-ದೇಶ ಕೋಶ

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ!

ಮುಂಬೈ: ಕೆಲವೊಮ್ಮೆ ನಮ್ಮ ಆಸೆಗಳೇ ನಮಗೆ ತಿರುಗುಬಾಣವಾಗುತ್ತವೆ ಎನ್ನುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಇಲ್ಲೊಬ್ಬನ ಅಕ್ರಮ ಸಂಬಂಧವೇ ಆತನ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಪ್ರೇಮಪಾಶಕ್ಕೆ ತಾನೇ ಬಲಿಯಾದ ಘಟನೆ ನಡೆದಿರುವುದು ಇಲ್ಲಿನ ಖುಮ್ ಗಾಂವ್ ಎಂಬಲ್ಲಿ. ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆಯಾಗಿತ್ತು. ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ […]

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ! Read More »

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ

ರಾಜಸ್ಥಾನ: ಹಾಡುಹಗಲೇ ರಸ್ತೆಯಲ್ಲಿ ಕಾರು ತಡೆದು, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ವೈದ್ಯ ದಂಪತಿಯನ್ನು ಗುಂಡಿಕ್ಕಿ ಕೊಂದ ಘಟನೆ ರಾಜ್ಯದ ಭರತ್​ಪುರ್​ನಲ್ಲಿ ನಡೆದಿದೆ. ವೈದ್ಯರಾದ ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ದಂಪತಿ ಶುಕ್ರವಾರ ಸಂಜೆ 4.45ರ ವೇಳೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ, ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ವೈದ್ಯ ದಂಪತಿ ಮೇಲೆ ಎರಡು ವರ್ಷದ ಹಿಂದೆ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ Read More »

ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ

ನವದೆಹಲಿ: ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಪರದಾಡುತ್ತಿದೆ ಎಂದು ತೀಕ್ಷ್ಣ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ ಕೋವಿಡ್ ಏನು ಎಂಬುದು ಮೋದಿ ಅವರಿಗೆ ಅರ್ಥವೇ ಆಗಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಆಗಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿದ್ದು, ಇದೀಗ ಆನ್‌ಲೈನ್‌ನಲ್ಲಿ ನಡೆದ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿ, ಕೊರೋನಾ ಮೊದಲನೇ ಅಲೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ನಿಜ. ಆದರೆ ದೇಶದಲ್ಲಿ ಕೊರೋನಾ ೨ನೇ ಅಲೆ ತೀವ್ರತೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ. ಅವರಿಗೆ

ಕೋವಿಡ್ ಬಗ್ಗೆ ಏನೂ ತಿಳಿಯದ ಮೋದಿಯಿಂದ ನಿರ್ವಹಣೆ ಹೇಗೆ ಸಾಧ್ಯ: ರಾಹುಲ್ ಗಾಂಧಿ Read More »

ಮುಸ್ಲಿಮೇತರ ಧರ್ಮದ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ | ಸದ್ದಿಲ್ಲದೆ ಜಾರಿಯಾಗುತ್ತಾ ಸಿಎಎ…?

ನವದೆಹಲಿ: ಭಾರತದ ಪೌರತ್ವ ನೀಡುವುದಕ್ಕಾಗಿ ಮುಸ್ಲಿಂ ಧರ್ಮೀಯರನ್ನು ಹೊರತುಪಡಿಸಿ ಹಿಂದೂಗಳು ಸೇರಿದಂತೆ ಅನ್ಯ ಧರ್ಮಿಯ ನಿರಾಶ್ರಿತರಿಂದ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಗುಜರಾತ್, ರಾಜಸ್ಥಾನ, ಚತ್ತೀಸ್‌ಗಢ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದಂತೆ ಮುಸ್ಲಿಮೇತರರನ್ನು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಆದೇಶವನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು

ಮುಸ್ಲಿಮೇತರ ಧರ್ಮದ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ | ಸದ್ದಿಲ್ಲದೆ ಜಾರಿಯಾಗುತ್ತಾ ಸಿಎಎ…? Read More »

ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ

ಕೋಲ್ಕತಾ.ಮೇ.29: ಯಾಸ್‌ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಇವತ್ತು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಪಶ್ಚಿಮ ಬಂಗಾಳದ ಕಲೈಕುಂಡ್​​​ನಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧನ್​​ಕರ್ ಸಭೆಯಲ್ಲಿ ಭಾಗಿಯಾಗಿ 30 ನಿಮಿಷ ಕಾದ್ರೂ ಸಿಎಂ ಮಮತಾ ಬ್ಯಾನರ್ಜಿ ಬರಲೇ ಇಲ್ಲ. ಅದೇ ಕಟ್ಟಡದಲ್ಲಿದ್ರೂ ಕೂಡ 30 ನಿಮಿಷ ತಡವಾಗಿ ಬಂದ ಮಮತಾ, ಯಾಸ್​ನಿಂದಾದ ಹಾನಿಯ ಕುರಿತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ, ನನಗೆ ಬೇರೆ ಮೀಟಿಂಗ್ ಇದೆ ಅಂತ ಕೂಡಲೇ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ

ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ Read More »

ಗಂಡನ ಮೊಬೈಲ್​ ಚೆಕ್​ ಮಾಡುವ ಮಹಿಳೆಯರೇ ಎಚ್ಚರ..! | ಪತಿಯ ಮೊಬೈಲ್ ನೋಡಿದ ಪತ್ನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ !

ದುಬೈ: ಹೆಚ್ಚಿನ ಮಹಿಳೆಯರಿಗೆ ತಮ್ಮ ಪತಿಯ ಮೊಬೈಲನ್ನು ಚೆಕ್ಕಿಂಗ್ ಮಾಡುವ ಅಭ್ಯಾಸ ಇರುತ್ತದೆ.  ಅಂತಹವರಿಗೆ ಈ ವರದಿ ಎಚ್ಚರಿಕೆ ಘಂಟೆಯಾದಂತಿದೆ. ಹೌದು, ಇಲ್ಲೊಬ್ಬ ಮಹಿಳೆ ಗಂಡನ ವಿರುದ್ಧವೇ ಗೂಢಚರ್ಯೆ ಮಾಡುತ್ತಾ ಆತನ ಮೊಬೈಲ್​ ಅನ್ನು ಕದ್ದು-ಮುಚ್ಚಿ ನೋಡಿ ಅದರಲ್ಲಿದ್ದ ಖಾಸಗಿ ವಿಚಾರಗಳನ್ನ ಬಹಿರಂಗ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಈ ಘಟನೆ ದುಬೈನ ರಾಸ್​ ಅಲ್​ ಖೈಮಾದಲ್ಲಿ ನಡೆದಿದ್ದು, ಗಂಡನ ಮೊಬೈಲ್​ ಚೆಕ್​ ಮಾಡಿ ಆತನ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ ಅಲ್ಲಿನ ಸಿವಿಲ್​ ಕೋರ್ಟ್​ 5,400

ಗಂಡನ ಮೊಬೈಲ್​ ಚೆಕ್​ ಮಾಡುವ ಮಹಿಳೆಯರೇ ಎಚ್ಚರ..! | ಪತಿಯ ಮೊಬೈಲ್ ನೋಡಿದ ಪತ್ನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ ! Read More »

ಕೊರೋನಾ ತಡೆಯಲು ಹಾವು ತಿಂದ ಭೂಪ ಪರಿಸರ ಪ್ರೇಮಿಗಳ ಆಕ್ರೋಶದ ಬೆನ್ನಲ್ಲೇ ಖಾಕಿ ಬಲೆಗೆ

ಚೆನ್ನೈ: ಕೊರೊನಾ ಸೋಂಕು ತಗಲಬಹುದು ಎಂದು ಸರಕಾರ ಹೋರಾಡುತ್ತಿರುವ ಬೆನ್ನಲ್ಲಿ ಹಲವು ಮಂದಿ ತಮ್ಮ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಹೊಸ ಹೊಸ ಅನ್ವೇಷಣೆಗಳು ಸಹ ನಡೆಯುತ್ತಿವೆ. ಇದೇ ಉದ್ದೇಶದಿಂದ ಹಾವೊಂದನ್ನು ತಿಂದ ತಮಿಳುನಾಡಿನ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತನೇ ಹಾವು ತಿಂದ ಭೂಪ. ತಾನು ಹಾವು ತಿನ್ನುವುದನ್ನು ವಿಡಿಯೋ ಮಾಡಿಸಿರುವ ಈತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಸರ

ಕೊರೋನಾ ತಡೆಯಲು ಹಾವು ತಿಂದ ಭೂಪ ಪರಿಸರ ಪ್ರೇಮಿಗಳ ಆಕ್ರೋಶದ ಬೆನ್ನಲ್ಲೇ ಖಾಕಿ ಬಲೆಗೆ Read More »

ಜೂನ್ 30ರವರೆಗೆ ಲಾಕ್ಡೌನ್ ಮುಂದುವರಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ

ನವದೆಹಲಿ: ಕೋವಿಡ್ 19 ಹಿನ್ನೆಲೆಯಲ್ಲಿ, ರಾಷ್ಟ್ರವ್ಯಾಪಿ ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಜೂನ್ 30ರವರೆಗೆ ಮುಂದುವರೆಸುವಂತೆ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ ಬಗ್ಗೆ ಆದೇಶ ಹೊರಡಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲ, ಕೊರೋನಾ ನಿಗ್ರಹಕ್ಕಾಗಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತ ವರ್ಗ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹೆಚ್ಚಿನ ರಾಜ್ಯಗಳಲ್ಲಿ ಕೋರೋನಾ ಸೋಂಕಿಗೊಳಗಾಗಿ ಜನರು ಸಾವಿಗೀಡಾಗುತ್ತಿರುವ ಸಂಖ್ಯೆ ಹಾಗು ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ

ಜೂನ್ 30ರವರೆಗೆ ಲಾಕ್ಡೌನ್ ಮುಂದುವರಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ Read More »

ಬೆಲೂನ್ ಗೆ ನಾಯಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಅರೆಸ್ಟ್

ನವದೆಹಲಿ: ಯೂಟ್ಯೂಬ್ ನಲ್ಲಿ ಲೈಕ್ಸ್ ಪಡೆದುಕೊಳ್ಳಲು ಜನ ಏನೆಲ್ಲ ಕಸರತ್ತು ಮಾಡುವುದು ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿದೆ. ಕೆಲವರು ತಮ್ಮ ತಮ್ಮ ಪ್ರತಿಭೆಯ ಮೂಲಕ ಯೂಟ್ಯೂಬ್ ನಲ್ಲಿ ಖ್ಯಾತಿ ಪಡೆಯುತ್ತಿದ್ದರೆ ಇನ್ನು ಕೆಲವರು, ಇತರರ ಹಾಗು ಕೆಲ ಜೀವಿಗಳ ಜೀವದ ಜೊತೆ ಚೆಲ್ಲಾಟವಾಡಿ ಪ್ರಸಿದ್ಧಿ ಪಡೆಯಲು ಪ್ರಯತ್ನಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಯುವಕ  ತನ್ನ ಸಾಕು ನಾಯಿಗೆ ಹಲವಾರು ಹೈಡ್ರೋಜನ್ ಗ್ಯಾಸ್ ಬಲೂನ್ ಗಳನ್ನು ಕಟ್ಟಿ ಅದನ್ನು ಹಾರುವಂತೆ ಮಾಡಿದ್ದು, ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ

ಬೆಲೂನ್ ಗೆ ನಾಯಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಅರೆಸ್ಟ್ Read More »

ಹಸಿಗಾಯವನ್ನು ಮತ್ತೆ ಕೆರೆಯುತ್ತಿರುವ ಕೇಂದ್ರ ಸರ್ಕಾರ | ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಅಡುಗೆ ಎಣ್ಣೆಯೂ ದುಬಾರಿ

ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದ್ದು, ಅಡುಗೆ ಎಣ್ಣೆ ದರ 200 ರೂ. ಸನಿಹಕ್ಕೆ ತಲುಪಿದೆ. ಈ ಮೂಲಕ ಮತ್ತೆ ಮತ್ತೆ ಜನಸಾಮಾನ್ಯರ ಜೀವನದಲ್ಲಿ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕಳೆದ ವರ್ಷದಿಂದಲೇ ಏರುಗತಿಯಲ್ಲಿ ಸಾಗುತ್ತಿರುವ ಅಡುಗೆ ಎಣ್ಣೆ ದರ 180 ರೂಪಾಯಿ ದಾಟಿ 200 ರೂ. ಸನಿಹಕ್ಕೆ ಬಂದಿದೆ. ಇದರಿಂದಾಗಿ ಬಡವರು, ಮಧ್ಯಮವರ್ಗದವರು ತೊಂದರೆ ಅನುಭವಿಸುವಂತಾಗಿದೆ. ಕೊರೋನಾ ಕಾರಣದಿಂದ ಲಾಕ್ಡೌನ್, ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಮೊದಲೇ ಸಂಕಷ್ಟದಲ್ಲಿರುವ ಜನರಿಗೆ

ಹಸಿಗಾಯವನ್ನು ಮತ್ತೆ ಕೆರೆಯುತ್ತಿರುವ ಕೇಂದ್ರ ಸರ್ಕಾರ | ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಅಡುಗೆ ಎಣ್ಣೆಯೂ ದುಬಾರಿ Read More »