ಕ್ರೀಡೆ

ಏಷ್ಯನ್ ಕಬಡ್ಡಿ ಚಾಂಪಿಯನ್‌ ಶಿಪ್| ಇರಾನ್ ಮಣಿಸಿ ಎಂಟನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ

ಸಮಗ್ರ ನ್ಯೂಸ್: ದ.ಕೊರಿಯಾದ ಬುಸಾನ್ ನಲ್ಲಿ ನಡೆದ 11ನೇ ಆವೃತ್ತಿಯ ಪುರುಷರ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪೂರ್ಣ ಪ್ರಾಬಲ್ಯ ಮೆರೆದು ಭಾರತ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇಂದು ನಡೆದ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಸಾರಥ್ಯದ ಟೀಮ್ ಇಂಡಿಯಾ 42-32 ಅಂಕಗಳಿಂದ ಅಪಾಯಕಾರಿ ಹಾಗೂ ಬದ್ಧ ಎದುರಾಳಿ ಇರಾನ್‌ ತಂಡವನ್ನು ಬಗ್ಗು ಬಡಿದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿರುವ […]

ಏಷ್ಯನ್ ಕಬಡ್ಡಿ ಚಾಂಪಿಯನ್‌ ಶಿಪ್| ಇರಾನ್ ಮಣಿಸಿ ಎಂಟನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ Read More »

ಕ್ರಿಕೆಟಿಗ ಕೆ.ಎಲ್.ರಾಹುಲ್ ಧರ್ಮಸ್ಥಳ ಹಾಗೂ ಕುಕ್ಕೆಗೆ ಭೇಟಿ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಹೆಸರಾಂತ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೇಟಿಗ ಮಂಗಳೂರಿನ ಕೆ.ಎಲ್.ರಾಹುಲ್ ಇಂದು ಭೇಟಿ ನೀಡಿದರು. ಕೆ.ಎಲ್. ರಾಹುಲ್‌ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದುಕೊಂಡರು. ಆ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಹೆಗ್ಗಡೆ ಕುಟುಂಬದವರು ಜತೆಯಲ್ಲಿದ್ದರು.ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು

ಕ್ರಿಕೆಟಿಗ ಕೆ.ಎಲ್.ರಾಹುಲ್ ಧರ್ಮಸ್ಥಳ ಹಾಗೂ ಕುಕ್ಕೆಗೆ ಭೇಟಿ Read More »

ಐಪಿಎಲ್ -2023| ಐದನೇ ಬಾರಿ ಚಾಂಪಿಯನ್ ಪಟ್ಟ‌ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

ಸಮಗ್ರ ನ್ಯೂಸ್: ಐಪಿಎಲ್-2023ರ ರೋಚಕ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಗೆಲುವು ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ 10 ರನ್’ಗಳ ಅವಶ್ಯಕತೆ ಇದ್ದಾಗ ಸಿಕ್ಸರ್ ಮತ್ತು ಬೌಂಡರಿ ಸಿಡಿಸುವ ಮೂಲಕ ರವೀಂದ್ರ ಜಡೇಜಾ ಸಿಎಸ್’ಕೆ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್’ಗಳಲ್ಲಿ

ಐಪಿಎಲ್ -2023| ಐದನೇ ಬಾರಿ ಚಾಂಪಿಯನ್ ಪಟ್ಟ‌ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ Read More »

ಮಳೆ‌ ನಿಂತರೆ ಇಂದು (ಮೇ.30) ಐಪಿಎಲ್ ಫೈನಲ್|

ಸಮಗ್ರ ನ್ಯೂಸ್: 2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಬೇಕಿದ್ದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಇಂದು (ಮೇ.30) ನಡೆಯಲಿದೆ. ಸೋಮವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದ್ದು, ಈ ಬಾರಿಯ ಟ್ರೋಫಿ ಯಾರ ಮುಡಿಗೇರಲಿದೆ ಎನ್ನುವುದು ಗೊತ್ತಾಗಲಿದೆ. ಆದರೆ ಸೋಮವಾರವೂ ಮಳೆ‌ ಸುರಿಯುವ ಮುನ್ಸೂಚನೆ ಸಿಕ್ಕಿದ್ದು, ಪಂದ್ಯ ನಡೆಯುವ ಅನುಮಾನವೂ ಒಂದೆಡೆ ಕಾಡುತ್ತಿದೆ.

ಮಳೆ‌ ನಿಂತರೆ ಇಂದು (ಮೇ.30) ಐಪಿಎಲ್ ಫೈನಲ್| Read More »

ಪ್ಲೇಆಪ್ ನಲ್ಲೇ ಹೊರಗುಳಿದ ಆರ್ ಸಿಬಿ| ಈ ಸಲವೂ ಕಫ್ ನಮ್ದಲ್ಲ!!

ಸಮಗ್ರ ನ್ಯೂಸ್: 16ನೇ ಆವೃತ್ತಿಯ ಐಪಿಎಲ್ ನಲ್ಲಿ ಕಪ್ ಗೆಲ್ಲುವ ಆರ್‌ಸಿಬಿ ಕನಸು ಈಡೇರಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ ಗಳಿಂದ ಸೋತು ಪ್ಲೇ ಆಫ್ ಎಂಟ್ರಿಯಿಂದ ಹೊರಗುಳಿದಿದೆ. ಈ ಮೂಲಕ ಐಪಿಎಲ್ ನ ಈ ಆವೃತ್ತಿಯಲ್ಲೂ ಕಪ್ ವಂಚಿತವಾಗಿದೆ. ಆದರೆ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 61 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ

ಪ್ಲೇಆಪ್ ನಲ್ಲೇ ಹೊರಗುಳಿದ ಆರ್ ಸಿಬಿ| ಈ ಸಲವೂ ಕಫ್ ನಮ್ದಲ್ಲ!! Read More »

ಐಪಿಎಲ್ 2023 ನೆ ಪ್ಲೇ ಆಫ್ ಪ್ರವೇಶ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಸಿಕ್ಕಿದೆ ಅವಕಾಶ

ಸಮಗ್ರ ನ್ಯೂಸ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈಗಾಗಲೇ ಎರಡು ತಂಡಗಳು ಎಂಟ್ರಿ ಕೊಟ್ಟಿದ್ದು. ಗುಜರಾತ್ ಟೈಟಾನ್ಸ್ ಮತ್ತು ಚೆನೈ ಉಳಿದಂತೆ ಎರಡು ಸ್ಥಾನಕ್ಕೆ ಮೂರು ತಂಡಗಳ ನಡುವೆ ಪೈಪೋಟಿ ಆರಂಭವಾಗಿದೆ . ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ 2023 ರ 66 ನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ ಪ್ಲೇ ಆಫ್‌ ನಲ್ಲಿ ಉಳಿದುಕೊಂಡಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಲೀಗ್‌ ಹಂತದ ಪಂದ್ಯಗಳು ಕೊನೆ ಹಂತವನ್ನು ತಲುಪಿದ್ದು. ರಾಜಸ್ಥಾನ ರಾಯಲ್ಸ್‌ ತಂಡ

ಐಪಿಎಲ್ 2023 ನೆ ಪ್ಲೇ ಆಫ್ ಪ್ರವೇಶ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಸಿಕ್ಕಿದೆ ಅವಕಾಶ Read More »

ಕೊನೆ ಓವರ್ ಗಳಲ್ಲಿ ಗೆಲುವಿನ ನಗೆಬೀರಿದ ಕೆಕೆಆರ್| ಮತ್ತೆ ಮಿಂಚಿದ ರಿಂಕುಸಿಂಗ್

ಸಮಗ್ರ ನ್ಯೂಸ್: ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ನಾಯಕ ಶಿಖರ್‌ ಧವನ್‌ (57ರನ್‌, 47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಶಾರುಖ್‌ ಖಾನ್‌ (21 ರನ್‌, 8 ಎಸೆತ, 3 ಬೌಂಡರಿ, 1 ಸಿಕ್ಸರ್‌) ನೆರವಿನಿಂದ 7 ವಿಕೆಟ್‌ಗೆ 179 ರನ್‌ ಪೇರಿಸಿತು. ವರುಣ್‌ ಚಕ್ರವರ್ತಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 26 ರನ್‌ಗೆ 3 ವಿಕೆಟ್‌

ಕೊನೆ ಓವರ್ ಗಳಲ್ಲಿ ಗೆಲುವಿನ ನಗೆಬೀರಿದ ಕೆಕೆಆರ್| ಮತ್ತೆ ಮಿಂಚಿದ ರಿಂಕುಸಿಂಗ್ Read More »

ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ| ದೋಹಾ ಡೈಮಂಡ್ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿದ‌ ಚಿನ್ನದ ಹುಡುಗ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶುಕ್ರವಾರ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜಾವೆಲಿನ್‌ ಅನ್ನು 88.67 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ದೋಹಾ ಡೈಮಂಡ್ ಲೀಗ್ 2023 ಪ್ರಶಸ್ತಿಯನ್ನು ಗೆದ್ದಿದ್ದಾರೆ. ದೋಹಾದ ಕತಾರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆದರು. ನೀರಜ್ ಅವರ ಈ ಮೊದಲ ಥ್ರೋ ಸ್ಪರ್ಧೆಯ ಅತ್ಯುತ್ತಮ ಎಸೆತವಾಗಿತ್ತು. ಆದರೆ, ಮತ್ತೊಮ್ಮೆ ನೀರಜ್ ಜಾವಲಿನ್‌ ಅನ್ನು ಇನ್ನೂ

ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ| ದೋಹಾ ಡೈಮಂಡ್ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿದ‌ ಚಿನ್ನದ ಹುಡುಗ Read More »

ಒಲಿಂಪಿಕ್ಸ್ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

ಸಮಗ್ರ ನ್ಯೂಸ್: 2016ರ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಮೂರು ಪದಕ ಹಾಗೂ ಎರಡು ಬಾರಿ ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಟೋರಿ ಬೋವಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಬೋವಿ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಲು ಹಿಂದೇಟು ಹಾಕಿದೆ ಎಂಬ ಆರೋಪಗಳು ಕೇಳಿಬಂದಿದೆ. ಟೋರಿ 2016ರ ಒಲಿಂಪಿಕ್ಸ್‌ನಲ್ಲಿ ಮೂರು ಪದಗಳನ್ನು ಗೆದ್ದುಕೊಂಡಿದ್ದರು. ಕೊನೆಯದ್ದಾಗಿ 2022ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೀಗ ಬೋವಿಯ ಅನುಮಾನಾಸ್ಪದ

ಒಲಿಂಪಿಕ್ಸ್ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು Read More »

ವೇಶ್ಯೆಯರೊಂದಿಗೆ ಲೈಂಗಿಕ ಸಂಪರ್ಕ ಆರೋಪ| ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧನಕ್ಕೆ ಸುಪ್ರೀಂಗೆ ಮೊರೆ

ಸಮಗ್ರ ನ್ಯೂಸ್: ಮೊಹಮ್ಮದ್ ಶಮಿ ವಿರುದ್ಧದ ಬಂಧನದ ವಾರೆಂಟ್‌ ಗೆ ಸ್ಥಳೀಯ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಪತ್ನಿ ಮಾರ್ಚ್ 28, 2023 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟ್ ಶಮಿ

ವೇಶ್ಯೆಯರೊಂದಿಗೆ ಲೈಂಗಿಕ ಸಂಪರ್ಕ ಆರೋಪ| ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧನಕ್ಕೆ ಸುಪ್ರೀಂಗೆ ಮೊರೆ Read More »