ರಾಜ್ಯ

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಿದೆ. ನೈಋತ್ಯ ಮುಂಗಾರು ಮಾರುತಗಳು ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸಲಿವೆ. ಈ ಕಾರಣದಿಂದ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಭಾನುವಾರ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ […]

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ Read More »

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್

ಬೆಂಗಳೂರು ಆಡಳಿತ ಪಕ್ಷದ ಶಾಸಕರು ಮತ್ತು ಸಂಸದರುಗಳು ಲಸಿಕೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ದುಬಾರಿ ಬೆಲೆಗೆ ಮಾರಾಟ ಮಾಡಿಸಿ ಲಾಭ ಪಡೆಯಲಾಗುತ್ತಿದೆ ಇಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಕನಿಷ್ಠ 900 ರಿಂದ 1200 ರೂ. ಹಣ ಪಡೆದು ಲಸಿಕೆಯನ್ನು ಜನಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು

“ತೇಜಸ್ವಿ ಸೂರ್ಯ ಹಾಗು ಮಾವ ರವಿಸುಬ್ರಹ್ಮಣ್ಯ ಲಸಿಕೆ ಮಾರಾಟಗಾರರು”: ಕಾಂಗ್ರೆಸ್ Read More »

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿಎಂ ಬಿಎಸ್‌ವೈ, ಎರಡನೇ ಹಂತದ ಕೋವಿಡ್ ಪ್ಯಾಕೇಜ್ ರೆಡಿ ಆಗುತ್ತಿದೆ. ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ ಕೋವಿಡ್ ಎರಡನೇ ಹಂತದ ಲಾಕ್‌ಡೌನ್ ಹಿನ್ನೆಲೆಯಲ್ಲಿ ೧೨೫೦ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಈ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಇದೀಗ ರಾಜ್ಯ ಸರ್ಕಾರ ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲು ನಿರ್ಧರಿಸಿದೆ ಎಂದಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಲಾಕ್ಡೌನ್ ವಿಸ್ತರಣೆ: ಇನ್ನು ಲಾಕ್‌ಡೌನ್

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ Read More »

ಬಿರುಕು ಬಿಟ್ಟಿದೆ ಕೆ ಆರ್ ಎಸ್ | ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿ: ಸುಮಲತ

ಮಂಡ್ಯ: ಐತಿಹಾಸಿಕ ಕೃಷ್ಣರಾಜಸಾಗರ ಜಲಾಶಯ ಬಿರುಕು ಬಿಟ್ಟಿರುವುದು ನಿಜ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಕೆಆರ್ ಎಸ್ ಸುತ್ತಮುತ್ತ ಅಕ್ರಮವಾಗಿ ನಡೆಯುತ್ತಿರುವ ಭಾರಿ ಗಣಿಗಾರಿಕೆಯಿಂದ ಈ ಅಪಾಯದ ಸ್ಥಿತಿ ಬಂದೊದಗಿದೆ ಎಂದಿದ್ದಾರೆ. ಅಣೆಕಟ್ಟು ಬಿರುಕು ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇದೆ. ಸತ್ಯಾಸತ್ಯತೆ ತಿಳಿಯಬೇಕಾದರೆ ತಜ್ಞರಿಂದ ಸಮಗ್ರ ಪರಿಶೀಲನೆ ನಡೆಸಬೇಕು. ಇದಕ್ಕೆ ಸ್ಥಳೀಯ ರಾಜಕಾರಣ ಅಡ್ಡಿ ಮಾಡುತ್ತಿದೆ. ಜಿಲ್ಲೆಯ ಜೀವನಾಡಿಯ ವಾಸ್ತವತೆ ಜನರಿಗೆ ತಿಳಿಯಬೇಕು. ತನಿಖೆಗೆ ಅಡ್ಡಿಪಡಿಸಿದರೆ ವರದಿ ತರುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾ ಸಂಸದೆ

ಬಿರುಕು ಬಿಟ್ಟಿದೆ ಕೆ ಆರ್ ಎಸ್ | ತನಿಖೆಗೆ ಸ್ಥಳೀಯ ರಾಜಕಾರಣ ಅಡ್ಡಿ: ಸುಮಲತ Read More »

ಖಾಸಗಿ ಸಾರಿಗೆ ವಾಹನ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಮೇ 2021ರ ಒಂದು ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ

ಖಾಸಗಿ ಸಾರಿಗೆ ವಾಹನ ಮಾಲಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ Read More »

ಕನ್ನಡದಲ್ಲಿ ನ್ಯಾಯ ಬರೆಯುತ್ತಿದ್ದ ಕೆ.ವಿ ವಾಸುದೇವ ಮೂರ್ತಿ ಇನ್ನಿಲ್ಲ

ಬೆಂಗಳೂರು(ಮೇ.30): ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಆದೇಶಗಳನ್ನು ಬರೆಸಿದ ಕೀರ್ತಿಗೆ ಭಾಜನರಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಹೃದಯಾಘಾತದಿಂದ ಶನಿವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಹನುಮಂತನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಸಮಾಜಸೇವೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಕಾನೂನು ಪದವಿ ಪಡೆದ ಬಳಿಕ ಶಿವಮೊಗ್ಗದ ನ್ಯಾಯವಾದಿ ವೆಂಕಟರಾಮಾಶಾಸ್ತಿರಗಳ ಕಚೇರಿಯಲ್ಲಿ

ಕನ್ನಡದಲ್ಲಿ ನ್ಯಾಯ ಬರೆಯುತ್ತಿದ್ದ ಕೆ.ವಿ ವಾಸುದೇವ ಮೂರ್ತಿ ಇನ್ನಿಲ್ಲ Read More »

ಈ ವಾರ ನಿಮ್ಮ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1) ಮುಂದಿನ ಬದುಕಿನ ಬಗ್ಗೆ ಸ್ವಲ್ಪ ಚಿಂತೆ ಮಾಡುವಿರಿ. ಸರಿಯಾದ ನಿರ್ಣಯದಿಂದ ಮುಂದಿನ ಬದುಕಿಗೊಂದು ದಾರಿ ಕಂಡುಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಸ್ನೇಹಿತರಿಂದ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆತು ನೆಮ್ಮದಿ ಕಾಣುವಿರಿ. ಹಿರಿಯರಿಂದ ಬಂದ ಸಲಹೆಗಳನ್ನು ನಿರಾಕರಿಸಬೇಡಿ. ದಿಢೀರ್‌ ಶ್ರೀಮಂತರಾಗಲು ಹೋಗಿ ಅಪಕೀರ್ತಿ ಸಂಭವಿಸಬಹುದು. ಪ್ರೀತಿಪಾತ್ರರು ನಿಮ್ಮ ನಿರ್ಧಾರದ ವಿರುದ್ಧ ತಗಾದೆ ತೆಗೆಯಬಹುದು. ಬುದ್ಧಿಮತ್ತೆಯಿಂದ ಕಾರ್ಯತಂತ್ರಗಳನ್ನು ರೂಪಿಸಿದಲ್ಲಿ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮನೆಯಲ್ಲಿ ಇದ್ದಂತಹ

ಈ ವಾರ ನಿಮ್ಮ ಭವಿಷ್ಯ Read More »

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು?

ಬೆಂಗಳೂರು : ಜೂನ್ 7 ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಕುರಿತಂತೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಜನರು ಸಹಕರಿಸಿದರೆ ಲಾಕ್‌ಡೌನ್ ಮುಂದುವರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿರುವ ಅವರು ಗೃಹ ಕಚೇರಿ ಕೃಷ್ಣದಲ್ಲಿ ಐದು ಜಿಲ್ಲೆಗಳ ಜನಪ್ರತಿನಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದರು. ಲಾಕ್​ಡೌನ್ ಜೂನ್ 7ರವರೆಗೂ ಮುಂದುವರೆಯಲಿದ್ದು, ಅಲ್ಲಿಯವರೆಗೂ ಇರುತ್ತದೆ. ಅಲ್ಲಿವರೆಗೂ ಬಿಗಿಯಾದ ಕ್ರಮ ಮುಂದುವರೆಯಲಿದೆ. ಕೊರೊನಾ ಕಡಿಮೆ ಆದರೆ ಲಾಕ್​ಡೌನ್ ಮುಂದುವರಿಸುವುದಿಲ್ಲ. ಜನ ಸಹಕರಿಸಿದರೆ ಲಾಕ್​ಡೌನ್ ಮುಂದುವರೆಸುವ ಪ್ರಶ್ನೆಯೇ

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು? Read More »

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….?

ಬೆಂಗಳೂರು: ರಾಮಮೂರ್ತಿ ನಗರ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳ ಬಳಿ ಆಧಾರ ಕಾರ್ಡ್ ಪತ್ತೆಯಾಗಿದೆ. ಆದರೆ ಈ ಬಾಂಗ್ಲಾ ಪ್ರಜೆಗಳಿಗೆ ಆಧಾರ ಕಾರ್ಡ್ ಸಿಕ್ಕಿದ್ದು ಹೇಗೆ..? ಎಂಬುದನ್ನು ಬೆಂಗಳೂರು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಬೆನ್ನು ಬಿದ್ದಿದ್ದಾರೆ. ಅಕ್ರಮವಾಗಿ ಆಧಾರ ಕಾರ್ಡ್ ಮಾಡಿಕೊಟ್ಟವರಿಗಾಗಿ ವಿಶೇಷ ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಅಕ್ರಮ ಜಾಲ ಕೆಲಸ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಬಾಂಗ್ಲಾದಿಂದ

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….? Read More »

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು

ಗದಗ: ತನ್ನ ತವರು ಜಿಲ್ಲೆ ಗದಗಕ್ಕೆ ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಕರ್ನಾಟಕ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ನೆರವು ನೀಡಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಗದಗ ಜಿಲ್ಲೆಗೆ ಸುಮಾರು 40 ಲಕ್ಷ ರೂ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಅವರು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌, 84 ಆಕ್ಸಿಜನ್‌ ಸಿಲಿಂಡರ್‌, 2000 ಕೋವಿಡ್‌

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು Read More »