March 2024

ರಾಮನಗರದಲ್ಲಿ ಅಕ್ರಮವಾಗಿ ಸೀರೆ ಹಂಚಿಕೆ ಆರೋಪ| JDS- ಕಾಂಗ್ರೆಸ್ ಮಧ್ಯೆ ವಾಗ್ವಾದ

ಸಮಗ್ರ ನ್ಯೂಸ್: ಇತ್ತೀಚೆಗೆ ಎರಡು ದಿನಗಳಿಂದ ಕುಕ್ಕರ್ ಪಾಲಿಟಿಕ್ಸ್ ವಿಚಾರಗಳು ಕೇಳಿ ಬಂದಿತ್ತು. ಆದರೆ ಈಗ ಚುನಾವಣೆ ಘೋಷಣೆ ಆಗಿದ್ದೇ ಆಗಿದ್ದು, ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ಇತ್ತ ರಾಮನಗರದಲ್ಲಿ ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು […]

ರಾಮನಗರದಲ್ಲಿ ಅಕ್ರಮವಾಗಿ ಸೀರೆ ಹಂಚಿಕೆ ಆರೋಪ| JDS- ಕಾಂಗ್ರೆಸ್ ಮಧ್ಯೆ ವಾಗ್ವಾದ Read More »

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ

ಸಮಗ್ರ ನ್ಯೂಸ್: ಡಿಸೆಂಬರ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೇರಳ ರಾಜ್ಯದ ನಗರ ಪ್ರದೇಶಗಳಲ್ಲಿ ನಿರೋದ್ಯೋಗ ಪ್ರಮಾಣದಲ್ಲಿ ಶೇ.10.3ಕ್ಕೆ ಏರಿಕೆಯಾಗಿದೆ ಎಂಬ ಅಂಶ ಕೇಂದ್ರದ ಅಂಕಿ ಅಂಶ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಈ ಅಂಕಿಅಂಶಗಳ ಪ್ರಕಾರ ನಿರುದ್ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದೆ. ನಿರುದ್ಯೋಗ ಪ್ರಮಾಣದಲ್ಲಿ ಹಿಮಾಚಲ ಪ್ರದೇಶದಲ್ಲಿ 12.3% ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣ ಅತ್ಯಂತ ಕಡಿಮೆ ಅಂದರೆ 3.1% ಪ್ರಮಾಣದಲ್ಲಿದೆ. ಆಂಧ್ರಪ್ರದೇಶ 8%, ತಮಿಳುನಾಡು 6.7%, ಕರ್ನಾಟಕ 3.6% ಪ್ರಮಾಣ

ನಿರುದ್ಯೋಗ ಪ್ರಮಾಣ/ ದೇಶದಲ್ಲಿ ಎರಡನೇ ಸ್ಥಾನ ಪಡೆದ ಕೇರಳ Read More »

ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ/ ಆದೇಶ ಹೊರಡಿಸಿದ ಸರ್ಕಾರ

ಸಮಗ್ರ ನ್ಯೂಸ್: ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹೆಲ್ಕೆಟ್ ಧರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅವರು, ರಾಜ್ಯದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಕೆಟ್ ಧರಿಸದೇ, ರಸ್ತೆ ಅಪಘಾತಗಳು ಉಂಟಾಗಿ, ಕೆಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಮತ್ತು ಕೆಲವರು ಮೃತಪಟ್ಟಿರುವ ಘಟನಗಳು ಸಂಭವಿಸಿರುವುದು ಕಂಡು ಬಂದಿರುತ್ತದೆ ಎಂದು ಎಡಿಜಿಪಿ

ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ/ ಆದೇಶ ಹೊರಡಿಸಿದ ಸರ್ಕಾರ Read More »

ಬಂಟ್ವಾಳ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ

ಸಮಗ್ರ ನ್ಯೂಸ್ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಜಿಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಇತೀಚೆಗೆ ನಡೆದಿದೆ. ಗಾಯಾಳುಗಳನ್ನು ಬೈಕ್ ಸವಾರ ಜಲಾಲುದ್ದೀನ್, ಸಹಸವಾರ ಅಬ್ದುಲ್ ಸಲಾಂ ಹಾಗೂ ಇನ್ನೊಂದು ಬೈಕ್ ಸವಾರ ಸತ್ತಿವೇಲು ಎಂದು ಗುರುತಿಸಲಾಗಿದೆ. ನರಿಂಗಾನ ನಿವಾಸಿ ಅಬ್ದುಲ್ ಸಲಾಂ ಹಾಗೂ ಜಲಾಲುದ್ದೀನ್ ಅವರು ತಮ್ಮ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಸಜಿಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಸತ್ತಿವೇಲುರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು

ಬಂಟ್ವಾಳ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ Read More »

ಧರ್ಮಸ್ಥಳ: ಬಸ್ ಕಿಟಕಿಯಿಂದ ಇಳಿಯಲು ಯತ್ನಿಸಿ ರಸ್ತೆಗೆ ಬಿದ್ದು ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್: ಬಸ್ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಮಾ 17 ರಂದು ಬಸ್ಸಿನಲ್ಲಿ ಬಂದಿದ್ದ ಸುಮಾರು 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಎನ್ನಲಾಗಿದೆ. ಧರ್ಮಸ್ಥಳ ಬಸ್ ತಂಗುದಾಣದಲ್ಲಿ ಜನ ಹೆಚ್ಚಿದ್ದರಿಂದಾಗಿ ಕಿಟಕಿಯ ಮೂಲಕ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯದಾಗ ಮೃತ ಪಟ್ಟಿದ್ದಾರೆ

ಧರ್ಮಸ್ಥಳ: ಬಸ್ ಕಿಟಕಿಯಿಂದ ಇಳಿಯಲು ಯತ್ನಿಸಿ ರಸ್ತೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಬಂಟ್ವಾಳ‌ : ವೈನ್‌ಶಾಪ್‌ ಹಿಂಬದಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನ ಕಳವು

ಸಮಗ್ರ ನ್ಯೂಸ್ : ಬಂಟ್ವಾಳ‌ದ ಕಾರ್ತಿಕ್ ವೈನ್‌ ಶಾಪ್‌ ಹಿಂಬದಿಯಲ್ಲಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನ ಕಳವಾಗಿರುವ ಘಟನೆ ನಡೆದಿದೆ. ನರಿಕೊಂಬು ಗ್ರಾಮ ನಿವಾಸಿ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನವನ್ನು (KA 19 EV 0620) ದಿನಾಂಕ: 18-03-2024 ರಂದು ಮದ್ಯಾಹ್ನ, ಬಂಟ್ವಾಳ ಕಾರ್ತಿಕ್ ವೈನ್‌ ಶಾಪ್‌ ಹಿಂಬದಿಯಲ್ಲಿ ನಿಲ್ಲಿಸಿ ಹೋಗಿದ್ದು, ಹಿಂತಿರುಗಿ ಸಂಜೆ ಬಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿದ ಸ್ಥಳದಲ್ಲಿ ಕಾಣಿಸದೇ ಇದ್ದು, ಯಾರೋ ಕಳ್ಳರು ಅಂದಾಜು ರೂ. 30,000/- ಮೌಲ್ಯದ ದ್ವಿಚಕ್ರ ವಾಹನವನ್ಬುಕಳವು

ಬಂಟ್ವಾಳ‌ : ವೈನ್‌ಶಾಪ್‌ ಹಿಂಬದಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನ ಕಳವು Read More »

ಇಂದು ಕಾಂಗ್ರೆಸ್‍ನ ಎರಡನೇ ಪಟ್ಟಿ ಬಿಡುಗಡೆ/ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷ ಬಾಕಿ ಉಳಿದಿರುವ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಮಾ20ರಂದು ಪ್ರಕಟಿಸುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರ್ನಾಟಕದ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಕರ್ನಾಟಕದ ಉಳಿದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಪಟ್ಟಿಯನ್ನು ಪ್ರಕಟಿಸುವುದಾಗಿ ಘೋಷಿಸಿದರು.

ಇಂದು ಕಾಂಗ್ರೆಸ್‍ನ ಎರಡನೇ ಪಟ್ಟಿ ಬಿಡುಗಡೆ/ ಸಿದ್ದರಾಮಯ್ಯ ಘೋಷಣೆ Read More »

ಲೋಕಸಭಾ ಚುನಾವಣೆ ಹಿನ್ನಲೆ/ ಯುಪಿಎಸ್‍ಸಿ ಪರೀಕ್ಷೆ ಮುಂದೂಡಿಕೆ

ಸಮಗ್ರ ನ್ಯೂಸ್: ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಉನ್ನತ ಮಟ್ಟದ ಪರೀಕ್ಷೆಗಳ ಪೈಕಿ ಒಂದಾದ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‍ಸಿ) ಪರೀಕ್ಷೆಯನ್ನು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಯುಪಿಎಸ್‍ಸಿ ಪರೀಕ್ಷೆ ಮೇ 26ಕ್ಕೆ ನಿಗದಿಯಾಗಿತ್ತು. ಇದೀಗ ಪರೀಕ್ಷೆಯನ್ನು ಜೂ. 16ಕ್ಕೆ ಮುಂದೂಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನಲೆ/ ಯುಪಿಎಸ್‍ಸಿ ಪರೀಕ್ಷೆ ಮುಂದೂಡಿಕೆ Read More »

ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಪದ್ಮರಾಜ್ ಆಯ್ಕೆ

ಸಮಗ್ರ ನ್ಯೂಸ್; ದಕ್ಷಿಣಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಬಿಲ್ಲವ ಸಮುದಾಯದ ಯುವ ನಾಯಕ, ಗುರುಬೆಳದಿಂಗಳು ಸೇವಾ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಖಜಾಂಚಿಯಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆರ್‌ ಪದ್ಮರಾಜ್ ಅವರು ತಮ್ಮ ಸಮಾಜಮುಖಿ ಕೆಲಸಗಳಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಯೂ ಇವರು ಕಣಕ್ಕಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ

ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಪದ್ಮರಾಜ್ ಆಯ್ಕೆ Read More »

ಪೊನ್ನಂಪೇಟೆ:ಟಿಪ್ಪರ್ ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿ| ಇಬ್ಬರಿಗೆ ಗಂಭೀರ ಸ್ವರೂಪದ ಗಾಯ

ಸಮಗ್ರ ನ್ಯೂಸ್: ಪೊನ್ನಂಪೇಟೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಬೆಳಿಗ್ಗೆ 9:ಗಂಟೆಗೆ ಆಟೋ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಗೂಡ್ಸ್ ಆಟೋದಲ್ಲಿ ಇದ್ದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಗೋಣಿಕೊಪ್ಪಲು ಆಸ್ಪತ್ರೆಗೆ ದಾಖಲಪಡಿಸಲಾಗಿದೆ. ಕೇರಳ ನೋಂದಣಿ ಹೊಂದಿರುವ ಗೂಡ್ಸ್ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ಆಟೋ ಚಾಲಕರ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ. ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊನ್ನಂಪೇಟೆಯಲ್ಲಿ ಬಸ್ ನಿಲ್ದಾಣದಿಂದ ರಾಮಕೃಷ್ಣ ಆಶ್ರಮದವರೆಗೆ ಕೆಲವರು ಎರಡು ಬದಿ ಪಾರ್ಕಿಂಗ್ ಮಾಡುವುದರಿಂದ

ಪೊನ್ನಂಪೇಟೆ:ಟಿಪ್ಪರ್ ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿ| ಇಬ್ಬರಿಗೆ ಗಂಭೀರ ಸ್ವರೂಪದ ಗಾಯ Read More »