August 2021

ಕಂಬಳ ಕ್ಷೇತ್ರದ ಸಾಧಕ ರಸ್ತೆ ಅಪಘಾತಕ್ಕೆ ಬಲಿ

ಮಂಗಳೂರು: ಕಂಬಳ ಕ್ಷೇತ್ರದ ಸಾಧಕ ಗುರುವಪ್ಪ ಪೂಜಾರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಗುರುಪುರ ಸೇತುವೆ ಸಮೀಪ ಇಂದು ಸಂಭವಿಸಿದೆ. ನಗರದ ಹೊರ ವಲಯದ ಗುರುಪುರ ಸೇತುವೆ ಸಮೀಪದ ಕುಕ್ಕುದಕಟ್ಟೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಗುರುವಪ್ಪ ಪೂಜಾರಿ ಮೃತಪಟ್ಟಿದ್ದಾರೆ. ಕುಕ್ಕುದಕಟ್ಟೆಯಲ್ಲಿರುವ ಡೈರಿಗೆ ಎಂದಿನಂತೆ ಹಾಲು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಕಂಬಳ ಕ್ಷೇತ್ರದ ಸಾಧಕ ರಸ್ತೆ ಅಪಘಾತಕ್ಕೆ ಬಲಿ Read More »

ನಿಜವಾಗ್ತಿದೆ ಮೋದಿ ನುಡಿದ ಭವಿಷ್ಯ ಅಷ್ಟಕ್ಕೂ 2013ರಲ್ಲಿ ಅವರೇನು ಹೇಳಿದ್ರು?

ನವದೆಹಲಿ: ಒಲಿಂಪಿಕ್ಸ್ ಗೆಲುವು ಸಾಧಿಸಲು ಯುವ ಸೈನಿಕರಿಗೆ ಸೂಕ್ತ ತರಬೇತಿ ನೀಡಿದರೆ ಚಿನ್ನದ ಪದಕಗಳು ಭಾರತಕ್ಕೆ ಲಭಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಸಿದಂತೆ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಯುವ ಸೈನಿಕರಿಗೆ ಒಲಿಂಪಿಕ್ಸ್‌ಗೆ ತರಬೇತಿ ನೀಡಿದರೆ ಭಾರತಕ್ಕೆ 9ರಿಂದ 10 ಚಿನ್ನದ ಪದಕಗಳು ಬರುತ್ತವೆ ಎಂದು ನರೇಂದ್ರ ಮೋದಿ ಹೇಳಿದ್ದರು. 2013ರಲ್ಲಿ ಮೋದಿಯವರು ಗುಜರಾತ್

ನಿಜವಾಗ್ತಿದೆ ಮೋದಿ ನುಡಿದ ಭವಿಷ್ಯ ಅಷ್ಟಕ್ಕೂ 2013ರಲ್ಲಿ ಅವರೇನು ಹೇಳಿದ್ರು? Read More »

ಸಚಿವರು ಪ್ರಯಾಣಿಸುತ್ತಿದ್ದ ಜೀಪ್ ನಡುರಸ್ತೆಯಲ್ಲೇ ಬಾಕಿ. 3 ದಶಕಗಳಿಂದ ಬಿಜೆಪಿ ಗೆಲ್ಲಿಸಿದ ಸುಳ್ಯ ಬದಲಾಗೋದು ಯಾವಾಗ? ಜಾಲತಾಣಗಳಲ್ಲಿ ವ್ಯಾಪಕ ಟೀಕೆ !

ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಹಲವು ರಸ್ತೆಗಳು ಅಭಿವೃದ್ದಿಗೊಂಡಿದೆ, ಇನ್ನು ಕೆಲವು ರಸ್ತೆಗಳ ಕಾಮಗಾರಿ ನಡೆಯುತ್ತಿದೆ, ಈ ನಡುವೆ ಕೆಲ ಕಡೆಗಳಲ್ಲಿ ಸಂಪರ್ಕ ರಸ್ತೆಗಳ ದುಸ್ಥಿತಿ ಹೇಳತೀರದು. ಈ ನಡುವೆ ಸುಳ್ಯ ಕ್ಷೇತ್ರದ ಶಾಸಕರೂ ರಾಜ್ಯದ ಬಂದರು ಹಾಗೂ ಮೀನುಗಾರಿಕಾ ಸಚಿವರೂ ಆಗಿರುವ ಎಸ್. ಅಂಗಾರ ಅವರು ತೆರಳುತ್ತಿದ್ದ ಜೀಪೊಂದು ಅರ್ಧದಲ್ಲಿ ಬಾಕಿಯಾಗಿರುವ ವೀಡಿಯೋ ವೈರಲ್ ಆಗಿದ್ದು ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಕೂಟೇಲು ಸಂಪರ್ಕ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿ

ಸಚಿವರು ಪ್ರಯಾಣಿಸುತ್ತಿದ್ದ ಜೀಪ್ ನಡುರಸ್ತೆಯಲ್ಲೇ ಬಾಕಿ. 3 ದಶಕಗಳಿಂದ ಬಿಜೆಪಿ ಗೆಲ್ಲಿಸಿದ ಸುಳ್ಯ ಬದಲಾಗೋದು ಯಾವಾಗ? ಜಾಲತಾಣಗಳಲ್ಲಿ ವ್ಯಾಪಕ ಟೀಕೆ ! Read More »

ಸುಳ್ಯ: ಅಪ್ರಾಪ್ತೆಯ ಅತ್ಯಾಚಾರ ನಡೆಸಿ, ನಗ್ನ ಫೋಟೋ ಸೆರೆಹಿಡಿದು ಬ್ಲ್ಯಾಕ್ ಮೇಲ್: ಹಣದಾಸೆಗೆ ಶಿಕ್ಷಕನಿಗೆ ಸಾಥ್ ಕೊಟ್ಟ ಹೆಂಡತಿ

ಸುಳ್ಯ: ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತಿದ್ದ ಕಾಮುಕ ಶಿಕ್ಷಕ ಹಾಗೂ ಗಂಡನ ಕೃತ್ಯಕ್ಕೆ ಆತನ ಪತ್ನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ವಿಧ್ಯಾರ್ಥಿನಿಯ ತಾಯಿಯಿಂದ ದೂರು ದಾಖಲಾಗಿದೆ . ಶಿಕ್ಷಕ ಗುರುರಾಜ್ ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಸುಮಾರು ಮೂರು ವರ್ಷಗಳಿಂದ ವಿಧ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದು ಅವನ ಕಾಮುಕ ಕೃತ್ಯಕ್ಕೆ ಹೆಂಡತಿಯು ಸಾಥ್ ನೀಡುತ್ತಿದ್ದಳು.ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ

ಸುಳ್ಯ: ಅಪ್ರಾಪ್ತೆಯ ಅತ್ಯಾಚಾರ ನಡೆಸಿ, ನಗ್ನ ಫೋಟೋ ಸೆರೆಹಿಡಿದು ಬ್ಲ್ಯಾಕ್ ಮೇಲ್: ಹಣದಾಸೆಗೆ ಶಿಕ್ಷಕನಿಗೆ ಸಾಥ್ ಕೊಟ್ಟ ಹೆಂಡತಿ Read More »

ಟೋಕಿಯೋ ಒಲಿಂಪಿಕ್2020 ಗೆ ವರ್ಣರಂಜಿತ ತೆರೆ| ಹಲವು ದಾಖಲೆಗಳ ಜೊತೆ ಕ್ರೀಡಾಹಬ್ಬಕ್ಕೆ ವಿದಾಯ|

ಟೋಕಿಯೋ: ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ನಯನ ಮನೋಹರ ಸಮಾರಂಭದೊಂದಿಗೆ ಅಂತಿಮ ತೆರೆ ಬಿದ್ದಿದೆ. ೧೬ ದಿನಗಳ ಕಾಲ ನಡೆದ ಕ್ರೀಡಾಕೂಟವು ಸಮಾಪ್ತಿಗೊಂಡಿತು. ಜುಲೈ ೨೩ರಿಂದ ಆಗಸ್ಟ್ ೮ರವರೆಗೆ ನಡೆದ ಒಲಿಂಪಿಕ್ಸ್ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳಿಗೆ ಸಾಕ್ಷಿಯಾಯಿತು. ಸೋಲು-ಗೆಲುವು, ನೋವು-ನಲಿವು, ನಿರಾಸೆ-ಭರವಸೆ ಇವುಗಳ ಒಟ್ಟು ಫಲಿತಾಂಶದಂತಿದ್ದ ಟೋಕಿಯೋ ಕ್ರೀಡಾ ಕುಂಭಮೇಳ ಉದಯೋನ್ಮುಖ ತಾರೆಯರಿಗೂ ಸ್ಛೂರ್ತಿಯ ಚಿಲುಮೆಯಾಯಿತು. ಆಸ್ಟ್ರೇಲಿಯಾದ ಮತ್ಸ್ಯ ಕನ್ಯೆ ಎಮ್ಮಾ ಮ್ಯಾಕಿೋಂನ್ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು

ಟೋಕಿಯೋ ಒಲಿಂಪಿಕ್2020 ಗೆ ವರ್ಣರಂಜಿತ ತೆರೆ| ಹಲವು ದಾಖಲೆಗಳ ಜೊತೆ ಕ್ರೀಡಾಹಬ್ಬಕ್ಕೆ ವಿದಾಯ| Read More »

ಸುಳ್ಯ: ತಾಯಿ- ಮಗು ‘ಕೆರೆಗೆ ಹಾರ’

ಸುಳ್ಯ: ಕೆರೆಗೆ ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಇಬ್ಬರೂ ಮುಳುಗಿ ಬಲಿಯಾದ ಘಟನೆ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಪಲಕಜೆಯ. ಸಂಗೀತಾ ಮತ್ತು ಆಕೆಯ ಮಗು‌ ಮೃತ ದುರ್ದೈವಿಗಳು. ತೋಟದಲ್ಲಿನ ಕೆರೆಯ ಬಳಿ ಮಗು ಕಾಲುಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜು ಭಾರದ ಅವರು ಮಗುವನ್ನು ರಕ್ಷಿಸಲೂ ಆಗದೆ ಇತ್ತ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ. ಸಂಗಿತಾ ಅವರ ಮೃತದೇಹ ಮೇಲೆತ್ತಲಾಗಿದ್ದು

ಸುಳ್ಯ: ತಾಯಿ- ಮಗು ‘ಕೆರೆಗೆ ಹಾರ’ Read More »

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು?

ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ದರ ಮತ್ತಷ್ಟು ಹೆಚ್ಚಾದ್ರೆ ಲಾಕ್ಡೌನ್ ಆಗುವ ಅಪಾಯವಿದೆ ಎಂದು ಮಂಗಳೂರಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇಕಡಾ 3 ತಲುಪಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ. ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದ ಅವರು, ಕೋವಿಡ್ ನಿಯಂತ್ರಣ ಮಾಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಅದು ನಿಯಮಗಳನ್ನು ಪಾಲಿಸುವುದು

ದ.ಕ ದಲ್ಲಿ‌ ಆ.15 ರ ನಂತರ ಲಾಕ್ ಡೌನ್? ಏನಂದ್ರು ಸಚಿವರು? Read More »

‘ಕಾವೇರಿ’ ಬಿಡಲೊಪ್ಪದ ಯಡಿಯೂರಪ್ಪ| ಮಾಜಿ ಸಿಎಂ ಗೆ ಸಂಪುಟ ದರ್ಜೆ ಸ್ಥಾನಮಾನ…!

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ 13 ದಿನಗಳು ಕಳೆದಿದೆ. ಆದರೆ ಯಡಿಯೂರಪ್ಪ ತಮ್ಮ ಸಿಎಂ ಅಧಿಕೃತ ನಿವಾಸ ಕಾವೇರಿಯನ್ನು ಈವರೆಗೂ ತೊರೆದಿಲ್ಲ. ಅದೃಷ್ಟದ ನಿವಾಸ ಎಂದೇ ರಾಜಕೀಯ ವಲಯದಲ್ಲಿ ಪರಿಗಣಿಸಲ್ಪಟ್ಟಿರುವ ಕಾವೇರಿಯನ್ನು ತೊರೆಯಲು ಯಡಿಯೂರಪ್ಪ ಮನಸ್ಸು ಮಾಡಿರದೆ ಇರುವುದು ಕುತೂಹಲ ಕೆರಳಿಸಿದೆ. ಕಾವೇರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ. ಅದರ ಪಕ್ಕದಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಇದೆ. ಸಹಜವಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದವರು ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ. ಸಿದ್ದರಾಮಯ್ಯ ಅವರು

‘ಕಾವೇರಿ’ ಬಿಡಲೊಪ್ಪದ ಯಡಿಯೂರಪ್ಪ| ಮಾಜಿ ಸಿಎಂ ಗೆ ಸಂಪುಟ ದರ್ಜೆ ಸ್ಥಾನಮಾನ…! Read More »

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…!

ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವನ್ನು ಸಂಬಂಧಿಕರು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಸಮೀಪದ ಗೋಳಿಯಡ್ಕ ವ್ಯಕ್ತಿ ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮಾಂಸ ಬೆಂದ ವಾಸನೆಗೆ ಬಂದ ನಾಯಿಗಳು ಮಾಂಸವನ್ನು ತಿಂದಿವೆ. ಜೊತೆಗೆ ಉಳಿದ ಎಲುಬುಗಳನ್ನು ಕೆಲವು ಮನೆಗಳ ಅಂಗಳದಲ್ಲಿ

ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಶವ ತಿಂದ ಬೀದಿನಾಯಿಗಳು…! Read More »

ಮೊಮ್ಮಗಳ‌ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ?

ಚೆನ್ನೈ: ಸುಮಾರು 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ 71 ವರ್ಷದ ಅಜ್ಜನಿಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳೇ ಸಹಾಯ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೀತಾ ರಾಣಿ ಮತ್ತು ಕೋಕಿಲಾ ಎಂಬ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇತ್ತೀಚೆಗೆ, ಅತ್ಯಾಚಾರ ಮಾಡಿದ ವೃದ್ಧನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆಗೆ ಒಳಪಡಿಸಿದಾಗ ಮೊಮ್ಮಗಳ ಗರ್ಭಪಾತ ಮಾಡಿಸಲು ಆತ ಹಿಂಸೆ ಕೊಡುತ್ತಿದ್ದ ವಿಚಾರಣೆ ತಿಳಿದುಬಂದಿತ್ತು.

ಮೊಮ್ಮಗಳ‌ ಗರ್ಭಿಣಿಯಾಗಿಸಿದವನಿಗೆ ಮಹಿಳಾ ಪೊಲೀಸರಿಂದ ನೆರವು…! ಇದೆಂತಾ ಅನ್ಯಾಯ? Read More »