ಸಚಿವರಿಗೆ ಪಿಡಿಒ ಕಾನೂನು ಪಾಠ: ಬುದ್ದಿಮಾತು ಹೇಳಿ ಓದಾರ್ಯ ಮೆರೆದ ಕೋಟ ವೈರಲ್ ಆದ ಸಂಭಾಷಣೆಯ ಆಡಿಯೋ ಇಲ್ಲಿದೆ
ಸಚಿವರೆಂದರೆ ಸಾಮಾನ್ಯವಾಗಿ ಅಧಿಕಾರಿ ವರ್ಗದವರು ಮಾತನಾಡಲೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬ ಪಿಡಿಒ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದಲ್ಲದೆ ಸಚಿವರಿಗೇ ಕಾನೂನು ಪಾಠ ಮಾಡಿದ ಘಟನೆ ನಡೆದಿದೆ. ಪಿಡಿಒ ರಿಂದ ಪಾಠ ಹೇಳಿಸಿಕೊಂಡ ಸಚಿವರು ಬುದ್ದಿಮಾತು ಹೇಳಿ ಕಳಿಸಿದ ಸ್ವಾರಸ್ಯ ಸಂಗತಿಯೊಂದು ಬೆಳಕಿಗೆ ಬಂದಿದೆ.ದ.ಕ ಜಿಲ್ಲೆಯ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತರವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಫೋನ್ ಮಾಡಿ ಕೋವಿಡ್ ಕಿಟ್ ವಿತರಣೆ ವಿಚಾರದಲ್ಲಿ ಚರ್ಚೆ ಮಾಡಿದ್ದಲ್ಲದೇ, ವಾಗ್ವಾದ ನಡೆಸಿದ ಆಡಿಯೋ ವೈರಲ್ ಆಗಿದೆ. […]