ಕ್ರೀಡೆ

ಪಿರಿಯಾಪಟ್ಟಣ: ಗಂಧದ ಮರ ಕಳ್ಳತನ| ಓರ್ವ ಬಂಧನ, ಮತ್ತೊಬ್ಬ ಪರಾರಿ

ಸಮಗ್ರ ನ್ಯೂಸ್: ಮೀಸಲು ಅರಣ್ಯ ಪ್ರದೇಶದಿಂದ ಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ದೇವರಾಜ ಕಾಲೋನಿಯ ಮಹದೇವ್ ಬಂಧಿತ ಆರೋಪಿ, ಮತ್ತೊಬ್ಬ ಪರಾರಿಯಾಗಿದ್ದಾನೆ. ಇವರು ಅರನೇನಹಳ್ಳಿ ಮೀಸಲು ಅರಣ್ಯದ ಶ್ರೀಗಂಧದ ಪ್ಲಾಂಟೇಷನ್ ನಿಂದ 5 ಲಕ್ಷ ರೂ. ಬೆಲೆಬಾಳುವ ಸುಮಾರು 45 ಕೆ.ಜಿ ತೂಕದ ಗಂಧದ ಮರದ ತುಂಡನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಅರಣ್ಯ […]

ಪಿರಿಯಾಪಟ್ಟಣ: ಗಂಧದ ಮರ ಕಳ್ಳತನ| ಓರ್ವ ಬಂಧನ, ಮತ್ತೊಬ್ಬ ಪರಾರಿ Read More »

ಪ್ರೋ ಕಬಡ್ಡಿ 9ನೇ ಆವೃತ್ತಿಗೆ ದಿನಗಣನೆ| ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಉದ್ಘಾಟನಾ ಪಂದ್ಯಗಳು

ಸಮಗ್ರ ನ್ಯೂಸ್: ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಆವೃತ್ತಿಯ ವೇಳಾಪಟ್ಟಿಯನ್ನು ಟೂರ್ನಿಯ ಆಯೋಜಕ ಸಂಸ್ಥೆ ಮಶಾಲ್ ಸ್ಪೋರ್ಟ್ಸ್ ಬುಧವಾರ ಪ್ರಕಟಿಸಿದೆ. ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್ 7ರಿಂದ ಕಬಡ್ಡಿ ಕಲರವ ಆರಂಭವಾಗಲಿದೆ. ಅ.7ರಿಂದ ನಂತರ 26ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿದ್ದು, ಅ.28ರಿಂದ ನವೆಂಬರ್‌ 7ರವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಂತರದ ಹಂತದ ಪಂದ್ಯಗಳು ಆಯೋಜನೆಯಾಗಿವೆ. ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಲೀಗ್‌ನ ಮೊದಲ ಮೂರು ದಿನ, ಪ್ರತಿ ದಿನಕ್ಕೆ ಮೂರು

ಪ್ರೋ ಕಬಡ್ಡಿ 9ನೇ ಆವೃತ್ತಿಗೆ ದಿನಗಣನೆ| ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಉದ್ಘಾಟನಾ ಪಂದ್ಯಗಳು Read More »

ಉದ್ದೀಪನ ಮದ್ದು ಸೇವನೆ ಪ್ರಕರಣ| ಎಂ.ಆರ್ ಪೂವಮ್ಮಗೆ ಎರಡು ವರ್ಷ ನಿಷೇಧ

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ ರಿಲೇ ಚಿನ್ನದ ಪದಕ ವಿಜೇತೆ ಎಂ.ಆರ್.ಪೂವಮ್ಮ ಅವರಿಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ಮೇಲ್ಮನವಿ ಸಮಿತಿಯು ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಕೇವಲ ಮೂರು ತಿಂಗಳ ನಿಷೇಧವನ್ನು ನೀಡಿದ ಶಿಸ್ತಿನ ಸಮಿತಿಯ ನಿರ್ಧಾರವನ್ನು ಈ ಪ್ಯಾನೆಲ್‌ ರದ್ದು ಮಾಡಿದೆ. ಈ ನಿಷೇಧದ ಕಾರಣದಿಂದಾಗಿ ಎಂಆರ್‌ ಪೂವಮ್ಮ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ನಿಂದ ಹೊರಬಿದ್ದಂತಾಗಿದೆ. 2021ರ ಫೆಬ್ರವರಿ 18 ರಂದು ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್

ಉದ್ದೀಪನ ಮದ್ದು ಸೇವನೆ ಪ್ರಕರಣ| ಎಂ.ಆರ್ ಪೂವಮ್ಮಗೆ ಎರಡು ವರ್ಷ ನಿಷೇಧ Read More »

ವಿಜಯಪುರ: ಚಕ್ರ ಎಸೆತ ಸ್ಪರ್ಧೆಯಲ್ಲಿ ಮಹಿಬೂಬ ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿನ ಚಕ್ರ ಎಸೆತ ಸ್ಪರ್ಧೆಯಲ್ಲಿ ಸಿಂದಗಿ ತಾಲೂಕಿನ ಗೋಲಗೇರಿಯ ಗೊಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಕು. ಮಹಿಬೂಬ ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಕ್ರೀಡಾ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಪಾಟೀಲ, ಉಪಾಧ್ಯಕ್ಷ ಪಿ.ಎಸ್.ಪಾಟೀಲ, ಕಾರ್ಯದರ್ಶಿ ಆರ್.ಬಿ.ಬಿರಾದಾರ, ನಿರ್ದೇಶಕ ಎನ್.ಜಿ.ಪಾಟೀಲ, ಜಿ.ಆರ್.ಬಿರಾದಾರ, ಎಸ್.ಬಿ.ಮಠ, ಎಸ್.ಎಮ್. ರದ್ದೇವಾಡಗಿ, ಪ್ರಾಚಾರ್ಯ ವಿ.ಡಿ. ಸಿಂದಗಿ, ಉಪ ಪ್ರಾಚಾರ್ಯ ಶ್ರೀಮಂತ ಕೆ.ಎಸ್, ದೈಹಿಕ ಉಪನ್ಯಾಸಕ ಆರ್.ಡಿ.ಪವಾರ ಸಹಶಿಕ್ಷಕ

ವಿಜಯಪುರ: ಚಕ್ರ ಎಸೆತ ಸ್ಪರ್ಧೆಯಲ್ಲಿ ಮಹಿಬೂಬ ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆ Read More »

ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ ನೆಟ್ಟಿಗರು

ನವದೆಹಲಿ: ಮುಂಬರುವ ಐಸಿಸಿ ಟಿ೨೦ ವಿಶ್ವಕಪ್ ಗಾಗಿ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಜೆರ್ಸಿಯನ್ನು ನಿನ್ನೆ ಬಿಡುಗಡೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ ಆದರೆ ಮತ್ತೊಂದೆಡೆ ಪಾಕಿಸ್ತಾನ ತಂಡದ ಹೊಸ ಜೆರ್ಸಿಯ ವಿನ್ಯಾಸ ನಗೆಪಾಟಲಿಗೀಡಾಗಿದೆ. ಪಾಕ್ ತಂಡದ ವಿಶ್ವಕಪ್ ಜೆರ್ಸಿ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಯಕ ಬಾಬರ್ ಆಜಂ ನೂತನ ಜೆರ್ಸಿ ಧರಿಸಿ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿ ಅಣಕಿಸುತ್ತಿದ್ದಾರೆ. ಜೆರ್ಸಿಯ ವಿನ್ಯಾಸವು ಕಳಪೆ ಮಟ್ಟದಲ್ಲಿದ್ದು, ಹೀಗಾಗಿ ಅಭಿಮಾನಿಗಳು ಪಾಕಿಸ್ತಾನ್

ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ ನೆಟ್ಟಿಗರು Read More »

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್

ಸಮಗ್ರ ನ್ಯೂಸ್: ಲ್ಯಾವರ್ ಕಪ್ 2022 ನಂತರ ವೃತ್ತಿಪರ ಟೆನಿಸ್ ನಿಂದ ವಿರಾಮ ಪಡೆಯುವುದಾಗಿ ಟೆನಿಸ್ ದಂತಕಥೆ ರೋಜರ್ ಫೆಡರರ್ ( Roger Federer) ಘೋಷಣೆ ಮಾಡಿದ್ದಾರೆ. ಈ ಮೂಲಕ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಟೆನ್ನಿಸ್ ನಿಂದ ಹೊರಗೆ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಧೀರ್ಘ ಪತ್ರದ ಮೂಲಕ ಟೆನಿಸ್ ಅಂಗಣದಲ್ಲಿ ಒಂದು ಯುಗ ಕಾಲ ಪ್ರಾಬಲ್ಯ ಮೆರೆದಿದ್ದ 20 ಪ್ರಮುಖ ಪ್ರಶಸ್ತಿಗಳ ವಿಜೇತ 41 ವರ್ಷದ ರೋಜರ್

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್ Read More »

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ

ಸಮಗ್ರ ನ್ಯೂಸ್: ರಾಬಿನ್ ಉತ್ತಪ್ಪ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಕ್ರಿಕೆಟ್ ಮಾಜಿ ತಾರೆ ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಗೌರವ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಹೃದಯದಿಂದ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 205

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ Read More »

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು

ಸಮಗ್ರ ನ್ಯೂಸ್: ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಕ್ರೀಡೆಯ ದಿಗ್ಗಜ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜ್ಯೂರಿಚ್ ನ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಎನಿಸಿಕೊಂಡರು.ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದು. ತಮ್ಮ ಮುಂದಿನ ನಾಲ್ಕು

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು Read More »

ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ

ಕ್ರೀಡೆ ನ್ಯೂಸ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅಪ್ಘಾನಿಸ್ತಾನದ ವಿರುದ್ಧ ಸೆ.8ರಂದು ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ. ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ

ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ Read More »

ಕ್ರಿಕೆಟ್ ಅಂಗಳಕ್ಕೆ‌ ಗುಡ್ ಬೈ ಹೇಳಿದ ಸುರೇಶ್ ರೈನಾ

ಸಮಗ್ರ ನ್ಯೂಸ್: ಎಲ್ಲಾ ಮಾದರಿಯ ಕ್ರಿಕೆಟ್​​ ಫಾರ್ಮ್ಯಾಟ್​ಗಳಿಗೆ ಟೀಂ ಇಂಡಿಯಾ ಆಟಗಾರ‌ಸುರೇಶ್ ರೈನಾ ಗುಡ್​ಬೈ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಾನು ವಿದಾಯ ಹೇಳುತ್ತಿದ್ದೇನೆ. ದೇಶ ಮತ್ತು ನನ್ನ ರಾಜ್ಯ ಉತ್ತರ ಪ್ರದೇಶವನ್ನ ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವವಾಗಿದೆ. ನನ್ನ ಕ್ರಿಕೆಟ್ ಬದುಕಿನಲ್ಲಿ ಸಹಕಾರ ನೀಡಿದ ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಚೆನ್ನೈ ಐಪಿಎಲ್, ರಾಜೀವ್ ಶುಕ್ಲಾ, ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟ್ ಅಂಗಳಕ್ಕೆ‌ ಗುಡ್ ಬೈ ಹೇಳಿದ ಸುರೇಶ್ ರೈನಾ Read More »