ಕ್ರೀಡೆ

ಏಕದಿನ ವಿಶ್ವಕಪ್ ಸರಣಿ/ ಇಂದು ಭಾರತ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ವೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಆಸಕ್ತರಾಗಿದ್ದಾರೆ. ಕಳೆದ 31 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ಎದುರು ಭಾರತ ತಂಡವು ಒಂದು ಬಾರಿಯೂ ಸೋತಿಲ್ಲ. ಹಾಗಾಗಿ ಇಂದು ಮತ್ತೊಮ್ಮೆ ತನ್ನ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಉಭಯ ತಂಡಗಳು ಏಳು ಬಾರಿ ಮುಖಾಮುಖಿಯಾಗಿವೆ. ಎಲ್ಲ ಸಲವೂ ಭಾರತವೇ ಜಯಿಸಿದೆ. […]

ಏಕದಿನ ವಿಶ್ವಕಪ್ ಸರಣಿ/ ಇಂದು ಭಾರತ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ Read More »

ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ/ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಘೋಷಣೆ

ಸಮಗ್ರ ನ್ಯೂಸ್: ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ 2028 ರಲ್ಲಿ ನಡೆಯಲಿರುವ ಜಾಗತಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಲಾಗಿದೆ. ಮುಂಬೈನಲ್ಲಿ ಒಲಿಂಪಿಕ್ಸ್ ಸಮಿತಿಯ ಕಾರ್ಯಕಾರಿ ಮಂಡಳಿಯ ಸಭೆ ನಡೆದ ಎರಡು ದಿನಗಳ ಬಳಿಕ ಮಾತನಾಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ, ಥಾಮಸ್ ಬಾಚ್, ಬೇಸ್‌ಬಾಲ್/ ಸಾಫ್ಟ್ಬಾಲ್, ಫ್ಲ್ಯಾಗ್ ಫುಟ್‌ಬಾಲ್ ಜೊತೆಗೆ 5 ಹೊಸ ಕ್ರೀಡೆಗಳನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಕ್ರಿಕೆಟ್ ಸಹ ಒಂದು. ಕ್ರಿಕೆಟ್ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಸಂಘಟಕ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಲಾಸ್ ಏಂಜಲಿಸ್

ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ/ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಘೋಷಣೆ Read More »

ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

ಸಮಗ್ರ ನ್ಯೂಸ್: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಏಕದಿನ ವಿಶ್ವಕಪ್​ನಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಇದರೊಂದಿಗೆ ಏಕದಿನ ವಿಶ್ವಕಪ್​ನಲ್ಲಿ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ವಿಶ್ವ ದಾಖಲೆಯನ್ನು ಹಿಟ್​​ಮ್ಯಾನ್ ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 19 ಇನಿಂಗ್ಸ್​ಗಳ ಮೂಲಕ ಏಕದಿನ ವಿಶ್ವಕಪ್​ನಲ್ಲಿ 1000 ರನ್ ಪೂರೈಸಿ ವಿಶ್ವ

ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ Read More »

ಡೆಂಗ್ಯೂ ಜ್ವರ ಹಿನ್ನಲೆ| ಕ್ರಿಕೆಟರ್ ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಸ್ಟಾರ್ ಓಪನರ್ ಶುಭ್​ಮನ್ ಗಿಲ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿಲ್ ಪ್ರಸ್ತುತ ಕಾವೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದಿಂದ ಹೊರಗುಳಿಯಲಿರುವ ಗಿಲ್ ಅವರು ಶನಿವಾರ ಅಹಮದಾಬಾದ್‌ನಲ್ಲಿ ನಡೆಯುವ ಹೈ-ವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯವನ್ನು ಕೂಡ ಕಳೆದುಕೊಳ್ಳುವ ಸಂಭವವಿದೆ. ಇದು ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ವಿಶ್ವಕಪ್ ಪಂದ್ಯವನ್ನು ಕಳೆದುಕೊಂಡಿದ್ದ ಗಿಲ್ ಅವರ ಪ್ಲೇಟ್‌ಲೆಟ್

ಡೆಂಗ್ಯೂ ಜ್ವರ ಹಿನ್ನಲೆ| ಕ್ರಿಕೆಟರ್ ಶುಭ್​ಮನ್ ಗಿಲ್ ಆಸ್ಪತ್ರೆಗೆ ದಾಖಲು Read More »

ಪ್ರೊ ಕಬಡ್ಡಿ ಲೀಗ್; ದುಬಾರಿ‌‌ ಮೊತ್ತಕ್ಕೆ ತೆಲುಗು ಟೈಟಾನ್ಸ್ ಪಾಲಾದ ಪವನ್ ಸೆರಾವತ್

ಸಮಗ್ರ ನ್ಯೂಸ್: ಭಾರತ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್ ಈ ಬಾರಿಯೂ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಅತಿ ದುಬಾರಿ ಆಟಗಾರನೆಂಬ ದಾಖಲೆ ಬರೆದರು. ಸೋಮವಾರ ರಾತ್ರಿ ಆರಂಭವಾದ ಲೀಗ್‌ 10ನೇ ಸೀಸನ್‌ಗೆ ನಡೆದ ಹರಾಜಿನಲ್ಲಿ ತೆಲುಗು ಟೈಟನ್ಸ್‌ ತಂಡ ಈ ಅನುಭವಿ ಆಟಗಾರರನ್ನು ಪೈಪೋಟಿಯ ನಡುವೆ ₹ 2.60 ಕೋಟಿ ಮೊತ್ತಕ್ಕೆ ತನ್ನದಾಗಿಸಿಕೊಂಡಿತು. ಇರಾನ್‌ನ ಆಲ್‌ರೌಂಡರ್‌ ಮೊಹಮ್ಮದ್‌ರೇಜಾ ಶಾಡ್ಲೊಯಿ ಚಿಯೆನಾ ಹರಾಜಿನ ಆರಂಭದಲ್ಲಿ ₹2.35 ಕೋಟಿ ಮೊತ್ತಕ್ಕೆ ಪುಣೇರಿ ಪಲ್ಟನ್ಸ್‌ ತಂಡದ ಪಾಲಾಗಿ ದಾಖಲೆ

ಪ್ರೊ ಕಬಡ್ಡಿ ಲೀಗ್; ದುಬಾರಿ‌‌ ಮೊತ್ತಕ್ಕೆ ತೆಲುಗು ಟೈಟಾನ್ಸ್ ಪಾಲಾದ ಪವನ್ ಸೆರಾವತ್ Read More »

ಏಷ್ಯನ್ ಗೇಮ್ಸ್ ವಿಜೇತರ ಜೊತೆ ಮೋದಿ ಸಂವಾದ

ಸಮಗ್ರ ನ್ಯೂಸ್: 19ನೇ ಏಷ್ಯನ್ ಗೇಮ್ಸ್ ನಲ್ಲಿ ಅಮೋಘ ಸಾಧನೆ ಮಾಡಿ, ಪದಕಗಳ ಶತಕ ಬಾರಿಸಿದ ಭಾರತದ ಅಥ್ಲೆಟ್‌ಗಳ ಜೊತೆ ನಾಳೆ‌ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ನಾಳೆ‌ ಅಕ್ಟೋಬರ್ 10ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತವು 107 ಪದಕಗಳನ್ನು ಗೆಲ್ಲುವುದರೊಂದಿಗೆ ಮೊದಲ ಬಾರಿಗೆ ನೂರು ಪದಕಗಳನ್ನು ಗಳಿಸಿದ ಹೊಸದೊಂದು ದಾಖಲೆಯನ್ನು ನಿರ್ಮಿಸಿತ್ತು. 28 ಚಿನ್ನದ ಪದಕ, 38 ಬೆಳ್ಳಿಯ ಪದಕ ಮತ್ತು

ಏಷ್ಯನ್ ಗೇಮ್ಸ್ ವಿಜೇತರ ಜೊತೆ ಮೋದಿ ಸಂವಾದ Read More »

ICC World Cup| ಆಸ್ಟ್ರೇಲಿಯಾ ಮಣಿಸಿದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್‌ನ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿತು. ಪರಿಣಾಮ 49.3 ಓವರ್​ಗಳಲ್ಲಿ 199 ರನ್​ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಯಿತು. 200 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ

ICC World Cup| ಆಸ್ಟ್ರೇಲಿಯಾ ಮಣಿಸಿದ ಟೀಂ ಇಂಡಿಯಾ Read More »

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅದ್ಭುತ ಸಾಧನೆ/ 28 ಪದಕಗಳ ಹೊಸ ಮೈಲುಗಲ್ಲು

ಸಮಗ್ರ ನ್ಯೂಸ್: ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತವು 107 ಪದಕಗಳನ್ನು ಗೆಲ್ಲುವುದರೊಂದಿಗೆ ಹೊಸದೊಂದು ದಾಖಲೆಯನ್ನು ಸೃಷ್ಟಿಸಿದೆ. 28 ಚಿನ್ನದ ಪದಕ, 38 ಬೆಳ್ಳಿಯ ಪದಕ ಮತ್ತು 41 ಕಂಚಿನ ಪದಕಗಳನ್ನು ಭಾರತವು ಗೆದ್ದುಕೊಂಡಿದೆ. 374 ಪದಕಗಳನ್ನು ಗೆದ್ದುಕೊಂಡ ಚೀನಾವು ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದು, ಜಪಾನ್ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತವು ಒಟ್ಟು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೊನೆಯ ದಿನ 6 ಚಿನ್ನದ ಪದಕ ಸೇರಿದಂತೆ

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅದ್ಭುತ ಸಾಧನೆ/ 28 ಪದಕಗಳ ಹೊಸ ಮೈಲುಗಲ್ಲು Read More »

ಏಷ್ಯನ್ ಗೇಮ್ಸ್: ಮಹಿಳಾ ವಿಭಾಗದ ಕಬಡ್ಡಿಯಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ

ಸಮಗ್ರ ನ್ಯೂಸ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿ ಸ್ಪರ್ಧೆಯ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ ಚಿನ್ನ ಪದಕಕ್ಕೆ ಕೊರಳೊಡ್ಡಿತು. ಶನಿವಾರ ಮುಂಜಾನೆ ಭಾರತೀಯ ತಂಡವು ಆರ್ಚರಿಯಲ್ಲಿ 2 ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನ ಪದಕಗಳು ಮತ್ತು ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಈವರೆಗೆ 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚು ಸೇರಿದಂತೆ 100 ಪದಕಗಳನ್ನು ಗೆಲ್ಲುವ

ಏಷ್ಯನ್ ಗೇಮ್ಸ್: ಮಹಿಳಾ ವಿಭಾಗದ ಕಬಡ್ಡಿಯಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ Read More »

ವಿಶ್ವಕಪ್ ಉದ್ಘಾಟನಾ ಪಂದ್ಯ ‌ನೀರಸ| ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇದ್ದಿದ್ದು ಎಷ್ಟು ಜನ ಗೊತ್ತೆ?

ಸಮಗ್ರ ನ್ಯೂಸ್: 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಡುತ್ತಿವೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡವು ಕಳೆದ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಇದೆಲ್ಲದರ ನಡುವೆ 2023ರ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಬಿಸಿಸಿಐ

ವಿಶ್ವಕಪ್ ಉದ್ಘಾಟನಾ ಪಂದ್ಯ ‌ನೀರಸ| ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇದ್ದಿದ್ದು ಎಷ್ಟು ಜನ ಗೊತ್ತೆ? Read More »