October 2022

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಎರಡನೇ ವಿಡಿಯೋ ವೈರಲ್ |ಮಹಿಳೆ ಫೋಟೋ ಲಭ್ಯ

ರಾಮನಗರ: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಎರಡನೇ ವಿಡಿಯೋ ವೈರಲ್ ಆಗಿರುವ ನಡುವೆ ವಿಡಿಯೋದಲ್ಲಿದ್ದ ಮಹಿಳೆ ಫೋಟೋ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿಯವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಷಡ್ಯಂತ್ರ ನಡೆಸಲಾಗಿದ್ದಲ್ಲದೇ ಸ್ವಾಮೀಜಿ ಹೆಣ್ಣಿನ ಮೋಹಕ್ಕೆ ಸಿಲುಕಿ ಬಳಿಕ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೀಗ ಸ್ವಾಮೀಜಿ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇಂತಹ ಹಲವು ವಿಡಿಯೋಗಳಿರುವ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ. ಅಲ್ಲದೇ ವಿಡಿಯೋದಲ್ಲಿದ್ದ ಮಹಿಳೆ ಫೋಟೋ […]

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಎರಡನೇ ವಿಡಿಯೋ ವೈರಲ್ |ಮಹಿಳೆ ಫೋಟೋ ಲಭ್ಯ Read More »

ಮಂಗಳೂರು: ಲಂಗರು ಹಾಕಿದ್ದ ಬೋಟ್ ಗಳು ಬೆಂಕಿಗಾಹುತಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬೆಂಗರೆಯಲ್ಲಿ ಹಲವು ಬೋಟ್ ಗಳು ಲಂಗರು ಹಾಕಿರುತ್ತವೆ. ಈ ಪೈಕಿ ಒಂದು ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಆ ಬೆಂಕಿ ಹತ್ತಿರಲ್ಲಿದ್ದ ಇತರ ಬೋಟ್ ಗಳಿಗೂ ಹಬ್ಬಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ.

ಮಂಗಳೂರು: ಲಂಗರು ಹಾಕಿದ್ದ ಬೋಟ್ ಗಳು ಬೆಂಕಿಗಾಹುತಿ Read More »

ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ| ವಿಶಿಷ್ಟವಾಗಿ ಅಪ್ಪುಗೆ ಸಫೋರ್ಟ್ ಮಾಡಿದ ಕೆಎಂಎಫ್

ಸಮಗ್ರ ನ್ಯೂಸ್: ಗಂಧದಗುಡಿ ಸಿನಿಮಾಗೆ ಕೆಎಂಎಫ್ ತನ್ನ ಬೆಂಬಲ ನೀಡಿದೆ. ಈ ಮೂಲಕ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್​ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ. ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಿದ್ದು, ಕೆಎಂಎಫ್ ವಿಭಿನ್ನವಾಗಿ ಗೌರವ ತೋರಿದೆ. ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರನ್ನು ಮುದ್ರಿಸಲು KMF ನಿರ್ಧರಿಸಿದೆ. ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಲಾಗಿದೆ. ಪುನೀತ್ ರಾಜ್​ಕುಮಾರ್ ಈ ಹಿಂದೆ KMFನ

ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ| ವಿಶಿಷ್ಟವಾಗಿ ಅಪ್ಪುಗೆ ಸಫೋರ್ಟ್ ಮಾಡಿದ ಕೆಎಂಎಫ್ Read More »

ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ| ಹತ್ಯೆ ಬಳಿಕ ತಾನೂ ಆತ್ಮಹತ್ಯೆ| ಅನಾಥವಾದ ಪುಟ್ಟ‌ ಕಂದಮ್ಮಗಳು

ಸಮಗ್ರ ನ್ಯೂಸ್: ಪತ್ನಿಯ ಶೀಲ ಶಂಕಿಸಿ ಪತಿಯೇ ಆಕೆಯನ್ನ ಬರ್ಬರವಾಗಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಜಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೇಖಾ (30) ಪತಿಯಿಂದ ಕೊಲೆಯಾದ ಮಹಿಳೆ. ಕುಮಾರಸ್ವಾಮಿ (35) ಆತ್ಮಹತ್ಯೆಗೆ ಶರಣಾದ ಪತಿ. 12 ವರ್ಷದ ಹಿಂದೆ ರೇಖಾಳನ್ನ ಮದುವೆಯಾಗಿದ್ದ ಕುಮಾರಸ್ವಾಮಿಗೆ 5 ಜನ ಮಕ್ಕಳಿದ್ದಾರೆ. ಹಾಗಿದ್ದರೂ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಕುಮಾರಸ್ವಾಮಿ, ಜಿಗೇನಹಳ್ಳಿ ಗ್ರಾಮದ ಜಮೀನಿಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಕುಡುಗೋಲಿನಿಂದ

ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ| ಹತ್ಯೆ ಬಳಿಕ ತಾನೂ ಆತ್ಮಹತ್ಯೆ| ಅನಾಥವಾದ ಪುಟ್ಟ‌ ಕಂದಮ್ಮಗಳು Read More »

ಸುರತ್ಕಲ್ ಟೋಲ್ ಗೇಟ್ ಬಳಿ ನಿಷೇದಾಜ್ಞೆ ಜಾರಿ – ಕಮಿಷನರ್ ಶಶಿಕುಮಾರ್‌ ಆದೇಶ

ಸಮಗ್ರ ನ್ಯೂಸ್: ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಗೇಟ್ ಸಮೀಪದ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ವಿಧಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಎನ್‌ಐಟಿಕೆ ಬಳಿಯ ಟೋಲ್ ಗೇಟ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟಣೆ ವತಿಯಿಂದ ಇಂದಿನಿಂದ ಟೋಲ್ ಗೇಟ್ ಬಳಿ ಅನಿರ್ಧಿಷ್ಟಾವಧಿ

ಸುರತ್ಕಲ್ ಟೋಲ್ ಗೇಟ್ ಬಳಿ ನಿಷೇದಾಜ್ಞೆ ಜಾರಿ – ಕಮಿಷನರ್ ಶಶಿಕುಮಾರ್‌ ಆದೇಶ Read More »

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್

ಸಮಗ್ರ ನ್ಯೂಸ್: ಕಾಂತಾರ ಸಿನೇಮಾ ನೋಡಿ ಪ್ರೇರಿತಗೊಂಡ ಯುವತಿಯೊಬ್ಬಳು ಚಿತ್ರದಲ್ಲಿರುವಂತೆ ಪಂಜುರ್ಲಿಯಂತೆ ವೇಷ ಧರಿಸಿ ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾಂತಾರ ಸಿನಿಮಾವನ್ನು ನೋಡಿದ ಈ ಯುವತಿ ​ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದು ಕುಪ್ಪಳಿಸಿ ರೀಲ್ಸ್​ ಮಾಡಿದ್ದಾಳೆ. ವೃತ್ತಿಯಲ್ಲಿ ಮೇಕಪ್​ ಆರ್ಟಿಸ್ಟ್​ ಆಗಿರುವ ಶ್ವೇತಾ ರೆಡ್ಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡ ಬಳಿಕ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್ Read More »

ಇಂದು(ಅ.28) ಬೆಳಿಗ್ಗೆ 11ಗಂಟೆಗೆ ಕೋಟಿ ಕಂಠ‌ ಗಾಯನ| ನಾಡಿನೆಲ್ಲೆಡೆ ಮೊಳಗಲಿದೆ‌ ಕನ್ನಡ ಡಿಂಡಿಮ

ಸಮಗ್ರ ನ್ಯೂಸ್: ನೆಲ, ಜಲ, ಆಕಾಶದಲ್ಲಿ ಶುಕ್ರವಾರ ಏಕಕಾಲದಲ್ಲಿ ಕೋಟಿ ಕಂಠ ಗಾಯನ ಮುಗಿಲು ಮುಟ್ಟ ಲಿದ್ದು, 10 ಸಾವಿರಕ್ಕೂ ಹೆಚ್ಚು ತಾಣಗಳಲ್ಲಿ ಸರಿಯಾಗಿ 11 ಗಂಟೆಗೆ ಕನ್ನಡದ ಗೀತೆಗಳು ಮಾರ್ದನಿಸಲಿವೆ. ರಾಜ್ಯ ಸರಕಾರದ ‘ಕೋಟಿ ಕಂಠ ಗಾಯನ’ ಕಾರ್ಯ ಕ್ರಮದ ನೋಂದಣಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, 1.25 ಕೋಟಿ ಮಂದಿ ಭಾಗವಹಿಸುವರು. ಈ ವಿಶಿಷ್ಟ ಕಾರ್ಯಕ್ರಮ ಗಿನ್ನೆಸ್‌ ದಾಖಲೆ ಸೇರುವ ಸಾಧ್ಯತೆ ಇದೆ. ಯಾರೆಲ್ಲಾ ಪಾಲ್ಗೊಳ್ಳುತ್ತಾರೆ?ಒಟ್ಟು 27 ನಿಮಿಷಗಳ ಗಾಯನದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,

ಇಂದು(ಅ.28) ಬೆಳಿಗ್ಗೆ 11ಗಂಟೆಗೆ ಕೋಟಿ ಕಂಠ‌ ಗಾಯನ| ನಾಡಿನೆಲ್ಲೆಡೆ ಮೊಳಗಲಿದೆ‌ ಕನ್ನಡ ಡಿಂಡಿಮ Read More »

ಆಕೆ ಪ್ರೀತಿಯಿಂದ ಗಂಡ, ಮಕ್ಳಿಗೆ ಚಹಾ ಮಾಡಿಕೊಟ್ಟಳು| ಆದರೆ ಅದನ್ನು ಕುಡಿದ ಬಳಿಕ ನಡೆದದ್ದು ಘೋರ ದುರಂತ!!

ಸಮಗ್ರ ನ್ಯೂಸ್: ಮಹಿಳೆಯೊಬ್ಬಳು ಮಾಡಿದ ಎಡವಟ್ಟಿನಿಂದಾಗಿ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಘೋರ ದುರಂತ ಸಂಭವಿಸಿದೆ. ಕೀಟನಾಶಕ ಔಷಧ ಬೆರೆಸಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಆಕೆ ಮಾಡಿದ ಒಂದು ಸಣ್ಣ ತಪ್ಪಿನಿಂದ ಗಂಡ ಮತ್ತು ಮುದ್ದಾದ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಕಳೆದುಕೊಂಡಿದ್ದಾರೆ. ಘಟನೆಯ ವಿವರಗಳ ಪ್ರಕಾರ, ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ

ಆಕೆ ಪ್ರೀತಿಯಿಂದ ಗಂಡ, ಮಕ್ಳಿಗೆ ಚಹಾ ಮಾಡಿಕೊಟ್ಟಳು| ಆದರೆ ಅದನ್ನು ಕುಡಿದ ಬಳಿಕ ನಡೆದದ್ದು ಘೋರ ದುರಂತ!! Read More »

ಹರ್ಷ ಕುಟುಂಬಸ್ಥರಿಗೆ ಕೊಲೆ ಬೆದರಿಕೆ| ಶಿವಮೊಗ್ಗ ಎಸ್ ಪಿ ಹೇಳಿದ್ದೇನು?

ಸಮಗ್ರ ನ್ಯೂಸ್: ಕೆಲತಿಂಗಳ ಹಿಂದೆ ಜಿಹಾದಿಗಳಿಂದ ಕೊಲ್ಲಲ್ಪಟ್ಟ ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಬೆದರಿಕೆ ಹಾಕಿರುವ ಯಾವುದೇ ಅಂಶ ಕಂಡುಬಂದಿಲ್ಲ, ಹರ್ಷಾ ಕುಟುಂಬಕ್ಕೆ ಕೊಲೆ ಬೆದರಿಕೆ ಎಂಬುವುದೆಲ್ಲಾ ಸುಳ್ಳುಸುದ್ದಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹರ್ಷನ ಕುಟುಂಬದಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ನಗರದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು,

ಹರ್ಷ ಕುಟುಂಬಸ್ಥರಿಗೆ ಕೊಲೆ ಬೆದರಿಕೆ| ಶಿವಮೊಗ್ಗ ಎಸ್ ಪಿ ಹೇಳಿದ್ದೇನು? Read More »

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್

ಸಮಗ್ರ ನ್ಯೂಸ್: ಟೆಸ್ಲಾ ಸಿಇಒ ಎಲಾನ್ ಮಸ್ಕ್() ಅವರು ಟ್ವಿಟರ್‌ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅದರ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ಯುಎಸ್ ಮಾಧ್ಯಮ ಗುರುವಾರ ತಡವಾಗಿ ವರದಿ ಮಾಡಿದೆ. ಮಸ್ಕ್ ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ, ಮಸ್ಕ್‌ ಅವರೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಟ್ವಿಟ್ಟರ್‌

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್ Read More »