ಕ್ರೀಡೆ

ಕಿವೀಸ್ ಮಣಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಇಂಡಿಯಾ

ಸಮಗ್ರ ನ್ಯೂಸ್: ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ತೀರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಬಲಿಷ್ಠ ಕಿವೀಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 251 ರನ್ […]

ಕಿವೀಸ್ ಮಣಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಇಂಡಿಯಾ Read More »

ಇಂದು ಚಾಂಪಿಯನ್ಸ್ ಟ್ರೋಪಿ ಫೈನಲ್| 12 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಡಲಿದೆಯಾ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡವು 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ಸ್‌ ಟ್ರೋಫಿಗೆ ಮುತ್ತಿಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ನ್ಯೂಜಿಲೆಂಡ್ ವಿರುದ್ಧ ಜಯಿಸಿದರೆ ‘ಚಾಂಪಿಯನ್’ ಕನಸು ಈಡೇರಲಿದೆ. ಕಿವೀಸ್ ಬಳಗವೂ 25 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಕಿವೀಸ್ ಬಳಗವು 10-6ರಿಂದ ಭಾರತದ ಎದುರು ಮುನ್ನಡೆಯಲ್ಲಿದೆ. ಆದರೆ

ಇಂದು ಚಾಂಪಿಯನ್ಸ್ ಟ್ರೋಪಿ ಫೈನಲ್| 12 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಡಲಿದೆಯಾ ಟೀಂ ಇಂಡಿಯಾ Read More »

ಶುರುವಾಗಲಿದೆ ಐಪಿಎಲ್‌ ಅಬ್ಬರ/ ಆರ್‌ಸಿಬಿ ಆನ್‌ಬಾಕ್ಸ್‌ ಟಿಕೆಟ್‌ ಒಂದೇ ಗಂಟೆಯಲ್ಲಿ ಸೋಲ್ಡ್‌ ಔಟ್‌

ಸಮಗ್ರ ನ್ಯೂಸ್‌: ಸದ್ಯದಲ್ಲೇ ಐಪಿಎಲ್ ಅಬ್ಬರ ಶುರುವಾಗಲಿದ್ದು, ಹೀಗಾಗಿ ಮಾರ್ಚ್ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಟಿಕೆಟ್‌ಗಳು ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್ ಆಗಿವೆ. ಪ್ರತಿ ವರ್ಷದಂತೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುಂಚಿತವಾಗಿ ಐಕಾನಿಕ್ ಆರ್‌ಸಿಬಿ ಆನ್‌ಬಾಕ್ಸ್ ಈವೆಂಟ್‌ನ ಟಿಕೆಟ್‌ಗಳ ಆನ್‌ಲೈನ್ ಸೇಲ್ ಇಂದು ಆರಂಭವಾಗಿತ್ತು. ಆರಂಭವಾದ ಒಂದೇ ಗಂಟೆಯೊಳಗೆ ಟಿಕೆಟ್‌ಗಳು ಮಾರಾಟವಾಗಿವೆ. ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುವ ಮೂಲಕ ಆರ್‌ಸಿಬಿ

ಶುರುವಾಗಲಿದೆ ಐಪಿಎಲ್‌ ಅಬ್ಬರ/ ಆರ್‌ಸಿಬಿ ಆನ್‌ಬಾಕ್ಸ್‌ ಟಿಕೆಟ್‌ ಒಂದೇ ಗಂಟೆಯಲ್ಲಿ ಸೋಲ್ಡ್‌ ಔಟ್‌ Read More »

ಸೆಮಿಫೈನಲ್‌ ಗೆದ್ದ ನ್ಯೂಜಿಲೆಂಡ್‌/ ಫೈನಲ್‌ನಲ್ಲಿ ಭಾರತ- ನ್ಯೂಜಿಲೆಂಡ್ ಮುಖಾಮುಖಿ

ಸಮಗ್ರ ನ್ಯೂಸ್‌: ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ನಲ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ನಲ್ಲೂ ಪರಾಕ್ರಮ ಮೆರೆದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದೆ. ಪಾಕ್ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿತು. ಇದನ್ನು ಬೆನ್ನತ್ತಿದ್ದ ಆಫ್ರಿಕಾ 9 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಸೋಲು ಅನುಭವಿಸಿದೆ.

ಸೆಮಿಫೈನಲ್‌ ಗೆದ್ದ ನ್ಯೂಜಿಲೆಂಡ್‌/ ಫೈನಲ್‌ನಲ್ಲಿ ಭಾರತ- ನ್ಯೂಜಿಲೆಂಡ್ ಮುಖಾಮುಖಿ Read More »

ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್‌ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ಅಚ್ಚರಿಯ ವಿದಾಯ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಬೆನ್ನಲ್ಲೇ ಕ್ರಿಕೆಟಿಗ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧದ ಸೆಮಿ ಕದನದಲ್ಲಿ 73 ರನ್ ಗಳಿಸಿದ ಅವರು ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದನ್ನೇ ತಮ್ಮ ಕೊನೆಯ ಏಕದಿನ ಪಂದ್ಯ ಎಂದು ತಂಡದ ಸಹ ಆಟಗಾರರಿಗೆ ತಿಳಿಸಿದರು. ಏಕದಿನ ಸ್ವರೂಪಕ್ಕೆ ವಿದಾಯ ಹೇಳಿದರೂ, 35

ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ Read More »

ಐಸಿಸಿ‌ ಚಾಂಪಿಯನ್ಸ್ ಟ್ರೋಫಿ| ಆಸ್ಟ್ರೇಲಿಯಾ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಟೀಂ‌ ಇಂಡಿಯಾ

ಸಮಗ್ರ ನ್ಯೂಸ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿದ್ದ ಕಾರಣ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದರಂತೆ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ, ಪೂರ್ಣ

ಐಸಿಸಿ‌ ಚಾಂಪಿಯನ್ಸ್ ಟ್ರೋಫಿ| ಆಸ್ಟ್ರೇಲಿಯಾ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಟೀಂ‌ ಇಂಡಿಯಾ Read More »

ಚಾಂಪಿಯನ್ಸ್ ಟ್ರೋಫಿ| ಕೊಹ್ಲಿ ವೀರಾವೇಶಕ್ಕೆ ಮಕಾಡೆ ಮಲಗಿದ ಪಾಕ್

ಸಮಗ್ರ ನ್ಯೂಸ್: ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆದಿದ್ದು ಪಾಕ್ ವಿರುದ್ಧ ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ. 43ನೇ ಓವರ್​ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಶತಕವನ್ನು ಪೂರೈಸಿದರು. ಜೊತೆಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿತ್ತು.

ಚಾಂಪಿಯನ್ಸ್ ಟ್ರೋಫಿ| ಕೊಹ್ಲಿ ವೀರಾವೇಶಕ್ಕೆ ಮಕಾಡೆ ಮಲಗಿದ ಪಾಕ್ Read More »

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್| ಇಂದು‌ ಇಂಡೋ – ಪಾಕ್ ಮುಖಾಮುಖಿ

ಸಮಗ್ರ ನ್ಯೂಸ್: ಇಂದು ನಡೆಯುವ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈನಲ್ಲಿ ನಡೆಯುತ್ತಿದೆ.ಈ ಪಂದ್ಯ ಪಾಕಿಸ್ತಾನದ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದರೆ, ಬಾಂಗ್ಲಾದೇಶ ಮಣಿಸಿ ಪ್ರಾರಂಭಿಸಿದ ಭಾರತಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳಿಂದ ಸೋತು ಟೂರ್ನಯಿಂದ ಬಹುತೇಕ ಹೊರಬಿದ್ದಿದೆ. ಪಾಕಿಸ್ತಾನ ನಾಕೌಟ್ ಹಂತ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಗೆದ್ದು , ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಬೇಕಾಗಿದೆ. ಭಾರತವು

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್| ಇಂದು‌ ಇಂಡೋ – ಪಾಕ್ ಮುಖಾಮುಖಿ Read More »

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರು ಅಪಘಾತ

ಸಮಗ್ರ ನ್ಯೂಸ್: ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪ್ರಯಾಣ ಮಾಡುತ್ತಿದ್ದ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಕಾರ್ಯಕ್ರಮವೊಂದಕ್ಕೆ ತೆರಳಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅದೃಷವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಲ್ಲಿ ಗಂಗೂಲಿ ಬೆಂಗಾವಲು ಪಡೆಯ 2 ವಾಹನಗಳಿಗೆ ಹಾನಿಯಾಗಿದೆ. ಬರ್ಧಮಾನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗಂಗೂಲಿ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ದುರ್ಗಾಪುರ ಹೆದ್ದಾರಿಯ ದಂತನ್‌ಪುರ ಎಂಬಲ್ಲಿ ಗಂಗೂಲಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಬೆಂಗಾವಲು ಪಡೆಯ

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರು ಅಪಘಾತ Read More »

ಜಸ್ಪ್ರೀತ್ ಬುಮ್ರಾ ಐಸಿಸಿ ಚಾಂಪಿಯನ್ಸ್ ನಿಂದ ಹೊರಕ್ಕೆ

ಸಮಗ್ರ ನ್ಯೂಸ್: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣದಿಂದ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ ಎಂದು ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಬುಮ್ರಾ ಅವರ ಅಲಭ್ಯತೆಯ ಕಾರಣ, ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿಯು ಟೂರ್ನಮೆಂಟ್‌ಗಾಗಿ ಹರ್ಷಿತ್ ರಾಣಗೆ ಬುಲಾವ್ ಕೊಟ್ಟಿದೆ. ಟೂರ್ನಿ ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿದೆ. ಬದಲಾದ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯೂ ಸ್ಥಾನ ಪಡೆದಿದ್ದಾರೆ. ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್

ಜಸ್ಪ್ರೀತ್ ಬುಮ್ರಾ ಐಸಿಸಿ ಚಾಂಪಿಯನ್ಸ್ ನಿಂದ ಹೊರಕ್ಕೆ Read More »