ಪ್ರಪಂಚ ಪರ್ಯಟನೆ

70ನೇ ವಯಸ್ಸಿಗೆ ತಂದೆಯಾಗ್ತಿದಾರೆ ರಷ್ಯಾ ಅಧ್ಯಕ್ಷ| ಯುದ್ಧ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ ಪ್ರೇಯಸಿ ಜೊತೆ ಗರಂ ಆದ ಪುಟಿನ್!

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರ​ ರಾಜಕೀಯ ಹಾಗೂ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿ ಇರುತ್ತದೆ. ಅವರ ಜೀವನದ ಕೆಲವು ರಹಸ್ಯಗಳು ಕುತೂಹಲದಿಂದ ಕೂಡಿರುವ ಪುಟಿನ್ ಜೀವನದ ಮತ್ತೊಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಇತ್ತೀಚೆಗೆ ಕಣ್ಮರೆಯಾಗಿದ್ದ ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್​​ ಅಲಿನಾ ಕಬೀವಾ ಇದೀಗ ಗರ್ಭಿಣಿಯಾಗಿರುವ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. 69 ವರ್ಷದ ಪುಟಿನ್​ ಈ ವರ್ಷ ಅಕ್ಟೋಬರ್​ನಲ್ಲಿ 70ನೇ ಜನ್ಮದಿನವನ್ನು ಆಚರಿಸಲಿದ್ದಾರೆ. ಈ ನಡುವೆ ಅವರ ಪ್ರೇಯಸಿ ಮೂರನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ […]

70ನೇ ವಯಸ್ಸಿಗೆ ತಂದೆಯಾಗ್ತಿದಾರೆ ರಷ್ಯಾ ಅಧ್ಯಕ್ಷ| ಯುದ್ಧ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ ಪ್ರೇಯಸಿ ಜೊತೆ ಗರಂ ಆದ ಪುಟಿನ್! Read More »

ಬಾಲಿಯ ಪವಿತ್ರ ವೃಕ್ಷದ ಬಳಿ ಬೆತ್ತಲಾದ ರಷ್ಯಾ ಬೆಡಗಿ| ನಗ್ನ ಸೌಂದರ್ಯ ತೋರಿಸಿದವಳು ಅಂಧರ್!

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಬಾಲಿಯಲ್ಲಿ ಪವಿತ್ರ ವೃಕ್ಷದ ಕೆಳಗೆ ಬೆತ್ತಲಾಗಿ ಪೋಸ್‌ ಕೊಟ್ಟ ಆರೋಪದ ಮೇಲೆ ರಷ್ಯಾದ ಮಾಡೆಲ್ ಗೆ ಜೈಲು ಶಿಕ್ಷೆಯಾಗಿದೆ. ಇಂಡೋನೇಷ್ಯಾದ ತಬನಾನ್ ಜಿಲ್ಲೆಯ ದೇವಾಲಯವೊಂದರ ಸಮೀಪವಿರುವ 700 ವರ್ಷ ಹಳೆಯದಾದ ಆಲದ ಮರದ ಕಾಂಡಕ್ಕೆ ಒರಗಿಕೊಂಡು ಆಕೆ ಬೆತ್ತಲೆಯಾಗಿ ನಿಂತಿರುವ ಚಿತ್ರವನ್ನು ನಂತರ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದಾಳೆ. ಇದು ಬಲಿನೀಸ್ ಸಮುದಾಯಗಳನ್ನು ಕೆರಳಿಸಿದೆ. ಸ್ಥಳೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಕ್ರಮ ಇದಾಗಿದ್ದು, ಪವಿತ್ರ ಮರದ ಮೇಲೆ ನಗ್ನ ಫೋಟೋಶೂಟ್ ನಡೆಸಿದ್ದಕ್ಕಾಗಿ ಅಲೀನಾ ಫಜ್ಲೀವಾ ಮತ್ತು

ಬಾಲಿಯ ಪವಿತ್ರ ವೃಕ್ಷದ ಬಳಿ ಬೆತ್ತಲಾದ ರಷ್ಯಾ ಬೆಡಗಿ| ನಗ್ನ ಸೌಂದರ್ಯ ತೋರಿಸಿದವಳು ಅಂಧರ್! Read More »

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ|

ಸಮಗ್ರ ಡಿಜಿಟಲ್ ಡೆಸ್ಕ್: ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಮಾನವು ಇತ್ತೀಚೆಗೆ ಪೂರ್ವ ನಾಪಾ ಕಣಿವೆಯಲ್ಲಿರುವ ಲೇಕ್ ಬೆರ್ರಿಸ್ಸಾ ಜಲಾಶಯದಲ್ಲಿ ಕಂಡುಬoದಿದೆ. ಪೋರ್ಟಲ್ ಟು ಹೆಲ್ ಹಲವು ವರ್ಷಗಳಿಂದ ಪ್ರೇಕ್ಷಕರನ್ನು ಭಯ ಪಡೆಸುತ್ತಿದೆ. ಇದು 2018 ಮತ್ತು 2019ರಲ್ಲಿ 72 ಅಡಿ ಅಗಲದ ದೈತ್ಯ ರಂಧ್ರ ಕಂಡುಬoದಿತ್ತು. ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ ಈ ರಂಧ್ರ ಸಂಭವಿಸಿದೆ. ಹೆಚ್ಚುವರಿ ನೀರು

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ| Read More »

ಶೃಂಗೇರಿ ಮಠದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ

ಚಿಕ್ಕಮಗಳೂರು: ಶೃಂಗೇರಿ ಮಠದ ಆವರಣದಲ್ಲಿ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ. ಶೃಂಗೇರಿಯ ಪಟ್ಟಣದಲ್ಲಿರುವ ಶಾರದಾಂಬೆ ದೇವಾಲಯದ ಆವರಣದಲ್ಲಿ ಕಾಳಿಂಗ ಸರ್ಪವನ್ನು ಕಂಡು ಭಕ್ತರು ಕಂಗಾಲಾಗಿದ್ದರು. ಈವೇಳೆ ಸ್ಥಳಕ್ಕೆ ಉರಗ ಪ್ರೇಮಿ ಸ್ನೇಕ್ ಅರ್ಜುನ ಭೇಟಿ ನೀಡಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ಕೆರೆಕಟ್ಟೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಶೃಂಗೇರಿ ಮಠದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ Read More »

12 ರೂ.ಗಳಿಗೆ ಸಿಗುತ್ತೆ ನಿಮಗೆ ಮನೆ. ಹಾಗಾದ್ರೆ ಈ ಮನೆ ಎಲ್ಲಿರೋದು? ಈ ಸ್ಟೋರಿ ಓದಿ….

ಕಡಿಮೆ ಜನಸಂಖ್ಯೆಯಿಂದ ಕಂಗೆಟ್ಟಿರುವ ಉತ್ತರ ಕ್ರೋಯೇಷಿಯಾದ ಪಟ್ಟಣವೊಂದು ಹೊಸ ನಿವಾಸಿಗಳನ್ನ ಆಕರ್ಷಿಸುವ ಸಲುವಾಗಿ ಇಲ್ಲಿರುವ ಖಾಲಿ ಮನೆಗಳನ್ನ ಕೇವಲ 11.84 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಈ ಕಡಿಮೆ ದರಕ್ಕೆ ಮನೆಯನ್ನ ಕೆಲ ಬಲವಾದ ಷರತ್ತುಗಳ ಮೇಲೆ ನೀಡಲಾಗುತ್ತಿದೆ. ಲೆಗ್ರಾಡ್​ ಎಂಬ ಪಟ್ಟಣ ಒಂದು ಕಾಲದಲ್ಲಿ ಕ್ರೋಯೆಷಿಯಾದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಪಟ್ಟಣವಾಗಿತ್ತು. ಆದರೆ ಶತಮಾನಗಳ ಹಿಂದೆ ಆಸ್ಟ್ರೋ – ಹಂಗೇರಿಯನ್​ ಸಾಮ್ರಾಜ್ಯದ ವಿಭಜನೆ ಬಳಿಕ ಇಲ್ಲಿ ಜನಸಂಖ್ಯೆ ಕುಸಿತವಾಗಿದೆ. ಈ ಪಟ್ಟಣದಲ್ಲಿ ಪ್ರಸ್ತುತ ಜನಸಂಖ್ಯೆಯು

12 ರೂ.ಗಳಿಗೆ ಸಿಗುತ್ತೆ ನಿಮಗೆ ಮನೆ. ಹಾಗಾದ್ರೆ ಈ ಮನೆ ಎಲ್ಲಿರೋದು? ಈ ಸ್ಟೋರಿ ಓದಿ…. Read More »

-ಇರುವುದೊಂದೇ ಭೂಮಿ ಉಳಿಸಿಕೊಳ್ಳೋಣ ಬನ್ನಿ- ‘ವಿಶ್ವ ಪರಿಸರ ದಿನ’ ವಿಶೇಷ

ಸಮಾಚಾರ ವರದಿ: ಎಲ್ಲಾ ಬಗೆಯ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಆಶಯದೊಂದಿಗೆ ಪ್ರತೀ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಈಗ ನಮ್ಮ ಪರಿಸರ ಹೇಗಿದೆ, ಇದನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವ ಎಲ್ಲರಿಗೂ ಗೊತ್ತು. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಜಾಣ ಕುರುಡರಾಗಿ ವರ್ತಿಸುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಎಷ್ಟೋ ಮರ ಗಿಡಗಳನ್ನು ಕಡೆಯಲಾಗಿದೆ, ನದಿ

-ಇರುವುದೊಂದೇ ಭೂಮಿ ಉಳಿಸಿಕೊಳ್ಳೋಣ ಬನ್ನಿ- ‘ವಿಶ್ವ ಪರಿಸರ ದಿನ’ ವಿಶೇಷ Read More »

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ?

ಎಂಥ ಅಚ್ಚರಿಯಲ್ಲವೇ! ಎಲ್ಲಾದರೂ ಉಂಟೇ? ನಮಗೆ ತಿಳಿದಿರುವ ಹಾಗೆ ಮದುವೆ ಎಂದರೆ ಮನುಷ್ಯರ ನಡುವೆ ಆಗುತ್ತದೆ. ಆದರೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರಗಳು ನಡೆಯುತ್ತಿರುತ್ತವೆ .ಇಂತಹ ಅನಿರೀಕ್ಷಿತ ಸನ್ನಿವೇಶಗಳು ಸಾಮಾನ್ಯ ಜನರಿಗೆ ಪ್ರೇರೇಪಿಸುತ್ತಿರುತ್ತವೆ. ಇಂತಹ ಸುದ್ದಿ ಗಳನ್ನು ಓದಿದಾಗ ಇಂತಹದ್ದೂ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಗತಿ ಓದಿದರೇ ನಿಜಕ್ಕೂ ಆಶ್ಚರ್ಯವೆನಿಸಬಹುದು. ಈ ಘಟನೆ ಜಾರ್ಖಂಡ್ ನಲ್ಲಿ ಮಂಗಳಿ ಮುಂಡ ಎಂಬ 18 ವರ್ಷದ ಯುವತಿ ನಾಯಿಯೊಂದನ್ನು ಮದುವೆಯಾದ ವಿಚಿತ್ರ

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ? Read More »

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ

ನೇಪಾಳ: ಜಗತ್ತಿನ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 25 ಬಾರಿ ಏರುವ ಮೂಲಕ ನೇಪಾಳದ ಕಮಿ ರೀಟಾ ಶೆರ್ಪಾರವರು ಹಲವು ವರ್ಷಗಳಿಂದ ತಾವೇ ಸೃಷ್ಠಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಕಮಿ ರೀಟಾ ಶೆರ್ಪಾರವರ ವಯಸ್ಸು 49. ಇವರು 1994ರಲ್ಲಿ ಮೊದಲ ಬಾರಿಗೆ 8848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ್ದ ಬಳಿಕ ಪ್ರತಿ ವರ್ಷವೂ ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ Read More »

ಭೂಮಿಗಾಗಿ ಒಂದಾಗೋಣ ಬನ್ನಿ:

ಕೊರೊನಾ ವೈರಾಣು ಮನುಕುಲಕ್ಕೆ ತಂದೊಡ್ಡಿರುವ ಆತಂಕದಿಂದ, ವಿಶ್ವದ ಚಟುವಟಿಕೆಗಳೇ ಸ್ತಬ್ಧವಾದಂತಿವೆ. ಆದರೆ, ಇದಕ್ಕಿಂತಲೂ ಅಪಾಯಕಾರಿಯಾದದ್ದು ಹವಾಮಾನ ಬದಲಾವಣೆ. ಈ ಬಗ್ಗೆ ಗಮನಹರಿಸಲೇಬೇಕಾದ ಜರೂರನ್ನು ‘ವಿಶ್ವ ಭೂ ದಿನ’ (ಏ. 22) ನಮಗೆ ನೆನಪಿಸುತ್ತಿದೆ. ಅಮೆರಿಕದ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯದ ಸ್ಥಿತಿಯಲ್ಲಿದ್ದ 60ರ ದಶಕದಲ್ಲಿ, ಬರಡಾಗುತ್ತಿದ್ದ ಭೂಮಿಗಾಗಿ ಮರುಗಿದ ದಿನವಿದು. ವಿಪರೀತವೆಂಬಂತೆ ಹೆಚ್ಚುತ್ತಿದ್ದ ಕಾರ್ಖಾನೆಗಳು, ಆಟೊಮೊಬೈಲ್ ಉದ್ದಿಮೆಯಿಂದ ಕಲುಷಿತಗೊಳ್ಳುತ್ತಿದ್ದ ಗಾಳಿ, ಮಲಿನವಾಗುತ್ತಿದ್ದ ನೀರು, ಇಂತಹ ಬೆಳವಣಿಗೆಯು ತಂದೊಡ್ಡುತ್ತಿದ್ದ ಅನಾರೋಗ್ಯದಿಂದ ಮನುಷ್ಯರನ್ನು ಪಾರು ಮಾಡುವ ಪ್ರಯತ್ನವಾಗಿ ಹುಟ್ಟಿಕೊಂಡಿತು. ಹೀಗೆ, 50

ಭೂಮಿಗಾಗಿ ಒಂದಾಗೋಣ ಬನ್ನಿ: Read More »

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ.

ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೀಗೆ ಹತ್ತು ಹಲವು ಪಾರಂಪರಿಕ ತಾಣಗಳನ್ನು ತನ್ನೊಡಲಲ್ಲಿ ಹೊತ್ತುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಾಸನ ಪರಂಪರಾಗತ ಕೃಷಿ, ರಾಜಕೀಯ ವಿದ್ಯಮಾನ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಪ್ರಸಿದ್ದವಾಗಿದೆ. ವರ್ಷಕ್ಕೊಮ್ಮೆ ಭಕ್ತಾದಿಗಳ ದರುಶನಕ್ಕೆ ತೆರೆಯುವ ಹಾಸನಾಂಬ ದೇಗುಲವು ಹಾಸನದ ಮತ್ತೊಂದು ವಿಶೇಷ. ಇವೆಲ್ಲದರ ನಡುವೆ ಹೇಮಾವತಿ ನದಿಯ ಹಿನ್ನೀರಿನಲ್ಲಿ ನಿಂತಿರುವ ಶೆಟ್ಟಿಹಳ್ಳಿ ಚರ್ಚ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಮುಳುಗದ ಟೈಟಾನಿಕ್ ಹಡಗು ಎಂದೇ ಹೆಸರು ಪಡೆದಿರುವ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ನ್ನು

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ. Read More »