Uncategorized

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು ಹುಬ್ಬಳ್ಳಿ ಜಿಲ್ಲೆ ಕಲಘಟಗಿ ತಾಲ್ಲೂಕು ರಾಮನಾಳ ಕ್ರಾಸ್ ಬಳಿ ಕ್ರೂಸರ್ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾನೆ. ಕಿಮ್ಸ್ ನಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಕ್ರೂಸರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ರಾಮನಾಳ ಕ್ರಾಸ ಬಳಿ ಅಪಘಾತ ಸಂಭವಿಸಿದೆ.ಮೃತರಾದವರು ಹಳಿಯಾಳ ತಾಲ್ಲೂಕಿನ ನಂದಿಗಟ್ಟ ಗ್ರಾಮದ ಶಿವನಗೌಡ ಪಾಟೀಲ, ಅಮೃತ ಪಾಟೀಲ ಮೃತಪಟ್ಟವರು. ಚಾಲಕ ಮಾರುತಿ ಎಂಬ […]

ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು Read More »

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು

ತಮಿಳುನಾಡು: ಇತ್ತೀಚೆಗೆ ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ಕಬಡ್ಡಿ ಆಟಗಾರ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದಲ್ಲಿರುವ ಮಾರಿಯಮ್ಮನ್ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದೆ. 34 ವರ್ಷದ ವಿನೋದ್ ಕುಮಾರ್ ಕಬಡ್ಡಿ ಆಟಗಾರ ತನ್ನ ತಂಡದೊಂದಿಗೆ ಉತ್ಸವದಲ್ಲಿ ಭಾಗವಹಿಸಿದ್ದರು. ವಿನೋದ್ ಕುಮಾರ್ ಪಲ್ಟಿ ಹೊಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಪಲ್ಟಿ ಹೊಡೆಯುವಾಗ

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಅಸಲಿ ಕಾರಣವೇ ಬೇರೆ| ಎನ್ಐಎ ತನಿಖೆಯಿಂದ ಹೊರಬಿತ್ತು ಶಾಕಿಂಗ್ ಸತ್ಯ!

ಸಮಗ್ರ ನ್ಯೂಸ್: ಇಡೀ ದೇಶದಲ್ಲಿ ಸುದ್ದಿ ಮಾಡಿದ್ದ ದ.ಕ ಜಿಲ್ಲೆಯ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಕಾರಣ ಏನೆಂಬುದು ಹೊರಗೆ ಬಿದ್ದಿದೆ. ಎನ್‌ಐಎ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದ ಅಂಶಗಳು ನಿಜಕ್ಕೂ ಅಚ್ಚರಿಯುಂಟು ಮಾಡಿವೆ. ಎನ್‌ಐಎ ಎಫ್‌ಐಆರ್ ನಲ್ಲಿದೆ ಆ ಸಿಕ್ರೇಟ್!ಎನ್ಐಎ ತನಿಖೆಯಿಂದ ಆ ಸೀಕ್ರೆಟ್ ಅಂಶ ಹೊರಬಿದ್ದಿದೆ. ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಸಂಚು ಹಾಕಲಾಗಿತ್ತು. ಆ ಉದ್ದೇಶದಿಂದ ಪ್ರವೀಣ್ ನೆಟ್ಟಾರು ಕೊಲೆಗೆ ಆರೋಪಿಗಳು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಅಸಲಿ ಕಾರಣವೇ ಬೇರೆ| ಎನ್ಐಎ ತನಿಖೆಯಿಂದ ಹೊರಬಿತ್ತು ಶಾಕಿಂಗ್ ಸತ್ಯ! Read More »

ತುಮಕೂರಲ್ಲೂ ಸಾವರ್ಕರ್ ಪ್ಲೆಕ್ಸ್ ಹರಿದ ಕಿಡಿಗೇಡಿಗಳು; ಬಂಧನಕ್ಕೆ ಆಗ್ರಹ

ಸಮಗ್ರ ನ್ಯೂಸ್: ಕಿಡಿಗೇಡಿಗಳು ವೀರ ಸಾವರ್ಕರ್​​ ಫೋಟೋ ಹರಿದು ಹಾಕಿರುವ ಘಟನೆ ತುಮಕೂರು ನಗರದ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ತುಮಕೂರು ನಗರದ ವಿವಿಧ ಭಾಗಗಳಲ್ಲಿ 80 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್​ ಹಾಕಿಸಿದ್ದರು. ಮೂರು ದಿನಗಳ ಹಿಂದೆ ಫ್ಲೆಕ್ಸ್​ ಹಾಕಲಾಗಿದ್ದು, ನಿನ್ನೆ ರಾತ್ರಿ ಕಿಡಿಗೇಡಿಗಳು ವೀರ ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್​ ಅನ್ನು ಮಾತ್ರ ಹರಿದು ಹಾಕಿದ್ದಾರೆ. ತುಮಕೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ

ತುಮಕೂರಲ್ಲೂ ಸಾವರ್ಕರ್ ಪ್ಲೆಕ್ಸ್ ಹರಿದ ಕಿಡಿಗೇಡಿಗಳು; ಬಂಧನಕ್ಕೆ ಆಗ್ರಹ Read More »

ಜಮ್ಮು: ನದಿಗೆ ಉರುಳಿದ ಬಸ್; 6 ಯೋಧರು ಸಾವು

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ನಲ್ಲಿ ಐಟಿಬಿಪಿ ಪ್ರಯಾಣಿಸುತ್ತಿದ್ದ ಬಸ್ ಉರುಳಿದ ಬಿದ್ದು 6 ಮಂದಿ ಯೋಧರು ಸಾವಿಗೀಡಾಗಿದ್ದು,ಮೂವರಿಗೆ ಗಾಯಗಳಾಗಿವೆ. ಈ ಯೋಧರನ್ನು ಅಮರನಾಥ ಯಾತ್ರೆಯ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ. ಯೋಧರು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು. ಹೆಚ್ಚಿನ ಯೋಧರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ

ಜಮ್ಮು: ನದಿಗೆ ಉರುಳಿದ ಬಸ್; 6 ಯೋಧರು ಸಾವು Read More »

ಇಂದು ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ; ಗಣ್ಯರಿಂದ ನಮನ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿ ಇಂದಿಗೆ 4 ವರ್ಷ. ಬಿಜೆಪಿಗೆ ಹೊಸ ರೂಪ ಕೊಟ್ಟ ವಾಜಪೇಯಿಗೆ ಗೌರವಾರ್ಥವಾಗಿ ಮಂಗಳವಾರ ಬಿಜೆಪಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಜಯಘಾಟ್‌ನಲ್ಲಿ ವಾಜಪೇಯಿ ಸಮಾಧಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪುಷ್ಪ ನಮನ ಸಲ್ಲಿಸಿದರು. ರಾಜಕೀಯ ಅಜಾತಶತ್ರುವಾಗಿದ್ದ ವಾಜಪೇಯಿ 2018ರ ಆಗಸ್ಟ್ 16ರಂದು ಅಸ್ತಂಗತರಾಗಿದ್ದರು.

ಇಂದು ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ; ಗಣ್ಯರಿಂದ ನಮನ Read More »

ಗುಂಡ್ಯ: ಜೈಲಿನಿಂದ ಬಿಡುಗಡೆಯಾಗುತ್ತಲೇ ಬೈಕ್ ಕದ್ದೊಯ್ದು ಜೈಲುಪಾಲಾದ ಕಳ್ಳ!!

ಸಮಗ್ರ ನ್ಯೂಸ್: ಜೈಲಿನಿಂದ ಬಿಡುಗಡೆಯಾಗುತ್ತಲ್ಲೇ ಬೈಕ್‌ ಕಳ್ಳತನ ಮಾಡಿದ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಗುಂಡ್ಯದಲ್ಲಿ ನಡೆದಿದೆ. ಕಣ್ಣೂರು ಜೈಲಿನಿಂದ ನಿನ್ನೆ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಹಾಗೇ ಬಿಡುಗಡೆಯಾದವನು ಮಂಗಳೂರಿನಿಂದ ಬೈಕೊಂದನ್ನು ಕದ್ದು ಅದರಲ್ಲೇ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ. ಹೀಗೆ ಹೋಗುತ್ತಿದ್ದಾಗ ಎಂಜಿರ ಮಲ್ನಾಡ್ ಡಾಬಾದ ಸಮೀಪ ಇರುವ ಪಿ.ಜಿ ಸ್ಟೋರ್‌ ಬಳಿ ಬೈಕ್ ನ ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್‌ ಹಾಕಿಸಿಕೊಳ್ಳಲು ದುಡ್ಡು ಇಲ್ಲದೇ ಅಲ್ಲಿಂದ ಮುಂದಕ್ಕೆ ತೆರಳಲು ಪಿ.ಸಿ ಸ್ಟೋರ್ ಬಳಿ ದಿನಸಿ ಸಾಮಾನು ಖರೀದಿಸಲು ತೆರಳಿದ

ಗುಂಡ್ಯ: ಜೈಲಿನಿಂದ ಬಿಡುಗಡೆಯಾಗುತ್ತಲೇ ಬೈಕ್ ಕದ್ದೊಯ್ದು ಜೈಲುಪಾಲಾದ ಕಳ್ಳ!! Read More »

ಇಂದಿನ ಚಿನ್ನ ಬೆಳ್ಳಿಯ ಬೆಲೆ ಹೀಗಿದೆ

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಆರಂಭದಿಂದಲೇ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ನೂರು ರೂ.ಗಿಂತಲೂ ಹೆಚ್ಚಾಗಿದೆ. ಇತ್ತೀಚೆಗೆ ಚಿನ್ನ, ಬೆಳ್ಳಿ ದರದಲ್ಲಿ ಭಾರಿ ವ್ಯತ್ಯಾಸವಾಗುತ್ತಿದೆ. ಶ್ರಾವಣ ಮಾಸ ಆರಂಭವಾಗಿರುವುದರಿಂದ ಸಾಲು ಸಾಲು ಹಬ್ಬಗಳು ಹಾಗೂ ಶುಭ ಸಮಾರಂಭಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಚಿನ್ನದ ಬೆಲೆಯೂ ಹೆಚ್ಚಾಗುತ್ತಿದೆ. ಶ್ರಾವಣ ಮಾಸದಲ್ಲಿ ಆಭರಣ ಖರೀದಿ, ವಹಿವಾಟು ಸಹಜವಾಗೇ ಹೆಚ್ಚಿರುತ್ತದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,200

ಇಂದಿನ ಚಿನ್ನ ಬೆಳ್ಳಿಯ ಬೆಲೆ ಹೀಗಿದೆ Read More »

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳಲ್ಲಿ ಬದಲಾವಣೆ| ಬೈಕ್ ಹಿಂಬದಿ ಸವಾರರಿಗೆ ನಿರ್ಬಂಧ

ಸಮಗ್ರ ನ್ಯೂಸ್: ವೀರ ಸಾವರ್ಕರ್‌ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಆ. 15 ರ ಮದ್ಯಾಹ್ನ 3 ಗಂಟೆಯಿಂದ ಆ. 18 ರಂದು ರಾತ್ರಿ 10 ಗಂಟೆಯವರೆಗೆ ಈ ಕೆಳಕಂಡ ನಿಭಂದನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ. 5 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಬಂಧಿಸಿದೆ. ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳಲ್ಲಿ ಬದಲಾವಣೆ| ಬೈಕ್ ಹಿಂಬದಿ ಸವಾರರಿಗೆ ನಿರ್ಬಂಧ Read More »

ಕಾರು ಮತ್ತು ಟೆಂಪೋ ಅಪಘಾತ; 6 ಮಂದಿ ಸಾವು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ಕಾರು ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜರಸುಂಬ-ಪಟೋಡ ಹೆದ್ದಾರಿಯಲ್ಲಿ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇಜ್ ತಹಸಿಲ್‌ನ ಜಿವಾಚಿವಾಡಿ ಗ್ರಾಮದ ಕುಟುಂಬವೊಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪುಣೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ವಾಹನ ಹಾಗೂ ಟೆಂಪೋ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬದ ಐವರು ಹಾಗೂ ಇನ್ನೊಬ್ಬ ವ್ಯಕ್ತಿ

ಕಾರು ಮತ್ತು ಟೆಂಪೋ ಅಪಘಾತ; 6 ಮಂದಿ ಸಾವು Read More »