Death news

7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಕಾಮುಕರಿಂದ ಅತ್ಯಾಚಾರಕ್ಕೆ ಯತ್ನ… ಸ್ಥಳೀಯರಿಂದ ರಕ್ಷಣೆ

ಸಮಗ್ರನ್ಯೂಸ್:ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್‌ ಸ್ಥಳೀಯರಿಗೆ ಮಾಹಿತಿ ಗೊತ್ತಾಗಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಇಬ್ಬರು ಯುವಕರಿಗೆ ಧರ್ಮದೇಟು ನೀಡಿದ್ದಾರೆ. ಒಬ್ಬ ಆರೋಪಿ ಮಾತ್ರ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.ಇನ್ನೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬೆಂಗಳೂರಿನ ಕಾಡುಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕೋಲೆಟ್ ಮತ್ತು ಬೊಂಬೆ ಕೊಡಿಸುತ್ತೇನೆ ಎಂದು ಹೇಳಿ ಅಪ್ರಾಪ್ತ ಬಾಲಕಿಯನ್ನು ಈ ಕಾಮುಕರು […]

7 ವರ್ಷದ ಹೆಣ್ಣು ಮಗಳೊಬ್ಬಳ ಮೇಲೆ ಕಾಮುಕರಿಂದ ಅತ್ಯಾಚಾರಕ್ಕೆ ಯತ್ನ… ಸ್ಥಳೀಯರಿಂದ ರಕ್ಷಣೆ Read More »

ಒಡಿಶಾ ರೈಲು ದುರಂತ| ಸಾವಿನ ಸಂಖ್ಯೆ 233 ಕ್ಕೆ ಏರಿಕೆ| ಸಾವಿರದ ಸನಿಹದಲ್ಲಿ ಗಾಯಾಳುಗಳು

ಸಮಗ್ರ ನ್ಯೂಸ್: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 900ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಹಿನ್ನೆಲೆ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇಂದು (ಜೂ.03) ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ನೀಡಲಿದ್ದಾರೆ. ಬಹನಾಗಾ ರೈಲು ನಿಲ್ದಾಣದ

ಒಡಿಶಾ ರೈಲು ದುರಂತ| ಸಾವಿನ ಸಂಖ್ಯೆ 233 ಕ್ಕೆ ಏರಿಕೆ| ಸಾವಿರದ ಸನಿಹದಲ್ಲಿ ಗಾಯಾಳುಗಳು Read More »

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ

ಸಮಗ್ರ ನ್ಯೂಸ್: ಬಸ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್​ನ ತಪ್ಪೆ ಸಿಪಾಹ್​ನಲ್ಲಿ ನಡೆದಿದೆ. ಗಾಯಗೊಂಡವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಟ್ರಕ್​ ಡ್ರೈವರ್​ ತಪ್ಪು ದಾರಿಯಲ್ಲಿ ಬಂದ ಕಾರಣ ಬಸ್​ಗೆ ಡಿಕ್ಕಿಯಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿರುವವರಿಗೆ ಸಿಎಂ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸರಿಯಾದ

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ Read More »

ಫಾಲ್ಸ್ ನಲ್ಲಿ ಜಾರಿಬಿದ್ದು ನಾಲ್ಕು ಯುವತಿಯರು ಸಾವು| ಪ್ರಾಣಕ್ಕೆ ಮುಳುವಾದ ಸೆಲ್ಫಿ ಕ್ರೇಝ್

ಸಮಗ್ರ ನ್ಯೂಸ್: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಿತವಾಡ ಫಾಲ್ಸ್‌ನಲ್ಲಿ ಭಾರೀ ದುರಂತ ಸಂಭವಿಸಿದೆ. ಕಾಲು ಜಾರಿ ಬಿದ್ದು ರಾಜ್ಯದ ನಾಲ್ವರು ಯುವತಿಯರು ಸಾವನ್ನಪ್ಪಿದ್ದಾರೆ. ಜಲಪಾತ ವೀಕ್ಷಿಸಲು ಬೆಳಗಾವಿಯಿಂದ 40 ಯುವತಿಯರು ತೆರಳಿದ್ದರು. ಅಲ್ಲಿ ಸೆಲ್ಪಿ ತೆಗೆದುಕೊಳ್ಳುವ ವೇಳೆ ಐವರು ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ. ಇವರಲ್ಲಿ ನಾಲ್ವರು ಮೃತಪಟ್ಟರೆ, ಓರ್ವಳ ಸ್ಥಿತಿ ಗಂಭೀರವಾಗಿದೆ. ಉಜ್ವಲ್ ನಗರದ ಆಸಿಯಾ ಮುಜಾವರ್, ಕುದ್ರಶಿಯಾ, ರುಕ್ಕಶಾರ್ ಭಿಸ್ತಿ, ತಸ್ಮಿಯಾ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಎಲ್ಲ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇವರನ್ನು

ಫಾಲ್ಸ್ ನಲ್ಲಿ ಜಾರಿಬಿದ್ದು ನಾಲ್ಕು ಯುವತಿಯರು ಸಾವು| ಪ್ರಾಣಕ್ಕೆ ಮುಳುವಾದ ಸೆಲ್ಫಿ ಕ್ರೇಝ್ Read More »

ರಾಮಜನ್ಮಭೂಮಿ ಆಂದೋಲನದ ಪ್ರಮುಖ ನಾಯಕ ಆಚಾರ್ಯ ಧರ್ಮೇಂದ್ರ ನಿಧನ

ರಾಜಸ್ಥಾನ: ರಾಮ ಜನ್ಮಭೂಮಿ ಆಂದೋಲನದ ಪ್ರಮುಖ ನಾಯಕ ಆಚಾರ್ಯ ಧರ್ಮೇಂದ್ರ ಅವರು ರಾಜಸ್ಥಾನದ ಜೈಪುರ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ಸವಾಯಿ ಮಾನ್‌ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಇನ್ನು ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕ ಮಂಡಳಿಯಲ್ಲಿದ್ದ ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರು ರಾಮ ಜನ್ಮಭೂಮಿ ಆಂದೋಲನದಲ್ಲಿ ಪ್ರಮುಖ

ರಾಮಜನ್ಮಭೂಮಿ ಆಂದೋಲನದ ಪ್ರಮುಖ ನಾಯಕ ಆಚಾರ್ಯ ಧರ್ಮೇಂದ್ರ ನಿಧನ Read More »

ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಅವಘಡ| ನೀರಲ್ಲಿ ಮುಳುಗಿ ಏಳು ಮಂದಿ ಸಾವು

ಸಮಗ್ರ ನ್ಯೂಸ್: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ‌ಹರಿಯಾಣದಿಂದ ವರದಿಯಾಗಿದೆ. ರಾಜ್ಯದ ಸೋನಿಪತ್‌ನಲ್ಲಿ ಮೂರು ಸಾವುಗಳು ವರದಿಯಾಗಿದ್ದು, ನಾಲ್ವರು ಮಹೇಂದ್ರಗಢದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಮೃತರ ಕುಟುಂಬಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಹಿತಿ ಪ್ರಕಾರ, ಮಹೇಂದ್ರಗಢ ಜಿಲ್ಲೆಯ ಜಗ್ಡೋಲಿ ಗ್ರಾಮದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಸಮಾರಂಭದಲ್ಲಿ ಸುಮಾರು 20-22 ಜನರು ಕಾಲುವೆಗೆ ಇಳಿದಿದ್ದರು. ಈ

ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಅವಘಡ| ನೀರಲ್ಲಿ ಮುಳುಗಿ ಏಳು ಮಂದಿ ಸಾವು Read More »

ಸುಳ್ಯ: ಆಕಸ್ಮಿಕ ಬೆಂಕಿ ಅವಘಡದಲ್ಲಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಸುಧಾಕರ್(45) ಎಂದು ಗುರುತಿಸಲಾಗಿದೆ. ದೇವರಿಗೆ ಹಚ್ಚಿದ್ದ ದೀಪ ಸುಧಾಕರವರು ಮಲಗಿದ್ದ ಹಾಸಿಗೆಗೆ ತಗುಲಿ ಬೆಂಕಿ ಹಚ್ಚಿ ಕೊಂಡಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದೆ ಮತ್ತು ಸುಧಾಕರವರು ಅನಾರೋಗ್ಯದಿಂದ ಕಾರಣ ಎದ್ದು ಓಡಾಡಲು ಸಾದ್ಯವಾಗದೆ ಬೆಂಕಿ ಅವರ ದೆಹಕ್ಕೂ ತಗುಲಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಆಕಸ್ಮಿಕ ಬೆಂಕಿ ಅವಘಡದಲ್ಲಿ ವ್ಯಕ್ತಿ ಸಾವು Read More »

ರೀಲ್ಸ್ ಗಾಗಿ ಪ್ರಾಣ ಕಳೆದುಕೊಂಡ ಯುವಕ/ರೈಲು ಗುದ್ದಿದದ ವಿಡಿಯೋ ವೈರಲ್

ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಲು ರೈಲ್ವೆ ಹಳಿ ಮೇಲೆ ವಿಡಿಯೋ ಶೂಟ್ ಮಾಡುತ್ತಿರುವ ಸಂದರ್ಭ ಯುವಕನಿಗೆ ರೈಲು ಡಿಕ್ಕಿ ಹೊಡೆದ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‍ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಹುಡಗನನ್ನು ಅಕ್ಷಯ್ ರಾಜ್ (17) ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ರೈಲ್ವೆ ಹಳಿಯ ಬಳಿ ಹುಡುಗ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹುಡುಗ ಒಂದು ಸುತ್ತು ತಿರುಗಿ ನೆಲದ ಮೇಲೆ

ರೀಲ್ಸ್ ಗಾಗಿ ಪ್ರಾಣ ಕಳೆದುಕೊಂಡ ಯುವಕ/ರೈಲು ಗುದ್ದಿದದ ವಿಡಿಯೋ ವೈರಲ್ Read More »

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ (64) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಧರ್ಮಸ್ಥಳದವರಾದ ಅವರು ಬೆಂಗಳೂರಿನ ಮಾರತಹಳ್ಳಿಯಲ್ಲಿ ನೆಲೆಸಿದ್ದರು. ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿದ್ದ ಅವರು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ತುಳುವನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಉದಯ್ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ Read More »

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು

ಸಮಗ್ರ ನ್ಯೂಸ್: ವಾಸಿಸುತ್ತಿದ್ದ ಕಟ್ಟಡದ ಎರಡನೇ ಮಹಡಿಯ ಟೆರೇಸ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ನಗರದ ಹೆಣ್ಣೂರಿನಲ್ಲಿ ರವಿವಾರ ನಡೆದಿದೆ. ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತಪಟ್ಟ ಟೆಕ್ಕಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ತಮ್ಮ ಕಟ್ಟಡದ ಟೆರೇಸ್‍ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು. ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಇವರು ವಾಸವಿದ್ದರು.

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು Read More »