Uncategorized

ಶಬರಿಮಲೆಯಲ್ಲಿ ಭಕ್ತರ ನೂಕುನುಗ್ಗಲು| ಹೈಕೋರ್ಟ್ ನಿಂದ ಎಡಿಜಿಪಿಗೆ ಬುಲಾವ್

ಸಮಗ್ರ ನ್ಯೂಸ್: ಕೇರಳದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹೈಕೋರ್ಟ್​ ಆದೇಶ ನೀಡಿದೆ. ಅಲ್ಲದೇ ಪ್ರಕರಣ ಸಂಬಂಧ ಎಡಿಜಿಪಿ ಅವರು ಮಂಗಳವಾರದಂದು ಹೈಕೋರ್ಟ್​ನಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇಬ್ಬರು ವಕೀಲರು ಸಲ್ಲಿಸಿರುವ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್​ ನಡೆಸುತ್ತಿದೆ. ಇದಕ್ಕೂ ಮುನ್ನ, ಇಬ್ಬರು ವಕೀಲರು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ದೇವಾಲಯದಲ್ಲಿ ಒದಗಿಸಲಾಗಿಲ್ಲ. […]

ಶಬರಿಮಲೆಯಲ್ಲಿ ಭಕ್ತರ ನೂಕುನುಗ್ಗಲು| ಹೈಕೋರ್ಟ್ ನಿಂದ ಎಡಿಜಿಪಿಗೆ ಬುಲಾವ್ Read More »

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

ಸಮಗ್ರ ನ್ಯೂಸ್: ಪೊನ್ನಂಪೇಟೆ ತಾಲೂಕು ಹುದಿಕೇರಿ ಹುಬ್ಬಳ್ಳಿಯ ಹೈಸೂಡಳುರು ಗ್ರಾಮದ ಐಗುಂದ ಬಳಿ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಹುದಿಕೇರಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (48) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ನಿಕಿತಾ(21) ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅಕೆಯ ತಂಗಿ ನವ್ಯ(18) ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಮೂವರ ಶವ ಇಂದು ಕೂಟಿಯಲ ಹೊಳೆಯಲ್ಲಿ ಪತ್ತೆಯಾಗಿದೆ. ಮೂಲತಹ

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ Read More »

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತಿಯ PUC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಆಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ದ್ವಿತಿಯ ಪಿಯುಸಿ ಪರೀಕ್ಷೆಯು ಮಾರ್ಚ್ 2 ರಂದು ಪ್ರಾರಂಭವಾಗಿ ಮಾರ್ಚ್ 22ಕ್ಕೆ ಮುಗಿಯಲಿವೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗಳು ನಡೆಯಲಿವೆ.ಪಿಯುಸಿ ಪರೀಕ್ಷೆ ಮುಗಿದ 3ನೇ ದಿನಕ್ಕೆ SSLC ಪರೀಕ್ಷೆ ಆರಂಭವಾಗಲಿದೆ. ಮಂಡಳಿ ರಿಲೀಸ್ ಮಾಡಿರುವ ಟೈಮ್ ಟೇಬಲ್ನಲ್ಲಿ ಮಾರ್ಚ್ 25 ರಂದು

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗವಿದೆ, ತಿಂಗಳಿಗೆ 75,000 ಕೊಡ್ತಾರೆ!

Bengaluru Metro Rail Corporation Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​​​ಲೈನ್ ​& ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುತ್ತದೆ. Job Details:ಮ್ಯಾನೇಜರ್ ಸಿವಿಲ್​ (CSW)-2ಮ್ಯಾನೇಜರ್ (P-Way)-2ಮ್ಯಾನೇಜರ್ (ಆಪರೇಶನ್ಸ್​)-2 Educationಮ್ಯಾನೇಜರ್ ಸಿವಿಲ್​ (CSW), ಮ್ಯಾನೇಜರ್ (P-Way)- ಸಿವಿಲ್

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗವಿದೆ, ತಿಂಗಳಿಗೆ 75,000 ಕೊಡ್ತಾರೆ! Read More »

ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು ಇನ್ನಿಲ್ಲ

ಸಮಗ್ರ ನ್ಯೂಸ್: ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು(87 ವರ್ಷ) ತಡರಾತ್ರಿ 12.20 ಕ್ಕೆ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಪಟೇಲ್ ಭೈರೇಗೌಡ ಹಾಗೂ ಪುಟ್ಟಮ್ಮ ಅವರ

ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು ಇನ್ನಿಲ್ಲ Read More »

ಮೂಡಿಗೆರೆ: ನ. 3ರಂದು ಸೌಜನ್ಯಳ ‌ನ್ಯಾಯಕ್ಕಾಗಿ ಜನಾಗ್ರಹ ಸಭೆ

ಸಮಗ್ರ ನ್ಯೂಸ್: ಸೌಜನ್ಯ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಲ್ಲಾ ಪ್ರಗತಿಪರ ಸಂಘಟನೆಗಳೊಂದಿಗೆ ನ. 3ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಜನಾಗ್ರಹ ಸಭೆ ಹಾಗೂ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ನಾಗರೀಕ ಒಕ್ಕೂಟದ ಕಾರ್ಯದರ್ಶಿ ಜಗದೀಶ್ ಚಕ್ರವರ್ತಿ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮ ಯಾವುದೇ ರಾಜಕೀಯ ಪ್ರೇರಿತವಲ್ಲ. ಯಾವುದೇ ಜಾತಿ, ಧರ್ಮ, ವ್ಯಕ್ತಿ, ಕ್ಷೇತ್ರಕ್ಕೆ ಅಪಮಾನ ಮಾಡುವ ಉದ್ದೇಶವಿಲ್ಲ.

ಮೂಡಿಗೆರೆ: ನ. 3ರಂದು ಸೌಜನ್ಯಳ ‌ನ್ಯಾಯಕ್ಕಾಗಿ ಜನಾಗ್ರಹ ಸಭೆ Read More »

ನಿಮ್ಮ ಕೂದಲು ಚೆನ್ನಾಗಿ ಕಾಣಬೇಕು ಅಂದ್ರೆ ಪಾರ್ಲರ್ ಗೆ ಹೋಗಬೇಕು ಅಂತೇನಿಲ್ಲ? ಈ ಟಿಪ್ಸ್ ಫಾಲೋ ಮಾಡಿ ಸಾಕು

ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೂದಲನ್ನು ಆರೋಗ್ಯಕರವಾಗಿ, ಬಲವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಕೂದಲಿನ ಆರೈಕೆಗಾಗಿ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲಿಗೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಲು ಮೊಸರು ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮೊಸರು ಹೆಚ್ಚಾಗಿ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ. ಅದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ ಮತ್ತು ಬೋಳು ತಲೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಮೊಟ್ಟೆಗಳು ಕೂದಲಿಗೆ ಸಂಪೂರ್ಣ ಪೋಷಣೆಯ ಪ್ರಮುಖ ಮೂಲವಾಗಿದೆ. ಇವುಗಳಲ್ಲಿ

ನಿಮ್ಮ ಕೂದಲು ಚೆನ್ನಾಗಿ ಕಾಣಬೇಕು ಅಂದ್ರೆ ಪಾರ್ಲರ್ ಗೆ ಹೋಗಬೇಕು ಅಂತೇನಿಲ್ಲ? ಈ ಟಿಪ್ಸ್ ಫಾಲೋ ಮಾಡಿ ಸಾಕು Read More »

ಟೊಮ್ಯಾಟೊ ಬಳಿಕ ಈರುಳ್ಳಿ ‌ಬೆಲೆ ಗಗನಕ್ಕೆ| ಕಣ್ಣೀರು ಸುರಿಸುತ್ತಿರುವ ಗ್ರಾಹಕ

ಸಮಗ್ರ ನ್ಯೂಸ್: ಎರಡು ತಿಂಗಳ ಹಿಂದೆ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿದ್ದ ಟೊಮೆಟೊ ಜಾಗವನ್ನು ಈಗ ಈರುಳ್ಳಿ ಆಕ್ರಮಿಸಿದೆ. ಈರುಳ್ಳಿ ಬೆಲೆ ಬುಧವಾರಕ್ಕಿಂತ ದುಪ್ಪಟ್ಟಾಗಿದ್ದು ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ. ಬುಧವಾರ ಪ್ರತಿ ಕೆ.ಜಿಗೆ ₹ 30-₹ 40ನಂತೆ ಮಾರಾಟವಾಗಿದ್ದ ಈರುಳ್ಳಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿ ಕೆ.ಜಿಗೆ ₹ 60-₹ 70ನಂತೆ ಮಾರಾಟವಾಗಿದೆ. ಕಳೆದ ಹತ್ತು ದಿನಗಳಿಂದ ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ಇಳಿಕೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಎಂಪಿಸಿ) ಅಧಿಕಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ತಿಳಿಸಿದ್ದಾರೆ.

ಟೊಮ್ಯಾಟೊ ಬಳಿಕ ಈರುಳ್ಳಿ ‌ಬೆಲೆ ಗಗನಕ್ಕೆ| ಕಣ್ಣೀರು ಸುರಿಸುತ್ತಿರುವ ಗ್ರಾಹಕ Read More »

54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಪ್ರದರ್ಶನ ಕಾಣಲಿರುವ ಕನ್ನಡದ ಕಾಂತಾರ

ಸಮಗ್ರ ನ್ಯೂಸ್: ಕರಾವಳಿಯ ದೈವಾರಾಧನೆಯನ್ನು ಆಧಾರವಾಗಿಟ್ಟುಕೊಂಡು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ವಿಶ್ವಾದ್ಯಾಂತ ಜನಮನ್ನಣೆ ಗಳಿಸಿ. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗೋವಾದಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಪ್ರದರ್ಶನ ಕಾಣಲಿದೆ. ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿದ್ದ ಕಾಂತಾರ, ರಿಷಭ್ ಶೆಟ್ಟಿಯ ಅದ್ಭುತ ನಟನೆಯ ಮೂಲಕ ಜನರ ಮನಗೆದ್ದಿತು. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ

54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಪ್ರದರ್ಶನ ಕಾಣಲಿರುವ ಕನ್ನಡದ ಕಾಂತಾರ Read More »

ಮಡಿಕೇರಿ: ಕಾರಿನ ಮೇಲೆ ಕಾಡಾನೆಗಳ ದಾಳಿ

ಸಮಗ್ರ ನ್ಯೂಸ್: ಕುಶಾಲನಗರದಿಂದ ಮಡಿಕೇರಿಯತ್ತ ತೆರಳುವ ಕಾರಿಗೆ ರಸ್ತೆ ದಾಟುತ್ತಿದ್ದ ಆರೇಳು ಕಾಡಾನೆ ಪಡೆಗಳು ದಾಳಿ ಮಾಡಿದ ಘಟನೆ ಆ.27 ರಂದು ಸಂಭವಿಸಿದೆ. ಬೈಲುಕೊಪ್ಪೆಯ ಸಿದ್ದಾರ್ಥ್ ಎಂಬವರಿಗೆ ಸೇರಿದ ಕಾರಾಗಿದ್ದು. ಅದೃಷ್ಟವಶಾತ್ ಕಾರಿನ ಮಾಲೀಕ ಹಾಗೂ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಡಿಕೇರಿ: ಕಾರಿನ ಮೇಲೆ ಕಾಡಾನೆಗಳ ದಾಳಿ Read More »