September 2023

ಪ್ರಥಮ ಚಿಕಿತ್ಸೆ ತಿಳುವಳಿಕಾ ದಿನ ಸೆಪ್ಟೆಂಬರ್-9

ಸಮಗ್ರ ನ್ಯೂಸ್:ಯಾವುದೇ ರೀತಿಯ ಗಾಯ ಅಥವಾ ಅಪಘಾತಗಳಾದಾಗ ತಕ್ಷಣವೇ ಘಾಸಿಗೊಳಗಾದವರಿಗೆ ನೀಡುವ ಪ್ರಾಥಮಿಕವಾದ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಇದಕ್ಕೆ ವಿಶೇಷವಾದ ತರಬೇತಿ ಅಥವಾ ಪೂರ್ವ ತಯಾರಿ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಆ ಕ್ಷಣದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರೋಗಿಯ ಪ್ರಾಣವನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ವೈದ್ಯರ ಲಭ್ಯತೆ ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ಮಾಡುವ ತಾತ್ಕಾಲಿಕ ಪರಿಶಮನ ವ್ಯವಸ್ಥೆಯನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಲು […]

ಪ್ರಥಮ ಚಿಕಿತ್ಸೆ ತಿಳುವಳಿಕಾ ದಿನ ಸೆಪ್ಟೆಂಬರ್-9 Read More »

ಜಿ-೨೦ ಶೃಂಗಸಭೆಯಲ್ಲಿ ಇಂಡಿಯಾ ಬದಲು ‘ಭಾರತ’ ದರ್ಶನ

ಸಮಗ್ರ ನ್ಯೂಸ್: ದೇಶದ ಹೆಸರು ಬದಲಾವಣೆ ವಿಚಾರ ಭಾರಿ ಚರ್ಚೆಯಲ್ಲಿದ್ದು, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಕೂಡ ‘ಭಾರತ್’ ಹೆಸರಿನ ಪ್ರಸ್ತಾಪ ಬಂದಿದೆ. ಇಂದು ನಡೆಯುತ್ತಿರುವ ಜಿ 20 ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗ ದೇಶದ ಹೆಸರನ್ನು ‘ಭಾರತ್’ ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿ ‘BHARAT’ ಎಂದು ಪ್ರದರ್ಶಿಸಲಾಯಿತು. ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ, ಪ್ರಧಾನಿ ಮೋದಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಯುಎಸ್ ಅಧ್ಯಕ್ಷ ಜೋ

ಜಿ-೨೦ ಶೃಂಗಸಭೆಯಲ್ಲಿ ಇಂಡಿಯಾ ಬದಲು ‘ಭಾರತ’ ದರ್ಶನ Read More »

ಗೃಹಲಕ್ಷ್ಮಿ ಹಣ ಜಮೆ ಆಗಿಲ್ವಾ? ಹೀಗಿ ಮಾಡಿ…

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಅತ್ಯಂತ‌ ಮಹತ್ಬಾಕಾಂಕ್ಷಿ‌ ಯೋಜನೆ‌ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಇನ್ನು ಹತ್ತು ದಿನದಲ್ಲಿ ಉಳಿದವರಿಗೆ ಹಣ ಜಮೆ ಆಗಲಿದೆ. ಇದರಲ್ಲಿ ಕ್ರಮವಾಗಿ ಬೆಂಗಳೂರು ನಗರ 380, ಗ್ರಾಮಾಂತರ ಜಿಲ್ಲೆಯ 478 ಮನೆಯೊಡತಿ ಬ್ಯಾಂಕ್ ಅಕೌಂಟ್ ಕೆವೈಸಿ, ಆಧಾರ್

ಗೃಹಲಕ್ಷ್ಮಿ ಹಣ ಜಮೆ ಆಗಿಲ್ವಾ? ಹೀಗಿ ಮಾಡಿ… Read More »

ಮಂಗಳೂರು ವಿ‌ ವಿ ಯಲ್ಲಿ ಡಾ. ಸಂಶುಲ್ ಇಸ್ಲಾಂ ಉಪನ್ಯಾಸಕ್ಕೆ ವಿರೋಧ| ಎಬಿವಿಪಿ ಯಿಂದ ಭಾರೀ ಪ್ರತಿಭಟನೆ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ.ಶಂಸುಲ್ ಇಸ್ಲಾಂ ಉಪನ್ಯಾಸಕ್ಕೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ, ಸಂಶೋಧಕ, ಲೇಖಕ ಹಾಗೂ ಜನಕಲಾ ಸಂಘಟಕ ಡಾ.ಶಂಸುಲ್ ಇಸ್ಲಾಂ ಅವರು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 – ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದು, ಎಬಿವಿಪಿ ಕಾರ್ಯಕರ್ತರು ‘ಗೋಬ್ಯಾಕ್ ಶಂಸುಲ್’ ಎಂದು‌ ವಿರೋಧ ವ್ಯಕ್ತಪಡಿಸಿದ್ದಾರೆ. ಶಂಸುಲ್ ಇಸ್ಲಾಂ ಉಪನ್ಯಾಸ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಲು

ಮಂಗಳೂರು ವಿ‌ ವಿ ಯಲ್ಲಿ ಡಾ. ಸಂಶುಲ್ ಇಸ್ಲಾಂ ಉಪನ್ಯಾಸಕ್ಕೆ ವಿರೋಧ| ಎಬಿವಿಪಿ ಯಿಂದ ಭಾರೀ ಪ್ರತಿಭಟನೆ Read More »

ಮೊರಾಕೋದಲ್ಲಿ ಪ್ರಬಲ ಭೂಕಂಪ; 296 ಮಂದಿ ಸಾವು|

ಸಮಗ್ರ ನ್ಯೂಸ್:ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ ಮರ್ಕೆಚ್ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಭೂಕಂಪ ಪೀಡಿತ ಸ್ಥಳಗಳಲ್ಲಿ ಕಟ್ಟಡಗಳು ಅಲುಗಾಡುತ್ತಿವೆ ಮತ್ತು ಭಯಭೀತರಾದ ನಿವಾಸಿಗಳು ಬೀದಿಗಿಳಿದಿದ್ದಾರೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದ ಕೇಂದ್ರಬಿಂದುವು ತುಲನಾತ್ಮಕವಾಗಿ 18.5 ಕಿಮೀ ಆಳದಲ್ಲಿದೆ ಮತ್ತು ಯುಎಸ್‌ಜಿಎಸ್ ಪ್ರಕಾರ, ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯ ನಂತರ ಮರಕೇಶ್‌ನ ನೈರುತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ

ಮೊರಾಕೋದಲ್ಲಿ ಪ್ರಬಲ ಭೂಕಂಪ; 296 ಮಂದಿ ಸಾವು| Read More »

ಬೆಳ್ಳಂಬೆಳಗ್ಗೆ ಆಂಧ್ರ‌ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್| ಭಾರಿ ಹೈಡ್ರಾಮಾ ಸೃಷ್ಟಿ

ಸಮಗ್ರ ನ್ಯೂಸ್: ಸಿಐಡಿ ಪೊಲೀಸರು ಬೆಳ್ಳಂ ಬೆಳಗ್ಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದು, ಬಂಧನದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಚಂದ್ರಬಾಬು ಬಂಧಿಸಲು ಪೊಲೀಸರು ಹೋಗಿದ್ದು, ಭಾರಿ ಹೈಡ್ರಾಮಾ ನಡೆದ ನಂತರ ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ. ಬಂಧನದ ವೇಳೆ ವಾಗ್ಧಾಳಿ ನಡೆಸಿ ಚಂದ್ರಬಾಬು ನಾಯ್ಡು ‘ ಸಿಐಡಿ ಪೊಲೀಸರು ನನ್ನ ಹಕ್ಕನ್ನು ಕಸಿಯುವ ಕೆಲಸ ಮಾಡಿದ್ದಾರೆ.ಎಫ್ ಐ ಆರ್ ಮಾಡಿಲ್ಲ, ಯಾವುದೇ ನೋಟಿಸ್ ನೀಡಿಲ್ಲ. ಯಾಕೆ ನನ್ನನ್ನು ಬಂಧಿಸುತ್ತೀರಾ..?

ಬೆಳ್ಳಂಬೆಳಗ್ಗೆ ಆಂಧ್ರ‌ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್| ಭಾರಿ ಹೈಡ್ರಾಮಾ ಸೃಷ್ಟಿ Read More »

ಡಾ.ಬ್ರೋ ಈಗ “ಮ್ಯಾನ್ ಆಪ್ ಮಿಲಿಯನ್ಸ್”| 20 ಲಕ್ಷ SUBSCRIBERS ಪಡೆದ ಕನ್ನಡ ಹುಡುಗ

ಸಮಗ್ರ ನ್ಯೂಸ್: ‘ನಮಸ್ಕಾರ ದೇವ್ರು’ ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ. ಬ್ರೋ (ಗಗನ್ ಶ್ರೀನಿವಾಸ್​) ಈಗ ಮ್ಯಾನ್ ಆಫ್ ಮಿಲಿಯನ್ಸ್ ಆಗಿದ್ದಾರೆ. ಅರ್ಥಾತ್, ಯೂ-ಟ್ಯೂಬ್​ನಲ್ಲಿ ಅವರ ಸಬ್​ಸ್ಕ್ರೈಬರ್ಸ್​ ಸಂಖ್ಯೆ 2 ಮಿಲಿಯನ್ (20) ಲಕ್ಷ ಆಗಿದೆ. ಜೊತೆಗೆ ಅವರ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲೂ ಫಾಲೋವರ್ಸ್ ಸಂಖ್ಯೆ ಈಗಾಗಲೇ ಮಿಲಿಯನ್ ದಾಟಿದೆ. ಇತ್ತೀಚೆಗಷ್ಟೇ ಯೂಟ್ಯೂಬ್​ನಲ್ಲಿ 2 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಹೊಂದಿದ ಡಾ.ಬ್ರೋ, ಫೇಸ್​ಬುಕ್​ನಲ್ಲಿ 1.6 ಮಿಲಿಯನ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ 1.3 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ.

ಡಾ.ಬ್ರೋ ಈಗ “ಮ್ಯಾನ್ ಆಪ್ ಮಿಲಿಯನ್ಸ್”| 20 ಲಕ್ಷ SUBSCRIBERS ಪಡೆದ ಕನ್ನಡ ಹುಡುಗ Read More »

ಸೀಬೆ ಹಣ್ಣಿನ ಎಲೆ ಹಲವು ರೋಗಗಳಿಗೆ ರಾಮಬಾಣ

ಸಮಗ್ರ ನ್ಯೂಸ್: ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಸೀಬೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷ ವಸ್ತುಗಳನ್ನು ಕಡಿಮೆಗೊಳಿಸಬಹುದು.ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಸೀಬೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ. ಸೀಬೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ

ಸೀಬೆ ಹಣ್ಣಿನ ಎಲೆ ಹಲವು ರೋಗಗಳಿಗೆ ರಾಮಬಾಣ Read More »

ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು | ದಾರಿ ಕಾಣದೆ ಎರಡು ಅಪಘಾತ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು ಕವಿದಿದ್ದು ವಾಹನ ಸಂಚಾರಿಸಲಾಗದೆ ಸೆ.8 ರಂದು ಸಂಜೆ ಎರಡು ಅಪಘಾತಗಳು ಸಂಭವಿಸಿವೆ. 22 ಕಿ.ಮೀ. ವ್ಯಾಪ್ತಿಯ ಕೊಟ್ಟಿಗೆಹಾರ-ಚಾರ್ಮಾಡಿ ಮಾರ್ಗದಲ್ಲಿ ಬಿದಿರುತಳ ಗ್ರಾಮದ ಬಸ್ ನಿಲ್ದಾಣದ ಬಳಿ ಮಂಗಳೂರಿಗೆ ಹೋಗುತ್ತಿದ್ದ ಬೊಲೆರೋ ವಾಹನವೊಂದು ದಟ್ಟ ಮಂಜಿನಲ್ಲಿ ಸರಿಯಾಗಿ ದಾರಿ ಕಾಣದೆ ರಸ್ತೆಯ ಒಂದು ಬದಿಯ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿಯೊಡೆದು ಪಲ್ಟಿಯಾಗಿದ್ದು,ಅದೃಷ್ಟವಶಾತ್ ಭಾರೀ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಅಪಘಾತ

ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಂಜು | ದಾರಿ ಕಾಣದೆ ಎರಡು ಅಪಘಾತ Read More »

ರಾಜ್ಯದ ಬ್ಯಾಂಕ್ ಗಳಲ್ಲಿ ಕನ್ನಡ ಕಡ್ಡಾಯ| ಹೊಸ ನಿಯಮ ಜಾರಿಗೆ ಸರ್ಕಾರ ಸಿದ್ಧತೆ

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲೂ ಇನ್ಮುಂದೆ ಕನ್ನಡ ಕಡ್ಡಾಯವಾಗಿದ್ದು, ಹೊಸ ನಿಯಮ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸಿದೆ. ರಾಜ್ಯದ ಎಲ್ಲಾ ಬ್ಯಾಂಕುಗಳಲ್ಲಿ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಈ ಮೂಲಕ ಮಹತ್ವದ ಕ್ರಮ ಜಾರಿಗೊಳ್ಳಲು ಸರ್ಕಾರ ಸಿದ್ದತೆ ನಡೆಸಿದೆ. ಈ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಈಗಾಗಲೇ ಒಂದೆರಡು ಸುತ್ತಿನ ಗಂಭೀರ ಚರ್ಚೆಗಳು ನಡೆದಿದೆ, ಸೂಕ್ತ ನಿಯಮಾವಳಿ ರೂಪಿಸಲು ಚಿಂತನೆ ನಡೆಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಘ, ಬ್ಯಾಂಕುಗಳಲ್ಲಿ

ರಾಜ್ಯದ ಬ್ಯಾಂಕ್ ಗಳಲ್ಲಿ ಕನ್ನಡ ಕಡ್ಡಾಯ| ಹೊಸ ನಿಯಮ ಜಾರಿಗೆ ಸರ್ಕಾರ ಸಿದ್ಧತೆ Read More »