ರಾಜ್ಯ

ಕಾಸರಗೋಡು: ಆನ್‍ಲೈನ್ ತರಗತಿಗಾಗಿ ಮರವೇರಿದ ವಿದ್ಯಾರ್ಥಿ ಕೆಳಕ್ಕೆ ಬಿದ್ದು ಗಂಭೀರ| ಇದು ನೆಟ್‍ವರ್ಕ್ ಹುಡುಕಾಡುತ್ತಿರುವ ವಿದ್ಯಾರ್ಥಿಗಳ ಪಾಡು

ಕಾಸರಗೋಡು: ಆನ್‍ಲೈನ್ ತರಗತಿಗೆ ವೇಳೆ ಮೊಬೈಲ್ ನೆಟ್‍ವರ್ಕ್ ಸಿಗದಿರುವ ಹಿನ್ನಲೆಯಲ್ಲಿ ಮರ ಹತ್ತಿದ ವಿದ್ಯಾರ್ಥಿ ಕೆಳಬಿದ್ದು ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಕಣ್ಣವ ಬಳಿ ನಿನ್ನೆ ಸಂಜೆ ನಡೆದಿದೆ. ಅನಂತು ಬಾಬು ಗಾಯಗೊಂಡ ವಿದ್ಯಾರ್ಥಿ. ಪ್ಲಸ್‍ವನ್ ಅಲೋಟ್ ಮೆಂಟ್ ವೀಕ್ಷಿಸಲು ಈತ ಮನೆ ಸಮೀಪದ ಮರ ಏರಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮೊಬೈಲ್ ರೇಂಜ್ ಲಭಿಸದಿರುವುದರಿಂದ ಮರವೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ಈ ಘಟನೆ ನಡೆದಿದೆ. ಸದ್ಯ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ […]

ಕಾಸರಗೋಡು: ಆನ್‍ಲೈನ್ ತರಗತಿಗಾಗಿ ಮರವೇರಿದ ವಿದ್ಯಾರ್ಥಿ ಕೆಳಕ್ಕೆ ಬಿದ್ದು ಗಂಭೀರ| ಇದು ನೆಟ್‍ವರ್ಕ್ ಹುಡುಕಾಡುತ್ತಿರುವ ವಿದ್ಯಾರ್ಥಿಗಳ ಪಾಡು Read More »

ಮಂಗಳೂರು: ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ಮನೆ ಮಾಲೀಕನ ಬಂಧನ

ಮಂಗಳೂರು: ಪಕ್ಕದ ಮನೆಗೆ ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮನೆ ಮಾಲೀಕನನ್ನು ಮಹಿಳಾ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಪೆರ್ಮುದೆ ನಿವಾಸಿ ರಾಮಕೃಷ್ಣ ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ರಾಮಕೃಷ್ಣನ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿ ಶಿವಮೊಗ್ಗಕ್ಕೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿದ್ದರು. ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದು, ಆಗ

ಮಂಗಳೂರು: ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ಮನೆ ಮಾಲೀಕನ ಬಂಧನ Read More »

ಶಾಲಾರಂಭ, ಸಮವಸ್ತ್ರ, ಪಠ್ಯಪುಸ್ತಕ ಕುರಿತು ಶಿಕ್ಷಣ ಸಚಿವರು ಏನ್ ಹೇಳಿದ್ದಾರೆ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಒಂದೂವರೆ ವರ್ಷದ ನಂತರ 9 ರಿಂದ 12 ನೇ ತರಗತಿ ಆರಂಭವಾಗಿದ್ದು, ಕಳೆದ ಸೋಮವಾರದಿಂದ ಪ್ರೌಢಶಾಲೆ ಮತ್ತು ಪಿಯುಸಿ ಕಾಲೇಜ್ ಶುರುವಾಗಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ಬಸ್ ಗಳಿಲ್ಲದೆ ಸಮಸ್ಯೆಯಾಗಿದೆ. ಇದನ್ನು ಮನಗಂಡು ಕೂಡಲೇ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಬರುವ ಸಮಯಕ್ಕೆ ಅನುಕೂಲವಾಗುವಂತೆ KSRTC ಬಸ್ ಗಳನ್ನು ಓಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಬಿ.ಸಿ.

ಶಾಲಾರಂಭ, ಸಮವಸ್ತ್ರ, ಪಠ್ಯಪುಸ್ತಕ ಕುರಿತು ಶಿಕ್ಷಣ ಸಚಿವರು ಏನ್ ಹೇಳಿದ್ದಾರೆ ಗೊತ್ತಾ? Read More »

ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರಿಂದಲೇ ರಾಜೀನಾಮೆ| ಬಿಜೆಪಿ ಸಮರ್ಥಕರಿಗೆ ಇದು ಪಾಠವೇ?

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಮುಖಂಡರೊಬ್ಬರು ತಮ್ಮ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಚ್ಚರಿ ಮೂಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಈ ಘಟನೆ ಈಗ ಚರ್ಚಾಗ್ರಾಸವಾಗಿದೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಶಿವಮೊಗ್ಗ ನಗರದ ಶೇಖರ್ ಎನ್ನುವರು ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಗರದ ಅಶೋಕನಗರದಲ್ಲಿ ಬಿಜೆಪಿ ವತಿಯಿಂದ ವಾರ್ಡ್ ಅಧ್ಯಕ್ಷರ ಮನೆ ಬಾಗಿಲಿಗೆ ತೆರಳಿ ನಾಮಫಲಕವನ್ನು ವಿತರಿಸುವ

ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರಿಂದಲೇ ರಾಜೀನಾಮೆ| ಬಿಜೆಪಿ ಸಮರ್ಥಕರಿಗೆ ಇದು ಪಾಠವೇ? Read More »

ಮಡದಿಯ ಅಗಲಿಕೆ ಸಹಿಸದೆ ಚಿತೆಯೇರಿದ ಗಂಡ| ಸತಿಯಲ್ಲ ಇದು ‘ಪತಿಸಹಗಮನ’

ಭವಾನಿಪಟ್ನಾ (ಒಡಿಶಾ): ಹಿಂದೆಲ್ಲಾ ಸತಿಸಹಗಮನ ಪದ್ಧತಿ ಜಾರಿಯಲ್ಲಿತ್ತು. ಪತಿ ಮೃತಪಟ್ಟ ತಕ್ಷಣ ಆತನ ಚಿತೆಯನ್ನು ಪತ್ನಿಯಾದವಳು ಏರಬೇಕಿತ್ತು. ಮನಸ್ಸಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಆಕೆಯನ್ನು ಚಿತೆಯ ಮೇಲೆ ಕುಳ್ಳರಿಸಲಾಗುತ್ತಿತ್ತು. ಈ ಅನಿಷ್ಠ ಪದ್ಧತಿ ತೊಗಲಿ ಹಲವಾರು ದಶಕಗಳು ನಡೆದರೂ ಅಲ್ಲಲ್ಲಿ ಇಂಥ ಘಟನೆಗಳು ಕೇಳಿಬರುತ್ತಲೇ ಇರುತ್ತವೆ.ಆದರೆ ಒಡಿಶಾದಲ್ಲಿ ನಡೆದದ್ದು ಮಾತ್ರ ಇದಕ್ಕೆ ವಿರುದ್ಧವಾಗಿರುವ ಘಟನೆ. ಇಲ್ಲಿ ಪತಿಯೇ ಪತ್ನಿಯ ಚಿತೆಯನ್ನು ಏರಿ ಪ್ರಾಣ ಬಿಟ್ಟಿದ್ದಾರೆ. ಪ್ರೀತಿಯ ಪತ್ನಿಯ ಅಗಲಿಕೆಯನ್ನು ಸಹಿಸದ ಅವರು, ಉರಿಯುವ ಚಿತೆಯನ್ನೇರಿದ್ದಾರೆ. ಇಂಥ ಘಟನೆ ನಡೆದಿರುವುದು ಕಾಲಹಂದಿ

ಮಡದಿಯ ಅಗಲಿಕೆ ಸಹಿಸದೆ ಚಿತೆಯೇರಿದ ಗಂಡ| ಸತಿಯಲ್ಲ ಇದು ‘ಪತಿಸಹಗಮನ’ Read More »

ಹೆದ್ದಾರಿಯಿಂದ 40 ಮೀ. ಒಳಗಡೆ ಕಟ್ಟಡ ನಿರ್ಮಿಸುವಂತಿಲ್ಲ – ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ.ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಜಿಲ್ಲಾ ಹೆದ್ದಾರಿಯ 25 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಈ ಹಿಂದೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಕಟ್ಟಡ ರಹಿತ ವಲಯವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು 1999 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಆದೇಶಿಸಿತ್ತು.ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಉಡುಪಿಯ ಕಾಪು ಬಳಿ

ಹೆದ್ದಾರಿಯಿಂದ 40 ಮೀ. ಒಳಗಡೆ ಕಟ್ಟಡ ನಿರ್ಮಿಸುವಂತಿಲ್ಲ – ಹೈಕೋರ್ಟ್ ಮಹತ್ವದ ಆದೇಶ Read More »

ಮೈಸೂರು| ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್| ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ|

ಮೈಸೂರು, ಆಗಸ್ಟ್ 25: ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾಗಿರುವ ಸಾಂಸ್ಕೃತಿಕ‌ ನಗರಿ ಮೈಸೂರು ಇದೀಗ ಕ್ರೈಂ ಸಿಟಿಯಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಪೆನ್ಷನರ್ಸ್ ಪ್ಯಾರಡೈಸ್ ಎನಿಸಿದ್ದ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮೈಸೂರಿಗರನ್ನು ಬೆಚ್ಚಿಬೀಳಿಸಿದೆ. ಹೊರ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಗ್ಯಾಂಗ್ ರೇಪ್ ಪ್ರಕರಣ ಇದೀಗ ಮೈಸೂರಿಗೂ ವಕ್ಕರಿಸಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘೋರ ಘಟನೆ ಮೈಸೂರಿನಲ್ಲಿ ನಡೆದಿದೆ. ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ

ಮೈಸೂರು| ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್| ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ| Read More »

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ದಿನೇಶ್ ರೈ

ಮಂಗಳೂರು: ತಾಲಿಬಾನ್ ಗಳ ಕಪಿಮುಷ್ಠಿಗೆ ಸಿಲುಕಿರುವ ಅಪ್ಘಾನಿಸ್ತಾನದಿಂದ ಮರಳಿ ತಾಯ್ನಾಡಿಗೆ ಬಂದಿರುವ ಭಾರತೀಯರು ಅಲ್ಲಿನ ಪರಿಸ್ಥಿತಿಗಳ ಭಯಾನಕ ಸ್ಥಿತಿಗಳ ಬಗ್ಗೆ ತೆರೆದಿಟ್ಟಿದ್ದಾರೆ. ಗಳೂರಿನ ಬಜಪೆ ನಿವಾಸಿ ದಿನೇಶ್ ರೈ ಅವರು ನ್ಯಾಟೋ ಮಿಲಿಟರಿ ಪಡೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದು, ಅಪ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಆಗಮಿಸಿದ್ದಾರೆ . ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಅಪ್ಘಾನಿಸ್ತಾನದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಪಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ಹೊರಗಿನ ಜನರ ಯಾವುದೇ

ಫೈರಿಂಗ್ ಆಗುತ್ತಿದ್ದುದ್ದನ್ನು ಕಣ್ಣಾರೆ ನೋಡಿದ ದಿನೇಶ್ ರೈ Read More »

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಿದ ಮಹಾರಾಷ್ಟ್ರ ‌ಪೊಲೀಸ್

ನಾಸಿಕ್​: ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ ತಪ್ಪಾಗಿ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಕಪಾಳಕ್ಕೆ ಹೊಡೆಯಬೇಕು ಎನ್ನಿಸಿತ್ತು ಎಂದು ಏಕವಚನದಲ್ಲಿ, ಬಹಿರಂಗವಾಗಿ ಬೈದಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ್​ ರಾಣೆ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್​ ನಗರದಲ್ಲಿದ್ದ ನಾರಾಯಣ್ ರಾಣೆಯವರನ್ನು ನಾಸಿಕ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರ ವಿರುದ್ಧ ಅದಾಗಲೇ ಪುಣೆ, ನಾಸಿಕ್​​, ಮತ್ತು ರಾಯ್​ಗಡ್​ನ ಮಹಾದ್​​ನಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಮಧ್ಯೆ ಬಂಧನ ಅಥವಾ ಇನ್ಯಾವುದೇ ಬಲವಂತವಾಗಿ

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಬಂಧಿಸಿದ ಮಹಾರಾಷ್ಟ್ರ ‌ಪೊಲೀಸ್ Read More »

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು

ಕುಂದಾಪುರ: ಇಬ್ಬರು ಯುವಕರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನಪ್ಪಿದ ಘಟನೆ ಕುಂದಾಪುರದ ಅಲ್ಬಾಡಿ ಗ್ರಾಮದ ಗಂಟುಬೀಲು ಬಳಿ ಸಂಭವಿಸಿದೆ. ಅಲ್ಬಾಡಿ ಗ್ರಾಮದ ಮೋಹನ್ ನಾಯಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಮೃತಪಟ್ಟ ಯುವಕರು. ಇವರಿಬ್ಬರು ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಅವರು ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಕೂಲಿ ಕೆಲಸ ಮಾಡಲು ಹೋಗಿದ್ದು, ಬಳಿಕ ತಡವಾದರೂ ಹಿಂದಿರುಗದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಿದಾಗ ಅವರ ಮೃತದೇಹ

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು Read More »