ಕ್ರೀಡೆ

ಕೊಹ್ಲಿ‌ ಫಿಟ್ನೆಸ್ ಗಾಗಿ ಮಾಡೋ‌ ಖರ್ಚೆಷ್ಟು ಗೊತ್ತಾ? ಊಟದ ರೇಟು ಕೇಳಿದ್ರೇ ಬೆಚ್ಚಿ ಬೀಳ್ತೀರಾ!!

ಸಮಗ್ರ ನ್ಯೂಸ್: ಭಾರತದ ಮಾಜಿ ನಾಯಕ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಫಿಟ್ನೆಸ್ ಬಗ್ಗೆ ಜಾಗೃತರಾಗಿದ್ದಾರೆ. ವಿರಾಟ್ ಕೊಹ್ಲಿ ಮೊಸರು, ಹಾಲಿನ ಉತ್ಪನ್ನಗಳು ಅಥವಾ ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲವಂತೆ. ವಿರಾಟ್ ತನ್ನ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದಿಲ್ಲ. ಇದು ದೇಹವನ್ನು ಕೊಬ್ಬನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿರಾಟ್ ಕೊಹ್ಲಿ ವಿವಿಧ ಪದಾರ್ಥಗಳ ಹಿಟ್ಟಿನ ಬ್ರೆಡ್ ಮಾತ್ರ ತಿನ್ನುತ್ತಾರೆ. ಸಾಮಾನ್ಯ ಅನ್ನದ ಬದಲು ಸ್ಪೇಷಲ್​ ಅನ್ನ ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ […]

ಕೊಹ್ಲಿ‌ ಫಿಟ್ನೆಸ್ ಗಾಗಿ ಮಾಡೋ‌ ಖರ್ಚೆಷ್ಟು ಗೊತ್ತಾ? ಊಟದ ರೇಟು ಕೇಳಿದ್ರೇ ಬೆಚ್ಚಿ ಬೀಳ್ತೀರಾ!! Read More »

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ Read More »

ಟಿ.20 ಮಹಿಳಾ ವಿಶ್ವಕಪ್‌| 6ನೇ ಬಾರಿ ಚಾಂಪಿಯನ್ ಪಟ್ಟ ಪಡೆದ ಆಸೀಸ್

ಸಮಗ್ರ ನ್ಯೂಸ್: ಮಹಿಳಾ ಟಿ.20 ವಿಶ್ವಕಪ್ ಫೈನಲ್​ ಹಣಾಹಣಿಯಲ್ಲಿ ದ.ಆಫ್ರಿಕಾವನ್ನು 19 ರನ್​​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಮಹಿಳೆಯರ ತಂಡ ಟಿ20 ವಿಶ್ವ ಕಪ್ ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಮೂಲಕ ಆಸೀಸ್​ ಬಳಗದ ಪಾಲಿಗೆ ಸತತ ಮೂರನೇ ಹಾಗೂ ಒಟ್ಟು ಆರನೇ ಟಿ20 ವಿಶ್ವ ಕಪ್ ಟ್ರೋಫಿಯಾಗಿದೆ. ಈ ಹಿಂದೆ ದಕ್ಷಿಣ 2010, 2012, 2014, 2018, 2020ರಲ್ಲಿ ಕಪ್​ ಗೆದ್ದಿತ್ತು. ಆದರೆ, ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​ನ ಫೈನಲ್​ಗೆ ಪ್ರವೇಶ ಪಡೆದಿದ್ದ

ಟಿ.20 ಮಹಿಳಾ ವಿಶ್ವಕಪ್‌| 6ನೇ ಬಾರಿ ಚಾಂಪಿಯನ್ ಪಟ್ಟ ಪಡೆದ ಆಸೀಸ್ Read More »

ಟೆನಿಸ್ ಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ| ಸೋಲಿನೊಂದಿಗೆ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಮೂಗುತಿ ಸುಂದರಿ

ಸಮಗ್ರ ನ್ಯೂಸ್: WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್’ನಲ್ಲಿ ಸಾನಿಯಾ ಮಿರ್ಜಾ ಮೊದಲ ಸುತ್ತಿನ ಸೋಲಿನೊಂದಿಗೆ ತಮ್ಮ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಮಂಗಳವಾರ ದುಬೈನಲ್ಲಿ ಅಮೆರಿಕದ ಪಾಲುದಾರ ಮ್ಯಾಡಿಸನ್ ಕೀಸ್ ಅವರೊಂದಿಗೆ ಕಣಕ್ಕಿಳಿದ ಸಾನಿಯಾ ಮಿರ್ಜಾ, ರಷ್ಯಾದ ಜೋಡಿ ವೆರ್ನೊಕಿಯಾ ಕುಡೆರ್​ಮೆಟೋವಾ ಮತ್ತು ಲ್ಯೂಡ್​ಮಿಲಾ ಸ್ಯಾಮ್ಸೊನೊವಾವ ವಿರುದ್ಧ 46,0-6 ನೇರ ಸೆಟ್​ಗಳಿಂದ ಸೋಲು ಕಂಡರು. ಈ ಮೂಲಕ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದರು. 2003ರಲ್ಲಿ ಪ್ರೊ ಆಗಿ ಆಯ್ಕೆಯಾಗಿದ್ದ 36ರ ಹರೆಯದ ಸಾನಿಯಾ ಮಿರ್ಜಾ, ಸ್ವಿಸ್

ಟೆನಿಸ್ ಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ| ಸೋಲಿನೊಂದಿಗೆ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಮೂಗುತಿ ಸುಂದರಿ Read More »

ವುಮೆನ್ಸ್ ಪ್ರೀಮಿಯರ್ ಲೀಗ್| RCB ಗೆ ಸಾನಿಯಾ ಮೆಂಟರ್

ಸಮಗ್ರ ನ್ಯೂಸ್: ವುಮೆನ್ಸ್​ ಪ್ರಿಮಿಯರ್​ ಲೀಗ್​ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್​ ಹೊಸ ಹೊಸ ಮುಖಗಳನ್ನ ಪರಿಚಯ ಮಾಡುತ್ತಿದೆ. WPLನ ಹರಾಜು ಕಾರ್ಯಕ್ರಮದಲ್ಲಿ ಸ್ಮೃತಿ ಮಂಧಾನರನ್ನು ಭಾರೀ ಮೊತ್ತಕ್ಕೆ ಖರೀದಿಸಿ RCB ಸದ್ದು ಮಾಡಿತ್ತು. ಇದೀಗ ಬೆಂಗಳೂರು ತಂಡದ ಮೆಂಟರ್​ ಆಗಿ ದೀ ಫೇಮಸ್​ ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾರನ್ನು ಆಯ್ಕೆ ಮಾಡಿದೆ. ಆರು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ವಿಜೇತೆಯಾಗಿರುವ ಸಾನಿಯಾ ಮಿರ್ಜಾ, ಕ್ಲಬ್‌ನ ಪ್ಲೇ ಬೋಲ್ಡ್‌ ಸಂಪ್ರದಾಯಕ್ಕೆ ಸೂಕ್ತವಾಗಿ ಒಗ್ಗಿಕೊಳ್ಳುತ್ತಾರೆ ಎಂದು ಕ್ಲಬ್‌ ತನ್ನ

ವುಮೆನ್ಸ್ ಪ್ರೀಮಿಯರ್ ಲೀಗ್| RCB ಗೆ ಸಾನಿಯಾ ಮೆಂಟರ್ Read More »

ಮಹಿಳಾ ಐಪಿಎಲ್; ಆರ್ ಸಿಬಿ ಪಾಲಾದ ಸ್ಮ್ರತಿ ಮಂಧನಾ

ಸಮಗ್ರ ನ್ಯೂಸ್: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ನ ಹರಾಜು ಕಾರ್ಯಕ್ರಮ ನಡೆಯುತ್ತಿದ್ದು, ಮೊದಲ ಆಟಗಾರ್ತಿಯಾಗಿ ಸ್ಮೃತಿ ಮಂಧನಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಟೀಂ ಇಂಡಿಯಾ ಉಪನಾಯಕಿಯಾಗಿರುವ ಸ್ಮ್ರತಿ ಮಂಧನಾ ಅವರನ್ನು ಆರ್ ಸಿಬಿ ತಂಡವು 3.40 ಕೋಟಿ ರೂ. ಗೆ ಖರೀದಿ‌ ಮಾಡಿದೆ. ಆರ್‌ಸಿಬಿ ಸೇರಿಕೊಂಡ ಬೆನ್ನಲ್ಲೇ ಸ್ಮೃತಿ ಮಂಧಾನಾ ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಮಂಧಾನ ಮಾಡಿದ ಮೊದಲ ಟ್ವೀಟ್ ಇದೀಗ ಭಾರಿ ವೈರಲ್ ಆಗಿದೆ. ರಾಯಲ್

ಮಹಿಳಾ ಐಪಿಎಲ್; ಆರ್ ಸಿಬಿ ಪಾಲಾದ ಸ್ಮ್ರತಿ ಮಂಧನಾ Read More »

ವನಿತೆಯರ ಟಿ-20 ವಿಶ್ವಕಪ್| ಶುಭಾರಂಭದ ಮುನ್ನುಡಿ ಬರೆದ ಭಾರತ

ಸಮಗ್ರ ನ್ಯೂಸ್: ಭಾರತ ವನಿತೆಯರ ಕ್ರಿಕೆಟ್​ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಧೂರಿ ಶುಭಾರಂಭ ಮಾಡಿತು. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್​ಗಳಿಂದ ಬಗ್ಗು ಬಡಿದ ಹರ್ಮನ್​ಪ್ರೀತ್​ ಕೌರ್ ಬಳಗ ಸಂಭ್ರಮಾಚರಣೆ ಮಾಡಿತು. ಜೆಮಿಮಾ ರೋಡ್ರಿಗಸ್​ (53 ರನ್​, 38 ಎಸೆತ) ಹಾಗೂ ರಿಚಾ ಘೋಷ್​ (31 ರನ್​, 20 ಎಸೆತ) ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಇಲ್ಲಿ ನ್ಯೂಲ್ಯಾಂಡ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ

ವನಿತೆಯರ ಟಿ-20 ವಿಶ್ವಕಪ್| ಶುಭಾರಂಭದ ಮುನ್ನುಡಿ ಬರೆದ ಭಾರತ Read More »

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆರೋನ್ ಪಿಂಚ್

ಸಮಗ್ರ ನ್ಯೂಸ್: ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್‌ ಫಿಂಚ್‌ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿಕ್ಟೋರಿಯಾ ಮೂಲದ ಆಟಗಾರ ಪೂರ್ಣ ವಿರಾಮ ಇಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆರೋನ್‌ ಫಿಂಚ್‌ ಇಲ್ಲಿಯವರೆಗೂ 254 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 19 ಶತಕಗಳೊಂದಿಗೆ 8804 ರನ್‌ಗಳನ್ನು ಸಿಡಿಸಿದ್ದಾರೆ. ಇಲ್ಲಿಯವರೆಗೂ 103 ಟಿ20 ಪಂದ್ಯಗಳಾಡಿರುವ ಅವರು,

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆರೋನ್ ಪಿಂಚ್ Read More »

ನ್ಯೂಜಿಲೆಂಡ್ ನ‌ ಬೆಂಡೆತ್ತಿದ ಭಾರತೀಯ ದಾಂಡಿಗರು| ಟಿ.20 ಸರಣಿ ಕೈವಶ

ಸಮಗ್ರ ನ್ಯೂಸ್: ಅಹಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 168 ರನ್ ಭರ್ಜರಿ ಜಯಗಳಿಸಿದೆ. ಸರಣಿಯನ್ನು 2 -1 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದ್ದು, ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಸತತ 13 ನೇ ಬಾರಿಗೆ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇಶಾನ್ ಕಿಶನ್ 1, ಶುಭಮನ್ ಗಿಲ್ ಅಜೇಯ 126, ರಾಹುಲ್ ತ್ರಿಪಾಠಿ 44,

ನ್ಯೂಜಿಲೆಂಡ್ ನ‌ ಬೆಂಡೆತ್ತಿದ ಭಾರತೀಯ ದಾಂಡಿಗರು| ಟಿ.20 ಸರಣಿ ಕೈವಶ Read More »

ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್| ಟಿ.20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್

ಸಮಗ್ರ ನ್ಯೂಸ್: ನ್ಯೂಜಿಲ್ಯಾಂಡ್ ವಿರುದ್ಧದ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ದಾಖಲಿಸಿದ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. 63 ಎಸೆತಗಳಲ್ಲಿ 126 ರನ್ ಗಳಿಸಿದ ಶುಭ್ಮನ್ ಗಿಲ್, 200 ರ ಸ್ಟ್ರೈಕ್ ರೇಟ್ ನಲ್ಲಿ ಶತಕ ದಾಖಲಿಸಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯಾ ಕಪ್ ಸರಣಿಯಲ್ಲಿ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ 122 ರನ್ ಗಳಿಸಿದ್ದರು. ​ ಗಿಲ್

ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್| ಟಿ.20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ Read More »