ಕ್ರೀಡೆ

ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ ನೆಟ್ಟಿಗರು

ನವದೆಹಲಿ: ಮುಂಬರುವ ಐಸಿಸಿ ಟಿ೨೦ ವಿಶ್ವಕಪ್ ಗಾಗಿ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಜೆರ್ಸಿಯನ್ನು ನಿನ್ನೆ ಬಿಡುಗಡೆ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ ಆದರೆ ಮತ್ತೊಂದೆಡೆ ಪಾಕಿಸ್ತಾನ ತಂಡದ ಹೊಸ ಜೆರ್ಸಿಯ ವಿನ್ಯಾಸ ನಗೆಪಾಟಲಿಗೀಡಾಗಿದೆ. ಪಾಕ್ ತಂಡದ ವಿಶ್ವಕಪ್ ಜೆರ್ಸಿ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಯಕ ಬಾಬರ್ ಆಜಂ ನೂತನ ಜೆರ್ಸಿ ಧರಿಸಿ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿ ಅಣಕಿಸುತ್ತಿದ್ದಾರೆ. ಜೆರ್ಸಿಯ ವಿನ್ಯಾಸವು ಕಳಪೆ ಮಟ್ಟದಲ್ಲಿದ್ದು, ಹೀಗಾಗಿ ಅಭಿಮಾನಿಗಳು ಪಾಕಿಸ್ತಾನ್ […]

ಪಾಕ್ ಜೆರ್ಸಿಯ ವಿನ್ಯಾಸವನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ ನೆಟ್ಟಿಗರು Read More »

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್

ಸಮಗ್ರ ನ್ಯೂಸ್: ಲ್ಯಾವರ್ ಕಪ್ 2022 ನಂತರ ವೃತ್ತಿಪರ ಟೆನಿಸ್ ನಿಂದ ವಿರಾಮ ಪಡೆಯುವುದಾಗಿ ಟೆನಿಸ್ ದಂತಕಥೆ ರೋಜರ್ ಫೆಡರರ್ ( Roger Federer) ಘೋಷಣೆ ಮಾಡಿದ್ದಾರೆ. ಈ ಮೂಲಕ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಟೆನ್ನಿಸ್ ನಿಂದ ಹೊರಗೆ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಧೀರ್ಘ ಪತ್ರದ ಮೂಲಕ ಟೆನಿಸ್ ಅಂಗಣದಲ್ಲಿ ಒಂದು ಯುಗ ಕಾಲ ಪ್ರಾಬಲ್ಯ ಮೆರೆದಿದ್ದ 20 ಪ್ರಮುಖ ಪ್ರಶಸ್ತಿಗಳ ವಿಜೇತ 41 ವರ್ಷದ ರೋಜರ್

ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್ Read More »

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ

ಸಮಗ್ರ ನ್ಯೂಸ್: ರಾಬಿನ್ ಉತ್ತಪ್ಪ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಕ್ರಿಕೆಟ್ ಮಾಜಿ ತಾರೆ ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಗೌರವ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಹೃದಯದಿಂದ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 205

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ Read More »

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು

ಸಮಗ್ರ ನ್ಯೂಸ್: ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಕ್ರೀಡೆಯ ದಿಗ್ಗಜ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜ್ಯೂರಿಚ್ ನ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಎನಿಸಿಕೊಂಡರು.ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದು. ತಮ್ಮ ಮುಂದಿನ ನಾಲ್ಕು

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು Read More »

ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ

ಕ್ರೀಡೆ ನ್ಯೂಸ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅಪ್ಘಾನಿಸ್ತಾನದ ವಿರುದ್ಧ ಸೆ.8ರಂದು ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ. ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ

ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ Read More »

ಕ್ರಿಕೆಟ್ ಅಂಗಳಕ್ಕೆ‌ ಗುಡ್ ಬೈ ಹೇಳಿದ ಸುರೇಶ್ ರೈನಾ

ಸಮಗ್ರ ನ್ಯೂಸ್: ಎಲ್ಲಾ ಮಾದರಿಯ ಕ್ರಿಕೆಟ್​​ ಫಾರ್ಮ್ಯಾಟ್​ಗಳಿಗೆ ಟೀಂ ಇಂಡಿಯಾ ಆಟಗಾರ‌ಸುರೇಶ್ ರೈನಾ ಗುಡ್​ಬೈ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಾನು ವಿದಾಯ ಹೇಳುತ್ತಿದ್ದೇನೆ. ದೇಶ ಮತ್ತು ನನ್ನ ರಾಜ್ಯ ಉತ್ತರ ಪ್ರದೇಶವನ್ನ ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವವಾಗಿದೆ. ನನ್ನ ಕ್ರಿಕೆಟ್ ಬದುಕಿನಲ್ಲಿ ಸಹಕಾರ ನೀಡಿದ ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಚೆನ್ನೈ ಐಪಿಎಲ್, ರಾಜೀವ್ ಶುಕ್ಲಾ, ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟ್ ಅಂಗಳಕ್ಕೆ‌ ಗುಡ್ ಬೈ ಹೇಳಿದ ಸುರೇಶ್ ರೈನಾ Read More »

ಎದೆನೋವು ಕಾರಣ; ಮುರುಘಾ ಮಠದ ಶ್ರೀಗಳು ಜೈಲಿನಿಂದ ಆಸ್ಪತ್ರೆಗೆ ಜಂಪ್!!

ಚಿತ್ರದುರ್ಗ : ಮುರಘಾ ಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ . ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು , ಸದ್ಯ ಮರುಘಾಮಠದ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುರುಘಾಮಠದ ಶ್ರೀಗಳನ್ನು ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಾಯ ಶ್ರೀಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಶ್ರೀಗಳನ್ನು ಚಿತ್ರದುರ್ಗದ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆದರೆ ಶ್ರೀಗಳಿಗೆ ಎದೆನೋವು ಕಾಣಿಸಕೊಂಡ

ಎದೆನೋವು ಕಾರಣ; ಮುರುಘಾ ಮಠದ ಶ್ರೀಗಳು ಜೈಲಿನಿಂದ ಆಸ್ಪತ್ರೆಗೆ ಜಂಪ್!! Read More »

ಏಷ್ಯಾಕಪ್ ಕ್ರಿಕೆಟ್; ಪಾಕಿಸ್ತಾನವನ್ನು ಮಣಿಸಿದ ಭಾರತ| 147 ರನ್ ಗೆ ಪಾಕ್ ಆಲೌಟ್

ಸಮಗ್ರ ನ್ಯೂಸ್: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯರ ಭರ್ಜರಿ ಆಟದೊಂದಿಗೆ ಭಾರತಕ್ಕೆ ಪಾಕಿಸ್ತಾನ ಎದುರು ಐದು ವಿಕೆಟ್‌ಗಳ ಜಯ ಲಭಿಸಿತು.‌ ಈ ಮೂಲಕ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ರೋಹಿತ್‌ ಶರ್ಮ ಬಳಗ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು. ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಭಾರತ

ಏಷ್ಯಾಕಪ್ ಕ್ರಿಕೆಟ್; ಪಾಕಿಸ್ತಾನವನ್ನು ಮಣಿಸಿದ ಭಾರತ| 147 ರನ್ ಗೆ ಪಾಕ್ ಆಲೌಟ್ Read More »

ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಈ ಆಟಗಾರರು ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್

ಸಮಗ್ರ ನ್ಯೂಸ್: ಜಿಂಬಾಬ್ವೆ ವಿರುದ್ಧ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​​ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಪಂದ್ಯಾರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆ. ಎಲ್.ರಾಹುಲ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಚ್ಯುಯಿಂಗ್ ಗಮ್ ಬಿಸಾಡಿದ ರಾಹುಲ್: ಕ್ರಿಕೆಟ್ ಪಂದ್ಯ ಶುರುವಾಗುವುದಕ್ಕೂ ಮುಂಚಿತವಾಗಿ ಉಭಯ ದೇಶಗಳ ರಾಷ್ಟ್ರಗೀತೆ ಹಾಡುವುದು ಸಂಪ್ರದಾಯ. ನಿನ್ನೆಯೂ ಭಾರತ-ಜಿಂಬಾಬ್ವೆ ನಡುವಿನ ಪಂದ್ಯ

ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಈ ಆಟಗಾರರು ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್ Read More »

ಕಾಮನ್‌ವೆಲ್ತ್; ಭಾರತಕ್ಕೆ ಮತ್ತೊಂದು ಚಿನ್ನ

ಸಮಗ್ರ ನ್ಯೂಸ್: ಕಾಮನ್‌ವೆಲ್ತ್ ಗೇಮ್ಸ್ 2022 ರ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಲಕ್ಷ್ಯ ಸೇನ್ 19-21 21-9 21-16 ರಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು ಸೋಲಿಸಿ ಪುರುಷರ ಸಿಂಗಲ್ಸ್ ಚಿನ್ನ ಗೆದ್ದಿದ್ದಾರೆ.ಈ ಮೂಲಕ ಭಾರತಕ್ಕೆ ಇದು 20 ನೇ ಚಿನ್ನದ ಪದಕವಾಗಿದೆ.

ಕಾಮನ್‌ವೆಲ್ತ್; ಭಾರತಕ್ಕೆ ಮತ್ತೊಂದು ಚಿನ್ನ Read More »