಖಾಕಿ ಹಿಡಿದು ಎಳೆದಾಡಿದ್ದಲ್ಲದೇ ಕಪಾಳಕ್ಕೆ ಹೊಡೆದಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಲ್ಲ ಪುಂಡರನ್ನು ಬಂಧಿಸಿ, ತನಿಖೆಯನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ Read More »