ಕ್ರೀಡೆ

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ

ಶಿಖರ್ ಧವನ್ ನೇತೃತ್ವದ ಭಾರತೀಯ ಸೀಮಿತ ಓವರ್‌ಗಳ ತಂಡ ಸೋಮವಾರ ಸಂಜೆ ಶ್ರೀಲಂಕಾವನ್ನು ತಲುಪಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಿರುವ ಈ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಲಂಕಾ ತಂಡವನ್ನು ಎದುರಿಸಲಿದೆ. ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೀಮ್ ಇಂಡಿಯಾ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್ […]

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ Read More »

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು. ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ Read More »

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್ Read More »

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ’ವಿರಾಟ ದರ್ಶನ’, ಹೊಸ ದಾಖಲೆ ಬರೆದ ಕೊಹ್ಲಿ

ಇಂಗ್ಲೆಂಡ್: ಇಲ್ಲಿನ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ನಡೆಯದೇ ಎರಡನೇ ದಿನ ಆರಂಭವಾಗಿದೆ. ಭಾರತ 146 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಜೇಯ 44 ರನ್ ಮತ್ತು ಅಜಿಂಕ್ಯಾ ರೆಹಾನೆ ಅಜೇಯ 29 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ’ವಿರಾಟ ದರ್ಶನ’, ಹೊಸ ದಾಖಲೆ ಬರೆದ ಕೊಹ್ಲಿ Read More »

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ

ಮಿಲ್ಕಾ ಸಿಂಗ್..ಈ ಹೆಸರೇ ಸ್ಫೂರ್ತಿಯ ಚಿಲುಮೆ. ಟ್ರ್ಯಾಕ್ ನಲ್ಲಿ ಓಡಲು ಶುರು ಮಾಡುವ ಪ್ರತಿ ಅಥ್ಲೀಟ್ ಗೆ ಭರವಸೆಯ ಬೆಳಕು ಈ ಒಂದು ಹೆಸರು. ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್.. ಅಂತಹುದ್ದೊಂದು ಮಾಂತ್ರಿಕತೆ ಮಿಲ್ಕಾ ಸಿಂಗ್ ಹೆಸರಿನಲ್ಲಿದೆ.ಭಾಘ್ ಮಿಲ್ಕಾ.. ಭಾಘ್ ಮಿಲ್ಕಾ.. ಹೌದು ಮಿಲ್ಕಾ ಸಿಂಗ್ ಮೊದಲು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದರು. ನಂತರ ಅಕ್ಷರ ಕಲಿಯಲು ಕಿಲೋ ಮೀಟರ್‌ ಗಟ್ಟಲೇ ಓಡುತ್ತಿದ್ದರು. ಬಳಿಕ ದಂಗೆಯ ಭಯದಿಂದ ಓಡುತ್ತಾ ಗಡಿ

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ Read More »

ಅಥ್ಲೆಟಿಕ್ ದಂತಕಥೆ ಮಿಲ್ಖಾ ಸಿಂಗ್ ವಿಧಿವಶ

ಚಂಡೀಗಢ: ಒಂದು ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್ (91) ಜೂ.19 ನಿಧನರಾಗಿದ್ದಾರೆ.ಈ ಮಾಹಿತಿಯನ್ನು ಕುಟುಂಬದ ವಕ್ತಾರರು ದೃಢಪಡಿಸಿದ್ದಾರೆ. ಜೂ.14 ರಂದು ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾದಿಂದ ಸಾವನ್ನಪ್ಪಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಿಲ್ಖಾ ಸಿಂಗ್ (91) ಗಾಲ್ಫರ್ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಕೊರೊನಾದಿಂದ ತೀವ್ರವಾಗಿ ಅನಾರೋಗ್ಯ ಎದುರಿಸಿದ್ದ ಮಿಲ್ಖಾ ಸಿಂಗ್ ಚೇತರಿಸಿಕೊಂಡು ಜೂ.16 ರಂದು ಐಸಿಯುನಿಂದ ಹೊರ ಬಂದಿದ್ದರು.

ಅಥ್ಲೆಟಿಕ್ ದಂತಕಥೆ ಮಿಲ್ಖಾ ಸಿಂಗ್ ವಿಧಿವಶ Read More »

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್

ಸೌತಾಪ್ಟನ್: ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇಂದು ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಜೂನ್ 22 ರ ವರೆಗೆ ನಡಲಿರುವ ಹಣಾಹಣಿ ಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಸೆಣಸಾಡಲಿವೆ. ಸೀಮಿತ ಓವರ್ಗಳಲ್ಲಿ ವಿಶ್ವ ಕಪ್ ನಡೆಸುತ್ತಿರುವಂತೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಯುದ್ಧ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಅದರಂತೆ 2019 ರಲ್ಲಿ ಜಗತ್ತಿನ 9 ಬಲಿಷ್ಠ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್ Read More »

ಕಳಪೆ ಪ್ರದರ್ಶನ: ಟೀಂ ಇಂಡಿಯಾದಲ್ಲಿ ಮುಂದುವರೆಯಲು ಮನೀಶ್ ಪಾಂಡೆಗೆ ಇದು ಲಾಸ್ಟ್ ಚಾನ್ಸ್

ಮುಂಬೈ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡಲು ಟೀಂ ಇಂಡಿಯಾದ ಎರಡನೇ ತಂಡ ಕೊಲೊಂಬೋಗೆ ಪ್ರಯಾಣ ಬೆಳೆಸಲಿದೆ. ಈ ತಂಡದಲ್ಲಿ ಕನ್ನಡಿಗ ಮನೀಶ್ ಪಾಂಡೆಗೂ ಸ್ಥಾನ ಸಿಕ್ಕಿದೆ. ಕಳೆದ ಕೆಲವು ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲು ಪರದಾಡುತ್ತಿದ್ದ ಪಾಂಡೆಗೆ ಈಗ ಕೊನೆಗೂ ಅವಕಾಶವೊಂದು ಸಿಕ್ಕಿದೆ. ಅದನ್ನು ಅವರು ಯಾವ ರೀತಿ ಬಳಸುತ್ತಾರೆ ಎಂದು ನೋಡಬೇಕಿದೆ. ಯಾಕೆಂದರೆ ಈ ಹಿಂದೆ ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಸರಾಸರಿ ಪ್ರದರ್ಶನ ನೀಡಿದ್ದ ಮನೀಶ್ ಪಾಂಡೆ ಕೊನೆಗೆ

ಕಳಪೆ ಪ್ರದರ್ಶನ: ಟೀಂ ಇಂಡಿಯಾದಲ್ಲಿ ಮುಂದುವರೆಯಲು ಮನೀಶ್ ಪಾಂಡೆಗೆ ಇದು ಲಾಸ್ಟ್ ಚಾನ್ಸ್ Read More »

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ

ಉಡುಪಿ: 80ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡವನ್ನೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ (75ವ.) ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಬಡಾನಿಡಿಯೂರು ಮೂಲದವರಾದ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ತಂಡದಲ್ಲಿ ಗೋಲ್ಕೀಪರ್ ಹಾಗೂ ನಾಯಕನಾಗಿದ್ದ ಇವರು ದೇಶಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರತಿಷ್ಠಿತ

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಪದ್ದು ಬಂಗೇರ ವಿಧಿವಶ Read More »

ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು

ದೆಹಲಿ: ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಮತ್ತೆ ಆರಂಭವಾಗಲಿದೆ. ಐಪಿಎಲ್ ನ 14ನೇ ಸೀಸನ್ ದ್ವಿತೀಯಾರ್ಧ ಬಾಕಿ ಇರುವಂತೆ ಕೋವಿಡ್ ಹಾವಳಿಗೆ ತುತ್ತಾಗಿ ಮೊಟಕುಗೊಂಡಿತ್ತು. ಇದೀಗ ಉಳಿದ ಪಂದ್ಯಗಳನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಅದರಂತೆ 2021 ರ ಸೆಪ್ಟೆಂಬರ್ 18ರಂದು ಆರಂಭಿಸಿ ಅಕ್ಟೋಬರ್ 10ಕ್ಕೆ ಟೂರ್ನಿ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಐಪಿಎಲ್ ಅರ್ಧಕ್ಕೆ ನಿಂತಿರುವುದು ಅಭಿಮಾನಿ ಬಳಗದಲ್ಲಿ ನಿರಾಸೆ ಮೂಡಿಸಿತ್ತು,

ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು Read More »