Ad Widget .

ಮತ್ತೆ ಭೂಕಂಪ; ನಡುಗಿದ ಕಲ್ಲುಗುಂಡಿ, ಗೂನಡ್ಕ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು, ಇಂದು ಮಧ್ಯಾಹ್ನ ‌1.21 ರ ಸುಮಾರಿಗೆ ಭೂಮಿ ನಡುಗಿದೆ

Ad Widget . Ad Widget .

ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ , ಸಂಪಾಜೆ, ಗೂನಡ್ಕ ಭಾಗಗಳಲ್ಲಿ ಭೂಮಿ ನಡುಗಿದೆ. ಇದರಿಂದ ಜನ ಭೀತಿಗೊಂಡಿದ್ದಾರೆ.

Ad Widget . Ad Widget .

ಒಮ್ಮೆ ಕಂಪನವಾದಲ್ಲಿ ಅದರ ಪರಿಣಾಮ ಕೆಲವು ದಿನಗಳವರೆಗೆ ಇರುತ್ತದೆ. ಭೂಮಿಯ ಕೆಳಭಾಗದಲ್ಲಿ ನಡೆಯುತ್ತಿರುವ ನೈಸರ್ಗಿಕ ವಿದ್ಯಮಾನಗಳ ಪರಿಣಾಮ ಸಣ್ಣನೆಯ ಕಂಪನಗಳು ಸಂಭವಿಸಬಹುದು.

🛑

ಭೂಸ್ತರಭಂಗದಿಂದ ಕೆಲವು ದಿನ ಈ ನಡುಕ, ಕಂಪನಗಳು ನಡೆಯುವ ಸಾಧ್ಯತೆ ಇದ್ದು ಜನ ಆತಂಕಪಡಬೇಕಿಲ್ಲ ಎಂದು ಭೂಗರ್ಭ ತಜ್ಞರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *