ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ
ಸಮಗ್ರ ನ್ಯೂಸ್: ಹಣ್ಣಿನ ಲಾರಿಯೊಂದು ರಸ್ತೆ ಯ ಪಕ್ಕದ ಕಂದಕಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರಿನ ಮಧ್ಯೆ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಜು.9 ರಂದು ಸಂಭವಿಸಿದೆ. ಹಾಸನದಿಂದ ಮಂಗಳೂರಿಗೆ ಹಣ್ಣುಗಳನ್ನು ಹೊತ್ತೊಯ್ದ ಲಾರಿ ಎಂಜಿರ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ಕಂದಕಕ್ಕೆ ಬಿದ್ದಿದೆ. ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಇದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.
ನೆಲ್ಯಾಡಿ: ಕಂದಕಕ್ಕೆ ಬಿದ್ದ ಲಾರಿ Read More »










