ಕ್ರೀಡೆ

ಜಾವೆಲಿನ್ ಎಸೆತ: ಭಾರತಕ್ಕೆ ಅವಳಿ ಪದಕ

ಟೋಕಿಯೋ: ಪ್ಯಾರಾಲಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಕ್ರೀಡಾಪಟುಗಳಾದ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಮತ್ತು ಸುಂದರ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಅವಳಿ ಪದಕ ಗೆದ್ದಿದ್ದಾರೆ. ಈ ಹಿಂದೆ ಎರಡು ಬಾರಿ ಪ್ಯಾರಾಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ದೇವೇಂದ್ರ ಝಝಾರಿಯಾ ಈ ಬಾರಿ 64.35 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದಲ್ಲದೆ ತಮ್ಮ ವೈಯಕ್ತಿಕ ಅತ್ಯುನ್ನತ ಸಾಧನೆಗೆ ಪಾತ್ರರಾದರು. ಝಝಾರಿಯಾ ಬೆಳ್ಳಿ ಗೆದ್ದರೆ ಇದೇ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ […]

ಜಾವೆಲಿನ್ ಎಸೆತ: ಭಾರತಕ್ಕೆ ಅವಳಿ ಪದಕ Read More »

ಟೋಕಿಯೋ ಪ್ಯಾರಾಲಂಪಿಕ್| ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೆಕೇರಾ|

ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿದೆ. ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ಚಿನ್ನ ಗೆದ್ದಿರುವ ಅವನಿ ಇಂದು ಬೆಳಗ್ಗೆ ರೌಂಡ್ 2 ನಲ್ಲಿ ಫೈನಲ್​ಗೆ ಆಯ್ಕೆಯಾಗಿದ್ದರು.

ಟೋಕಿಯೋ ಪ್ಯಾರಾಲಂಪಿಕ್| ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೆಕೇರಾ| Read More »

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್

ಟೋಕಿಯೊ: ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್‌ ಕುಮಾರ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌ ಇದರೊಂದಿಗೆ ಭಾರತಕ್ಕೆ ಭಾನುವಾರ ಒಟ್ಟು ಮೂರು ಪದಕಗಳು ಬಂದಂತಾಗಿದೆ. 19.91 ಮೀಟರ್‌ ದೂರ ಎಸೆದು ಪದಕ್ಕೆ ಕೊರಳೊಡ್ಡಿದ್ದೂ ಮಾತ್ರವಲ್ಲದೆ ಏಷಿಯನ್‌ ದಾಖಲೆಯನ್ನೂ ನಿರ್ಮಿಸಿದರು. ಪೋಲೆಂಡ್‌ನ ಪಿಯೋಟರ್‌ ಕೊಸೆವಿಕ್ಜ್‌ (20.02ಮೀ), ಕ್ರೊವೇಷಿಯಾದ ವೆಲಿಮಿರ್‌ ಸ್ಯಾಂಡೊರ್‌ (19.98ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಬಾಚಿಕೊಂಡರು.

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್ Read More »

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಪದಕ| ಎತ್ತರ ಜಿಗಿತದಲ್ಲಿ ನಿಶಾದ್‌ಗೆ ಬೆಳ್ಳಿ

ಟೋಕಿಯೋ:‌ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನಿಶಾದ್ ಕುಮಾರ್ ಇತಿಹಾಸ ಸೃಷ್ಟಿಸಿದ್ದಾರೆ. ನಿಶಾದ್ ಕುಮಾರ್ 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಮತ್ತೊಂದು ಪದಕವನ್ನ ತಂದಿದ್ದಾರೆ. ಅವರು ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ನಿಶಾದ್ ಪ್ರತಿಭೆಯಿಂದ ಶ್ರೀಮಂತ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟಾಪ್ 3 ತಲುಪಿದ್ದರು. ಅವರು ಅಮೆರಿಕಾದ 2 ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಹಿಮಾಚಲ ಪ್ರದೇಶದ

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಪದಕ| ಎತ್ತರ ಜಿಗಿತದಲ್ಲಿ ನಿಶಾದ್‌ಗೆ ಬೆಳ್ಳಿ Read More »

ಪ್ಯಾರಾಲಂಪಿಕ್ಸ್| ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್

ಟೋಕಿಯೋ: ಇಲ್ಲಿ‌ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಪಟು ಭಾವಿನಾ ಪಟೇಲ್ ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 3-4 ಅಂಕಗಳ ಅಂತರದಿಂದ ಸೋಲು ಕಾಣುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ

ಪ್ಯಾರಾಲಂಪಿಕ್ಸ್| ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್ Read More »

ಲಾರ್ಡ್ ನಲ್ಲಿ ಲಾಡು ತಿಂದ ಇಂಡಿಯಾ| ತವರೂರಲ್ಲಿ ಇಂಗ್ಲೆಂಡ್ ಗೆ ಸೋಲಿನ ರುಚಿ ತೋರಿಸಿದ ಭಾರತ|

ಲಂಡನ್: ಇಂಗ್ಲೆಂಡ್ ಅಭಿಮಾನಿಗಳ ಟೀಕೆ, ಬಾಟಲಿ ಎಸೆತ, ರೂಟ್ ಸೈನ್ಯದ ಸ್ಲೆಡ್ಜಿಂಗ್ ಸೇರಿದಂತೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಹಲವು ಅಡೆತಡೆ ಎದುರಿಸಿದ ಟೀಂ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಉತ್ತರ ನೀಡಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ 151 ರನ್ ಗೆಲುವು ದಾಖಲಿಸಿದೆ. 3 ಹಾಗೂ ನಾಲ್ಕನೇ ದಿನದಾಟದಲ್ಲಿ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಅಂತಿಮ ದಿನದಾಟದಲ್ಲಿ ಸುಲಭ ಗೆಲುವು ನಿರೀಕ್ಷಿಸಿತ್ತು. ಆದರೆ ಟೀಂ ಇಂಡಿಯಾದ ತಿರುಗೇಟಿಗೆ ಇಂಗ್ಲೆಂಡ್ ತಂಡಕ್ಕೆ ಕನಿಷ್ಠ ಪಂದ್ಯ ಉಳಿಸಿಕೊಳ್ಳಲು

ಲಾರ್ಡ್ ನಲ್ಲಿ ಲಾಡು ತಿಂದ ಇಂಡಿಯಾ| ತವರೂರಲ್ಲಿ ಇಂಗ್ಲೆಂಡ್ ಗೆ ಸೋಲಿನ ರುಚಿ ತೋರಿಸಿದ ಭಾರತ| Read More »

ಪಿಚ್ ನಲ್ಲೇ ಓಡ್ತಿದೇನೆ,ನಿನ್ನ ಮನೆಯಲ್ಲಿ ಅಲ್ಲ| ಪರಸ್ಪರ ಬೈದಾದಿಕೊಂಡ ಕೊಹ್ಲಿ- ಆ್ಯಂಡರ್ಸನ್

ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್‌ ಜೇಮ್ಸ್‌ ಆಂಡರ್ಸನ್‌ ನಡುವೆ, ಇಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿಯ 2ನೇ ಹಣಾಹಣಿಯಲ್ಲಿ ಮಾತಿನ ಯುದ್ದವೇ ನಡೆದಿದೆ. ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ, ಪದೇ ಪದೇ ಸ್ಲೆಡ್ಜಿಂಗ್‌ ಮೂಲಕ ಕೆಣಕುತ್ತಿದ್ದ ಜೇಮ್ಸ್‌ ಆಂಡರ್ಸನ್‌ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪಂದ್ಯದ ಮೂರನೇ ದಿನಾಟದಲ್ಲೇ ಸ್ಲೆಡ್ಜಿಂಗ್‌ ಶುರು

ಪಿಚ್ ನಲ್ಲೇ ಓಡ್ತಿದೇನೆ,ನಿನ್ನ ಮನೆಯಲ್ಲಿ ಅಲ್ಲ| ಪರಸ್ಪರ ಬೈದಾದಿಕೊಂಡ ಕೊಹ್ಲಿ- ಆ್ಯಂಡರ್ಸನ್ Read More »

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ|

ಹಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಘಳಿಗೆ 2028ರಲ್ಲಿ ಕೂಡಿಬರುತ್ತಿದ್ದು, 2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್​ನ್ನು ರಚನೆ ಮಾಡಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಭರ್ಜರಿಗೆ ಗುಡ್ ನ್ಯೂಸ್ ನೀಡಿದೆ.. ಇನ್ನೂ 2028ರ ಲಾಸ್ ​ಏಂಜಲೀಸ್​ ಒಲಂಪಿಕ್ ​ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಹೇಳಿದ್ರು. ಈ

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ| Read More »

ನೀರಜ್ ಗೆ ಕಾಶಿನಾಥ್ ಕೋಚ್ ಅಲ್ಲ.! – ಅಥ್ಲೆಟಿಕ್ ಸಂಸ್ಥೆ ಹೇಳಿಕೆ

ಜಾವೆಲಿನ್‌ ಥ್ರೋನಲ್ಲಿ ಬಂಗಾರದ ಸಾಧನೆ ಮಾಡಿದ ನೀರಜ್‌ ಚೋಪ್ರಾ ಅವರಿಗೆ ಕಾಶೀನಾಥ್‌ ನಾಯ್ಕ್ ಎಂಬ ಹೆಸರಿನ ಯಾವುದೇ ಕೋಚ್‌ ಅನ್ನು ನೇಮಕ ಮಾಡಿರಲಿಲ್ಲ. ಅವರು ಕೋಚ್‌ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಬಹುಮಾನ ಘೋಷಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ದೊರಕಿದರೆ ರಾಜ್ಯ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸುವುದಾಗಿ ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಇತಿಹಾಸದಲ್ಲೇ ಮೊದಲ ಚಿನ್ನದ ಪದಕ ತಂದಿತ್ತ ನೀರಜ್‌ ಚೋಪ್ರಾಗೆ ಕನ್ನಡಿಗ

ನೀರಜ್ ಗೆ ಕಾಶಿನಾಥ್ ಕೋಚ್ ಅಲ್ಲ.! – ಅಥ್ಲೆಟಿಕ್ ಸಂಸ್ಥೆ ಹೇಳಿಕೆ Read More »

ಟೋಕಿಯೋ ಒಲಿಂಪಿಕ್2020 ಗೆ ವರ್ಣರಂಜಿತ ತೆರೆ| ಹಲವು ದಾಖಲೆಗಳ ಜೊತೆ ಕ್ರೀಡಾಹಬ್ಬಕ್ಕೆ ವಿದಾಯ|

ಟೋಕಿಯೋ: ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬ ಟೋಕಿಯೋ ಒಲಿಂಪಿಕ್ಸ್‌ಗೆ ವರ್ಣರಂಜಿತ ನಯನ ಮನೋಹರ ಸಮಾರಂಭದೊಂದಿಗೆ ಅಂತಿಮ ತೆರೆ ಬಿದ್ದಿದೆ. ೧೬ ದಿನಗಳ ಕಾಲ ನಡೆದ ಕ್ರೀಡಾಕೂಟವು ಸಮಾಪ್ತಿಗೊಂಡಿತು. ಜುಲೈ ೨೩ರಿಂದ ಆಗಸ್ಟ್ ೮ರವರೆಗೆ ನಡೆದ ಒಲಿಂಪಿಕ್ಸ್ ಅನೇಕ ವಿಶ್ವದಾಖಲೆಗಳು ಮತ್ತು ಚಾರಿತ್ರಿಕ ಸಾಧನೆಗಳಿಗೆ ಸಾಕ್ಷಿಯಾಯಿತು. ಸೋಲು-ಗೆಲುವು, ನೋವು-ನಲಿವು, ನಿರಾಸೆ-ಭರವಸೆ ಇವುಗಳ ಒಟ್ಟು ಫಲಿತಾಂಶದಂತಿದ್ದ ಟೋಕಿಯೋ ಕ್ರೀಡಾ ಕುಂಭಮೇಳ ಉದಯೋನ್ಮುಖ ತಾರೆಯರಿಗೂ ಸ್ಛೂರ್ತಿಯ ಚಿಲುಮೆಯಾಯಿತು. ಆಸ್ಟ್ರೇಲಿಯಾದ ಮತ್ಸ್ಯ ಕನ್ಯೆ ಎಮ್ಮಾ ಮ್ಯಾಕಿೋಂನ್ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು

ಟೋಕಿಯೋ ಒಲಿಂಪಿಕ್2020 ಗೆ ವರ್ಣರಂಜಿತ ತೆರೆ| ಹಲವು ದಾಖಲೆಗಳ ಜೊತೆ ಕ್ರೀಡಾಹಬ್ಬಕ್ಕೆ ವಿದಾಯ| Read More »